AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಶಾ ಪಟಾನಿ-ಮೌನಿ ರಾಯ್​ ಈ ರೀತಿ ಸ್ನೇಹ; ಇದೇ ಕಾರಣಕ್ಕೆ ವಿಚ್ಛೇದನ ನೀಡಿದ್ರಾ ಸೂರಜ್?

ಮೌನಿ ರಾಯ್ ಮತ್ತು ದಿಶಾ ಪಟಾನಿ ಯಾವಾಗಲೂ ಜೊತೆಯಾಗಿ ಇರುತ್ತಾರೆ. ಮೌನಿ ರಾಯ್ ಅವರು ಪತಿ ಸೂರಜ್ ನಂಬಿಯಾರ್​ಗೆ ವಿಚ್ಛೇದನ ನೀಡಿದ್ದಾರೆ. ಇದಕ್ಕೆ ದಿಶಾ ಪಟಾನಿ ಕಾರಣ ಎಂದು ಹಲವರು ಆರೋಪಿಸುತ್ತಿದ್ದಾರೆ. ಅಲ್ಲದೇ, ದಿಶಾ ಮತ್ತು ಮೌನಿ ರಾಯ್ ನಡುವಿನ ಸ್ನೇಹವನ್ನು ಅನುಮಾನದ ದೃಷ್ಟಿಯಿಂದ ಕೆಲವರು ನೋಡುತ್ತಿದ್ದಾರೆ.

ದಿಶಾ ಪಟಾನಿ-ಮೌನಿ ರಾಯ್​ ಈ ರೀತಿ ಸ್ನೇಹ; ಇದೇ ಕಾರಣಕ್ಕೆ ವಿಚ್ಛೇದನ ನೀಡಿದ್ರಾ ಸೂರಜ್?
Mouni Roy, Disha Patani
ಮದನ್​ ಕುಮಾರ್​
|

Updated on: May 15, 2026 | 4:34 PM

Share

ಬಾಲಿವುಡ್ ಹಾಗೂ ಕಿರುತೆರೆಯ ಖ್ಯಾತ ನಟಿ ಮೌನಿ ರಾಯ್ (Mouni Roy) ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಉದ್ಯಮಿ ಸೂರಜ್ ನಂಬಿಯಾರ್ ಅವರೊಂದಿಗೆ ವಿಚ್ಛೇದನ (Divorce) ಪಡೆಯುತ್ತಿರುವುದಾಗಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ, ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಶುರುವಾಗಿದ್ದು, ಮೌನಿ ರಾಯ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಈ ಡಿವೋರ್ಸ್ ವಿಷಯದಲ್ಲಿ ಮೌನಿ ರಾಯ್ ಅವರ ಆಪ್ತ ಗೆಳತಿ, ನಟಿ ದಿಶಾ ಪಟಾನಿ (Disha Patani) ಹೆಸರನ್ನು ಎಳೆದು ತಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಕಳೆದ ಕೆಲವು ದಿನಗಳಿಂದ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದರಿಂದ ಇಬ್ಬರ ಮಧ್ಯೆ ಬಿರುಕು ಮೂಡಿದೆ ಎಂಬ ವದಂತಿ ಹರಡಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತಾವು ಬೇರೆಯಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ. ‘ನಮ್ಮ ವೈಯಕ್ತಿಕ ಆದ್ಯತೆಗಳ ಬದಲಾವಣೆಯಿಂದಾಗಿ ನಾವು ಪರಸ್ಪರ ಗೌರವದಿಂದಲೇ ಪ್ರತ್ಯೇಕ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ, ಯಾವುದೇ ಸುಳ್ಳು ಕಥೆಗಳನ್ನು ಹಬ್ಬಿಸಬೇಡಿ’ ಎಂದು ಮೌನಿ ಮತ್ತು ಸೂರಜ್ ಮನವಿ ಮಾಡಿಕೊಂಡಿದ್ದಾರೆ.

ಮೌನಿ ರಾಯ್ ಅವರು ವಿಚ್ಛೇದನದ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ನಟಿ ದಿಶಾ ಪಟಾನಿ ಅವರನ್ನೇ ಗುರಿಯಾಗಿಸಿಕೊಂಡು ಟ್ರೋಲ್ ಮಾಡಲು ಆರಂಭಿಸಿದರು. ಮೌನಿ ಮತ್ತು ದಿಶಾ ಇಬ್ಬರೂ ಅತ್ಯಂತ ಆಪ್ತ ಸ್ನೇಹಿತೆಯರಾಗಿದ್ದು, ಹೆಚ್ಚಾಗಿ ಜೊತೆಯಾಗಿಯೇ ಪಾರ್ಟಿ, ಪ್ರವಾಸಗಳಿಗೆ ಹೋಗುತ್ತಿರುತ್ತಾರೆ. ದಿಶಾ ಪಟಾನಿ ಅವರೇ ಈ ದಂಪತಿಯ ಸಂಸಾರ ಒಡೆಯಲು ಕಾರಣ ಎಂದು ನೆಟ್ಟಿಗರು ಯಾವುದೇ ಆಧಾರವಿಲ್ಲದೆ ಆರೋಪಿಸಲು ಶುರು ಮಾಡಿದರು.

‘ಮೌನಿ ಮತ್ತು ಸೂರಜ್ ನಡುವೆ ನೀನೇ ಜಗಳ ತಂದಿಟ್ಟೆ’ ಎಂದು ಕೆಲವರು ಆರೋಪ ಮಾಡಿದರೆ, ಇನ್ನೂ ಕೆಲವರು ತೀರಾ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಮೌನಿ ರಾಯ್ ಮತ್ತು ದಿಶಾ ಪಟಾನಿ ಅವರ ಸ್ನೇಹವನ್ನು ಕೆಲವರು ಸಲಿಂಗ ಕಾಮ ಇರಬಹುದು ಎಂದು ಕೂಡ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಹಲವು ಮೀಮ್ ಪೇಜ್​ಗಳಲ್ಲಿ ಈ ರೀತಿ ಟ್ರೋಲ್ ಮಾಡಲಾಗಿದೆ.

ಇದನ್ನೂ ಓದಿ: ನಾವು ದೂರಾಗುತ್ತಿದ್ದೇವೆ: ಡಿವೋರ್ಸ್ ವಿಷಯ ಒಪ್ಪಿಕೊಂಡ ಮೌನಿ ರಾಯ್, ಸೂರಜ್ ನಂಬಿಯಾರ್

ತಮ್ಮ ಡಿವೋರ್ಸ್ ಪೋಸ್ಟ್‌ನಲ್ಲಿ ಅತಿಯಾದ ನೆಗೆಟಿವಿಟಿ ಮತ್ತು ಗೆಳತಿ ದಿಶಾ ಪಟಾನಿ ವಿರುದ್ಧ ಹರಿದು ಬರುತ್ತಿದ್ದ ಟ್ರೋಲ್‌ಗಳನ್ನು ತಡೆಯಲು ಮೌನಿ ರಾಯ್ ತಕ್ಷಣವೇ ಆ ಪೋಸ್ಟ್‌ನ ಕಮೆಂಟ್ಸ್ ಅನ್ನು ಆಫ್ ಮಾಡಿದರು. ಆದರೂ ಬಿಡದ ನೆಟ್ಟಿಗರು ಮೌನಿ ರಾಯ್ ಅವರ ಹಳೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ಹೋಗಿ ದಿಶಾ ವಿರುದ್ಧ ಕಮೆಂಟ್ ಮಾಡಲು ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ