‘ಆಪರೇಷನ್ ಸಿಂದೂರ್’ ಖಂಡಿಸಿದ ಪಾಕ್ ನಟ ಫವಾದ್ ಖಾನ್; ಭಾರತದಲ್ಲಿ ಛೀಮಾರಿ

ಭಾರತದ ಸಿನಿಮಾಗಳಲ್ಲಿ ನಟಿಸಿರುವ ಪಾಕಿಸ್ತಾನಿ ನಟ ಫವಾದ್ ಖಾನ್​ ನೀಡಿದ ಒಂದು ಹೇಳಿಕೆಗೆ ಖಂಡನೆ ವ್ಯಕ್ತವಾಗಿದೆ. ‘ಆಪರೇಷನ್ ಸಿಂದೂರ್’ ಬಗ್ಗೆ ‘ನಾಚಿಕೆಗೇಡು ದಾಳಿ’ ಎಂದು ಫವಾದ್ ಖಾನ್ ಹೇಳಿದ್ದಾರೆ. ಫವಾದ್ ಖಾನ್ ಹೇಳಿಕೆಗೆ ಭಾರತದ ಅನೇಕ ಸೆಲೆಬ್ರಿಟಿಗಳು ಮತ್ತು ನೆಟ್ಟಿಗರು ತಿರುಗೇಟು ನೀಡುತ್ತಿದ್ದಾರೆ.

‘ಆಪರೇಷನ್ ಸಿಂದೂರ್’ ಖಂಡಿಸಿದ ಪಾಕ್ ನಟ ಫವಾದ್ ಖಾನ್; ಭಾರತದಲ್ಲಿ ಛೀಮಾರಿ
Fawad Khan

Updated on: May 08, 2025 | 7:15 PM

ಪಾಕ್ ನಟ ಫವಾದ್ ಖಾನ್ (Fawad Khan) ಅವರು ಭಾರತದ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಭಾರತದಲ್ಲಿ ಅವರಿಗೆ ಅಭಿಮಾನಿಗಳು ಇದ್ದಾರೆ. ಆದರೆ ಭಾರತ ಮತ್ತು ಪಾಕಿಸ್ತಾನ (Pakistan) ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿರುವುದರಿಂದ ಪಾಕ್ ನಟರನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಸದ್ಯ ಆಗುತ್ತಿರುವ ಘಟನೆಗಳ ಬಗ್ಗೆ ಎರಡೂ ದೇಶದ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಭಾರತ ನಡೆಸಿದ ‘ಆಪರೇಷನ್ ಸಿಂದೂರ್’ (Operation Sindoor) ಬಗ್ಗೆ ಫವಾದ್ ಖಾನ್ ಅವರು ಹೇಳಿಕೆ ನೀಡಿದ್ದು, ಅವರ ಮಾತಿಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಪಹಲ್ಗಾಮ್​ನಲ್ಲಿ ಉಗ್ರರು ಅಮಾಯಕರ ಪ್ರಾಣವನ್ನು ಬಲಿ ತೆಗೆದುಕೊಂಡರು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ಭಾರತ ದಾಳಿ ಮಾಡಿತು. ‘ಆಪರೇಷನ್ ಸಿಂದೂರ್’ ಹೆಸರಿನಲ್ಲಿ ನಡೆದ ಈ ದಾಳಿಯನ್ನು ಫವಾದ್ ಖಾನ್ ಖಂಡಿಸಿದ್ದಾರೆ. ‘ಎಕ್ಸ್’ ಖಾತೆಯಲ್ಲಿ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ನಾಚಿಕೆಗೇಡು ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ನನ್ನ ಸಂತಾಪಗಳು. ಮಡಿದವರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ. ಉರಿಯುವ ಬೆಂಕಿಗೆ ತುಪ್ಪ ಸುರಿಯಬೇಡಿ ಅಂತ ನಾನು ಎಲ್ಲರಲ್ಲೂ ಪ್ರಾರ್ಥಿಸುತ್ತೇನೆ’ ಎಂದು ಫವಾದ್ ಖಾನ್ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ
ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ರೇಖಾಚಿತ್ರ ಬಿಡುಗಡೆ
ಪಾಕ್ ಸೇನೆಗೆ ನಡುಕ ಶುರು: ಉಪಗ್ರಹ ಚಿತ್ರಗಳಿಂದ ಬಹಿರಂಗವಾಯ್ತು ರಹಸ್ಯ
ಮೆಹಂದಿ ಮಾಸುವ ಮುನ್ನವೇ ನವವಿವಾಹಿತೆಯ ಕುಂಕುಮ ಅಳಿಸಿದ ಉಗ್ರರು
ಪಹಲ್ಗಾಮ್ ದಾಳಿ: ಅಜಿತ್ ದೋವಲ್, ಜೈಶಂಕರ್ ಭೇಟಿಯಾದ ಪ್ರಧಾನಿ ಮೋದಿ

ಫವಾದ್ ಖಾನ್ ಅವರು ‘ನಾಚಿಕೆಗೇಡು ದಾಳಿ’ ಎಂದು ಹೇಳಿದ್ದರಿಂದ ಭಾರತದ ಸೆಲೆಬ್ರಿಟಿಗಳು ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. ‘ನಿನ್ನಂಥವರು ಭಾರತದ ಸಿನಿಮಾದಲ್ಲಿ ಕೆಲಸ ಮಾಡಿದ್ದು ನಾಚಿಕೆಗೇಡು’ ಎಂದು ನಟಿ ರೂಪಾಲಿ ಗಂಗೂಲಿ ಅವರು ತಿರುಗೇಟು ನೀಡಿದ್ದಾರೆ. ಅದೇ ರೀತಿ ನೆಟ್ಟಿಗರು ಕೂಡ ಫವಾದ್ ಖಾನ್​ಗೆ ಛೀಮಾರಿ ಹಾಕಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಗ್ಗೆ ಪಾಕ್ ನಟನ ಅಭಿಪ್ರಾಯವೇನು? ದೂಷಿಸಿದ್ದು ಯಾರನ್ನು?

‘ನಿನ್ನ ಲಾಭಕ್ಕಾಗಿ ಭಾರತವನ್ನು ಬಳಸಿಕೊಂಡು ಈಗ ಇಂಥ ಹೇಳಿಕೆ ನೀಡುತ್ತಿದ್ದೀಯ. ನಿನ್ನ ದೇಶದವರು ಅಮಾಯಕ ಪ್ರವಾಸಿಗರನ್ನು ಕೊಂದಿದ್ದು ಸರಿಯೇ?’ ಎಂದು ನೆಟ್ಟಿಗರೊಬ್ಬರು ಫವಾದ್​ ಖಾನ್​ಗೆ ಪ್ರಶ್ನೆ ಎಸೆದಿದ್ದಾರೆ. ‘ಇಂಥವನಿಗೆ ಬಾಲಿವುಡ್ ಅವಕಾಶ, ಹೆಸರು ಮತ್ತು ಹಣವನ್ನು ನೀಡಿದೆ’ ಎಂಬ ಕಮೆಂಟ್ ಕೂಡ ಬಂದಿದೆ. ಫವಾದ್ ಖಾನ್ ನಟಿಸಿದ್ದ ‘ಅಬೀರ್ ಗುಲಾಲ್’ ಸಿನಿಮಾವನ್ನು ಇತ್ತೀಚೆಗೆ ಭಾರತದಲ್ಲಿ ಬ್ಯಾನ್ ಮಾಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.