‘ರಾಮಾಯಣ’ ಸಿನಿಮಾದಲ್ಲಿ ವಿಭೀಷಣನ ಪಾತ್ರ ಮಾಡ್ತಾರಾ ವಿಜಯ್​ ಸೇತುಪತಿ?

ನಟ ವಿಜಯ್​ ಸೇತುಪತಿ ಅವರಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಅಭಿಮಾನಿಗಳು ಇದ್ದಾರೆ. ನಿತೇಶ್​​ ತಿವಾರಿ ನಿರ್ದೇಶನದ ಬಾಲಿವುಡ್​ನ ‘ರಾಮಾಯಣ’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ. ಹಾಗಾಗಿ ವಿಜಯ್​ ಸೇತುಪತಿ ಅವರ ಕಾಲ್​ಶೀಟ್​ ಕೇಳಲಾಗಿದೆ ಎಂದು ಸುದ್ದಿ ಆಗಿದೆ.

‘ರಾಮಾಯಣ’ ಸಿನಿಮಾದಲ್ಲಿ ವಿಭೀಷಣನ ಪಾತ್ರ ಮಾಡ್ತಾರಾ ವಿಜಯ್​ ಸೇತುಪತಿ?
ವಿಜಯ್​ ಸೇತುಪತಿ

Updated on: Jan 27, 2024 | 1:27 PM

ರಾಮಾಯಣದ (Ramayana) ಕಥೆಯನ್ನು ಆಧರಿಸಿ ಬಾಲಿವುಡ್​​ನಲ್ಲಿ ತಯಾರಾಗುತ್ತಿರುವ ಸಿನಿಮಾ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಮನೆ ಮಾಡಿದೆ. ಈ ಸಿನಿಮಾಗೆ ‘ದಂಗಲ್​’ ನಿರ್ದೇಶಕ ನಿತೇಶ್​​ ತಿವಾರಿ (Nitesh Tiwari) ಅವರು ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಈಗ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಹಲವು ಕಲಾವಿದರ ಜೊತೆ ನಿರ್ದೇಶಕರು ಮಾತುಕಥೆ ನಡೆಸುತ್ತಿದ್ದಾರೆ. ಈಗಾಗಲೇ ರಣಬೀರ್​ ಕಪೂರ್, ಸಾಯಿ ಪಲ್ಲವಿ, ಯಶ್​ ಮುಂತಾದವರ ಜೊತೆ ಚಿತ್ರತಂಡದ ಮೀಟಿಂಗ್​ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಬಗ್ಗೆ ಕೇಳಿಬರುತ್ತಿರುವ ಹೊಸ ನ್ಯೂಸ್​ ಏನೆಂದರೆ, ನಟ ವಿಜಯ್​ ಸೇತುಪತಿ (Vijay Sethupathi) ಅವರಿಗೆ ಆಫರ್​ ನೀಡಲಾಗಿದೆ. ರಾಮಾಯಣದಲ್ಲಿ ಬರುವ ಮುಖ್ಯ ಪಾತ್ರಗಳಲ್ಲಿ ಒಂದಾದ ವಿಭೀಷಣನ ಪಾತ್ರಕ್ಕೆ ಬಣ್ಣ ಹಚ್ಚಲು ವಿಜಯ್​ ಸೇತುಪತಿಗೆ ಆಫರ್​ ನೀಡಿಲಾಗಿದೆ ಎನ್ನಲಾಗುತ್ತಿದೆ.

ವಿಜಯ್​ ಸೇತುಪತಿ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಯಾವ ರೀತಿ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವ ಪ್ರತಿಭೆ ಅವರಲ್ಲಿ ಇದೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಅವರಿಗೆ ಅಭಿಮಾನಿಗಳು ಇದ್ದಾರೆ. ಬಾಲಿವುಡ್​ನ ‘ರಾಮಾಯಣ’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ. ಹಾಗಾಗಿ ವಿಜಯ್​ ಸೇತುಪತಿ ಅವರ ಕಾಲ್​ಶೀಟ್​ ಕೇಳಲಾಗಿದೆ ಎಂದು ಸುದ್ದಿ ಆಗಿದೆ.

ಈ ಮೊದಲು ‘ಹನುಮಾನ್​’ ಚಿತ್ರತಂಡದವರು ಕೂಡ ವಿಭೀಷಣನ ಪಾತ್ರ ಮಾಡಲು ವಿಜಯ್​ ಸೇತುಪತಿಗೆ ಅವಕಾಶ ನೀಡಿದ್ದರು ಎನ್ನಲಾಗಿದೆ. ಆದರೆ ಕಾರಣಾಂತರಗಳಿಂದ ಆ ಪಾತ್ರವನ್ನು ವಿಜಯ್​ ಸೇತುಪತಿ ಒಪ್ಪಿಕೊಂಡಿರಲಿಲ್ಲ. ಈಗ ಅವರಿಗೆ ನಿರ್ದೇಶಕ ನಿತೇಶ್​​ ತಿವಾರಿ ಕಡೆಯಿಂದ ಅದೇ ಪಾತ್ರಕ್ಕೆ ಆಫರ್​ ಬಂದಿದೆ. ಈ ಬಾರಿ ನಿತೇಶ್​ ತಿವಾರಿ ಬರೆದ ಸ್ಕ್ರಿಪ್ಟ್​ ನೋಡಿ ವಿಜಯ್​ ಸೇತುಪತಿಗೆ ಖುಷಿಯಾಗಿದೆ ಎನ್ನಲಾಗುತ್ತಿದೆ. ಅವರು ಒಪ್ಪಿಕೊಂಡಿದ್ದಾರೋ ಅಥವಾ ಇಲ್ಲವೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: 37 ವರ್ಷಗಳ ಹಿಂದೆ ರಾಮಾಯಣ ಧಾರಾವಾಹಿಯ ನಿರ್ಮಾಪಕರು ನ್ಯಾಯಾಲಯದ ಮೊರೆ ಹೋಗಿದ್ದರು, ಕಾರಣ ಬಹಿರಂಗಪಡಿಸಿದ ಪ್ರೇಮ್ ಸಾಗರ್

ಮಾರ್ಚ್​ ತಿಂಗಳಲ್ಲಿ ‘ರಾಮಾಯಣ’ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಅಷ್ಟರೊಳಗೆ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ಮುಕ್ತಾಯ ಆಗಬೇಕಿದೆ. ರಾಮಾಯಣದ ಕಥೆಯಲ್ಲಿ ಹಲವಾರು ಪಾತ್ರಗಳು ಬರುತ್ತವೆ. ಹಾಗಾಗಿ ಇದು ಬಹುತಾರಾಗಣದ ಸಿನಿಮಾ ಆಗಿರಲಿದೆ. ಯಾರು, ಯಾವ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ ಎಂಬ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us