ಗಂಡನಿಂದ ದೂರಾದ ಬೆನ್ನಲ್ಲೇ ‘ಕಾನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೌನಿ ರಾಯ್ ಮಿಂಚಿಂಗ್

ಇತ್ತೀಚೆಗಷ್ಟೇ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಅವರು ತಮ್ಮ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವುದಾಗಿ ಪ್ರಕಟಿಸಿದ್ದರು. ಅವರಿಬ್ಬರ ವಿಚ್ಛೇದನದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಮೌನಿ ರಾಯ್ ಅವರು ಕಾನ್ ಚಿತ್ರೋತ್ಸವಕ್ಕೆ ತೆರಳಿದ್ದಾರೆ.

ಗಂಡನಿಂದ ದೂರಾದ ಬೆನ್ನಲ್ಲೇ ‘ಕಾನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೌನಿ ರಾಯ್ ಮಿಂಚಿಂಗ್
Mouni Roy

Updated on: May 19, 2026 | 3:07 PM

ತಮ್ಮ ವೈಯಕ್ತಿಕ ಜೀವನದ ಏರಿಳಿತಗಳ ನಡುವೆಯೂ ಬಾಲಿವುಡ್ ನಟಿ ಮೌನಿ ರಾಯ್ (Mouni Roy) ವೃತ್ತಿಜೀವನಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಉದ್ಯಮಿ ಪತಿ ಸೂರಜ್ ನಂಬಿಯಾರ್ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದ ಕೇವಲ ಕೆಲವೇ ದಿನಗಳಲ್ಲಿ, ಮೌನಿ ರಾಯ್ ಪ್ರತಿಷ್ಠಿತ ‘ಕಾನ್ ಫಿಲ್ಮ್ ಫೆಸ್ಟಿವಲ್’ (Cannes Film Festival) ರೆಡ್ ಕಾರ್ಪೆಟ್ ಮೇಲೆ ಮಿಂಚಲು ಫ್ರಾನ್ಸ್‌ಗೆ ಹಾರಿದ್ದಾರೆ. ಅಲ್ಲಿಂದ ಕೆಲವು ಸುಂದರವಾದ ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.

ಫ್ರೆಂಚ್ ರಿವೇರಾದಿಂದ ತಮ್ಮ ಗ್ಲಾಮರಸ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಮೌನಿ ರಾಯ್, ‘ಕಾನ್ ಮತ್ತು ಗೊಂದಲಗಳು! ಶುಭೋದಯ’ ಎಂದು ಕ್ಯಾಪ್ಷನ್ ನೀಡಿದಾರೆ. ಈ ಮೂಲಕ ಯಾವುದೇ ಪರಿಸ್ಥಿತಿಯಲ್ಲೂ ‘ಶೋ ಮಸ್ಟ್ ಗೋ ಆನ್’ ಎಂಬುದನ್ನು ನಟಿ ಸಾಬೀತುಪಡಿಸಿದ್ದಾರೆ. ಅವರ ಫೋಟೋಗಳು ವೈರಲ್ ಆಗುತ್ತಿವೆ.

‘ಬ್ರಹ್ಮಾಸ್ತ್ರ’ ಸಿನಿಮಾ ಖ್ಯಾತಿಯ ಮೌನಿ ರಾಯ್, ಕಾನ್ ಸಿನಿಮೋತ್ಸವದಲ್ಲಿ ಕಪ್ಪು ಮತ್ತು ಬಿಳುಪು ಉಡುಪಿನಲ್ಲಿ ಕಣ್ಮನ ಸೆಳೆದಿದ್ದಾರೆ. ಅವರು ಬಿಳಿ ಬಣ್ಣದ ಹಾಲ್ಟರ್-ಶೈಲಿಯ ಕಾಲರ್ ಹೊಂದಿರುವ ಕಪ್ಪು ಬಣ್ಣದ ಮಿನಿ ಡ್ರೆಸ್ ಧರಿಸಿದ್ದಾರೆ. ಫ್ರಾನ್ಸ್‌ನ ತಂಪಾದ ಹವಾಮಾನಕ್ಕೆ ತಕ್ಕಂತೆ ಈ ಡ್ರೆಸ್ ಜೊತೆಗೆ ಸುಂದರವಾದ ಕೋಟ್, ಕಪ್ಪು ಬಣ್ಣದ ಸ್ಟಾಕಿಂಗ್ಸ್ ಹಾಗೂ ಬೂಟುಗಳನ್ನು ಧರಿಸಿ ಹೈ-ಫ್ಯಾಶನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮೌನಿ ರಾಯ್ ಅವರು ತಮ್ಮ ಹೊಸ ಸಿನಿಮಾ ‘ಬಾಂಬೆ ಸ್ಟೋರೀಸ್’ ಪ್ರದರ್ಶನಕ್ಕಾಗಿ ಸಹ-ನಟಿ ಅನುಪ್ರಿಯಾ ಗೊಯೆಂಕಾ ಅವರೊಂದಿಗೆ ಕಾನ್ ಸಿನಿಮೋತ್ಸವಕ್ಕೆ ತೆರಳಿದ್ದಾರೆ. 2023ರಲ್ಲಿ ಮೊದಲ ಬಾರಿಗೆ ಕಾನ್ ಚಿತ್ರೋತ್ಸವಕ್ಕೆ ಬಂದಿದ್ದ ಅವರಿಗೆ ಈಗ 2ನೇ ಬಾರಿ ಅವಕಾಶ ಸಿಕ್ಕಿದೆ.

ಇದನ್ನೂ ಓದಿ: ನಾವು ದೂರಾಗುತ್ತಿದ್ದೇವೆ: ಡಿವೋರ್ಸ್ ವಿಷಯ ಒಪ್ಪಿಕೊಂಡ ಮೌನಿ ರಾಯ್, ಸೂರಜ್ ನಂಬಿಯಾರ್

ಇತ್ತೀಚೆಗಷ್ಟೇ ಮೌನಿ ರಾಯ್ ಮತ್ತು ಅವರ ಪತಿ ಸೂರಜ್ ನಂಬಿಯಾರ್ ವಿಚ್ಛೇದನದ ಸುದ್ದಿ ಹೊರಬಿದ್ದಿತ್ತು. ಈ ಬಳಿಕ ಹರಿದಾಡುತ್ತಿದ್ದ ವದಂತಿಗಳಿಗೆ ಸೂರಜ್ ನಂಬಿಯಾರ್ ಬ್ರೇಕ್ ಹಾಕಿದ್ದಾರೆ. ‘ನಮ್ಮ ವಿಚ್ಛೇದನದ ಬಗ್ಗೆ ಹರಡುತ್ತಿರುವ ಸುದ್ದಿಗಳು ತೀರಾ ದುರುದ್ದೇಶಪೂರಿತವಾಗಿವೆ. ನಮ್ಮ ನಡುವೆ ಯಾವುದೇ ಜೀವನಾಂಶದ ವಿವಾದಗಳಿಲ್ಲ ಅಥವಾ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲ. ನಾವಿಬ್ಬರೂ ಪರಸ್ಪರ ಗೌರವದಿಂದಲೇ ದೂರಾಗಲು ನಿರ್ಧರಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us