ಅತ್ಯಂತ ಶ್ರೀಮಂತ ಬಾಲ ನಟಿ ಯಾರು ಗೊತ್ತಾ? ಇವರ ಆಸ್ತಿ ಎಷ್ಟು?

| Updated By: ರಾಜೇಶ್ ದುಗ್ಗುಮನೆ

Updated on: Sep 15, 2023 | 3:03 PM

ಸಿನಿಮಾ, ಧಾರಾವಾಹಿ, ವೆಬ್ ಸೀರಿಸ್​ಗಳಲ್ಲಿ ಸಣ್ಣ ಮಕ್ಕಳ ಪಾತ್ರವೂ ಇರುತ್ತದೆ. ಕೆಲವರು ಭರ್ಜರಿ ಜನಪ್ರಿಯತೆ ಪಡೆದುಕೊಳ್ಳುತ್ತಾರೆ. ಆ ಸಾಲಿನಲ್ಲಿ ಸಾರಾ ಅರ್ಜುನ್ ಕೂಡ ಒಬ್ಬರು. ತಮಿಳುನಾಡು ಮೂಲದ ಅವರು ಅತಿ ಶ್ರೀಮಂತ ಬಾಲ ಕಲಾವಿದೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರ ಆಸ್ತಿ ಬರೋಬ್ಬರಿ 10 ಕೋಟಿ ರೂಪಾಯಿ ಎನ್ನಲಾಗಿದೆ.

ಅತ್ಯಂತ ಶ್ರೀಮಂತ ಬಾಲ ನಟಿ ಯಾರು ಗೊತ್ತಾ? ಇವರ ಆಸ್ತಿ ಎಷ್ಟು?
ಸಾರಾ ಅರ್ಜುನ್
Follow us on

ಚಿತ್ರರಂಗ ದೊಡ್ಡ ಇಂಡಸ್ಟ್ರಿಯಾಗಿ ಬೆಳೆದು ನಿಂತಿದೆ. ಪ್ರತಿ ವಾರ ಬೇರೆ ಬೇರೆ ಭಾಷೆಗಳಲ್ಲಿ ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಇದರ ಜೊತೆಗೆ ಹೊಸ ಕಥೆಗಳೊಂದಿಗೆ ಧಾರಾವಾಹಿಗಳು ಕೂಡ ಪ್ರಸಾರ ಕಾಣುತ್ತವೆ. ಇಷ್ಟೇ ಅಲ್ಲದೆ, ಕಿರು ಚಿತ್ರ, ವೆಬ್ ಸೀರಿಸ್ (Web Series) , ಮ್ಯೂಸಿಕ್ ವಿಡಿಯೋಗಳು ಕೂಡ ಇವೆ. ಮನರಂಜನಾ ಕ್ಷೇತ್ರದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವ್ಯಕ್ತಿಗಳಿಗೂ ಅವಕಾಶ ಸಿಗುತ್ತದೆ. ಒಂದೊಮ್ಮೆ ತಮ್ಮನ್ನು ತಾವು ಸಾಬೀತು ಪಡಿಸಿಕೊಂಡರೆ ಅವರಿಗೆ ಕೋಟಿ ಕೋಟಿ ರೂಪಾಯಿ ಸಂಭಾವನೆ ಸಿಗುತ್ತದೆ. ಭಾರತದ ಅತೀ ಶ್ರೀಮಂತ ಬಾಲ ಕಲಾವಿದೆ ಯಾರು ಅನ್ನೋದು ಗೊತ್ತಾ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಸಿನಿಮಾ, ಧಾರಾವಾಹಿ, ವೆಬ್ ಸೀರಿಸ್​ಗಳಲ್ಲಿ ಸಣ್ಣ ಮಕ್ಕಳ ಪಾತ್ರವೂ ಇರುತ್ತದೆ. ಕೆಲವರು ಭರ್ಜರಿ ಜನಪ್ರಿಯತೆ ಪಡೆದುಕೊಳ್ಳುತ್ತಾರೆ. ಆ ಸಾಲಿನಲ್ಲಿ ಸಾರಾ ಅರ್ಜುನ್ ಕೂಡ ಒಬ್ಬರು. ತಮಿಳುನಾಡು ಮೂಲದ ಅವರು ಅತಿ ಶ್ರೀಮಂತ ಬಾಲ ಕಲಾವಿದೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರ ಆಸ್ತಿ ಬರೋಬ್ಬರಿ 10 ಕೋಟಿ ರೂಪಾಯಿ ಎನ್ನಲಾಗಿದೆ. ಅವರು ತಮಿಳು ಹಾಗೂ ಹಿಂದಿ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಾರೆ. ಅನೇಕ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರು ಪ್ರತಿ ಸಿನಿಮಾಗೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

ಸಾರಾ ಹುಟ್ಟಿದ್ದು 2004ರಲ್ಲಿ. ಅಂದರೆ ಅವರಿಗೆ ಈಗ 19 ವರ್ಷ ವಯಸ್ಸು. ಅವರು ನಟನೆ ಶುರು ಮಾಡಿದ್ದು 5 ವರ್ಷ ಇದ್ದಾಗ. ‘ದೈವ ತಿರುಮಂಗಳ್​’ ಅವರ ನಟನೆಯ ಮೊದಲ ಸಿನಿಮಾ. ಅವರು ಹಿಂದಿ ಸಿನಿಮಾ ‘404’ ಅಲ್ಲೂ ಟಿಸಿದ್ದಾರೆ. ಎರಡೂ ಸಿನಿಮಾಗಳ ನಟನೆಗೆ ಮೆಚ್ಚುಗೆ ಸಿಕ್ಕಿದೆ. ‘ಜಜ್ಬಾ’ ಸಿನಿಮಾದಲ್ಲಿ ಐಶ್ವರ್ಯಾ ರೈ ಬಚ್ಚನ್ ಜೊತೆ, ‘ಜೈ ಹೋ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ‘ಏಕ್ ಥಿ ದಾಯನ್’ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಜೊತೆ ಅವರು ನಟಿಸಿದ್ದರು.

ಮಣಿ ರತ್ನಂ ನಟನೆಯ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಸಾರಾ ಬಣ್ಣ ಹಚ್ಚಿದ್ದರು. ಐಶ್ವರ್ಯಾ ರೈ ಬಚ್ಚನ್ ಅವರು ನಿರ್ವಹಿಸಿದ್ದ ನಂದಿನಿಯ ಬಾಲ್ಯದ ಪಾತ್ರವನ್ನು ಸಾರಾ ಅವರೇ ನಿರ್ವಹಿಸಿದ್ದರು.

ತೆಲುಗು ಹಾಗೂ ಹಿಂದಿಯಲ್ಲಿ ಫೇಮಸ್ ಆದ ರಾಜ್ ಅರ್ಜುನ್ ಮಗಳು ಸಾರಾ ಅರ್ಜುನ್. ಅನುರಾಗ್ ಕಶ್ಯಪ್ ನಿರ್ದೇಶನದ ‘ಬ್ಲಾಕ್ ಫ್ರೈಡೆ’ ಸಿನಿಮಾದಲ್ಲಿ ಅವರು ನಟಿಸಿದ್ದರು. ‘ರಾಯೀಸ್’, ‘ರೌಡಿ ರಾಥೋಡ್’, ‘ಸೀಕ್ರೆಟ್ ಸೂಪರ್​ಸ್ಟಾರ್’, ‘ಡಿಯರ್ ಕಾಮ್ರೇಡ್​’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ: ನಿಮಗೆ ಭೂತ ಕಂಡಿತ್ತಾ? ಈ ಸೆಲೆಬ್ರಿಟಿಗಳಿಗೆ ಆಗಿತ್ತು ಹಾರರ್​ ಅನುಭವ

ಸಾರಾ ಅವರು ಕೆಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಇದ್ದಾರೆ. ‘ಪಾತ್: ದಿ ಲೆಸನ್ ಆ್ಯಂಡ್ ಕೊಟೇಷನ್ ಗ್ಯಾಂಗ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಳಪತಿ ವಿಜಯ್ ನಟನೆಯ ಸಿನಿಮಾದಲ್ಲೂ ಅವರು ಬಣ್ಣ ಹಚ್ಚುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ