37 ವರ್ಷಗಳ ಹಿಂದೆ ‘ರಾಮಾಯಣ’ ಧಾರಾವಾಹಿಯ ನಿರ್ಮಾಪಕರು ನ್ಯಾಯಾಲಯದ ಮೊರೆ ಹೋಗಿದ್ದರು, ಕಾರಣ ಬಹಿರಂಗಪಡಿಸಿದ ಪ್ರೇಮ್ ಸಾಗರ್
ಧಾರಾವಾಹಿಯ ಒಟ್ಟು 78 ಸಂಚಿಕೆಗಳು ಪ್ರಸಾರವಾಗಿದ್ದು, ಆ ನಂತರ ಧಾರಾವಾಹಿಯನ್ನು ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ, ರಮಾನಂದ್ ಸಾಗರ್ ಅವರಿಗೆ ಧಾರಾವಾಹಿಯ ಅಭಿಮಾನಿಗಳಿಂದ ಪ್ರತಿದಿನ ಸಾವಿರಾರು ಮನವಿಗಳು ಬರುತ್ತಿತ್ತು ಎಂದ ಪ್ರೇಮ್ ಸಾಗರ್, ಅವರು ಕೋರ್ಟ್ ಗೆ ಹೋಗಿದ್ದೇಕೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಮುಂಬೈ ಜನವರಿ 22: ರಾಮಮಂದಿರದಲ್ಲಿ (Ram Mandir) ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದು ಸೋಮವಾರ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಅಯೋಧ್ಯೆ ಮಾತ್ರವಲ್ಲ, ಇಡೀ ದೇಶವೇ ಶೃಂಗಾರಗೊಂಡಿದೆ. ದೇಶದೆಲ್ಲೆಡೆ ರಾಮಭಕ್ತಿಯ ವಾತಾವರಣವಿದೆ. ಈ ಮೂಲಕ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ ‘ರಾಮಾಯಣ’ (Ramayan) ಚರ್ಚೆಗೆ ಗ್ರಾಸವಾಗಿದೆ. ರಮಾನಂದ್ ಸಾಗರ್ (Ramanand Sagar) ಅವರು ದೂರದರ್ಶನದಲ್ಲಿ ಈ ಧಾರಾವಾಹಿಯನ್ನು ಸುಮಾರು 37 ವರ್ಷಗಳ ಹಿಂದೆ 1987 ರಲ್ಲಿ ಪ್ರಾರಂಭಿಸಿದರು. ಈ ಧಾರಾವಾಹಿಗೆ ಪ್ರೇಕ್ಷಕರಿಂದ ಅಪಾರ ಪ್ರೀತಿ ಸಿಕ್ಕಿದೆ. ಲಾಕ್‌ಡೌನ್ ಸಮಯದಲ್ಲಿ ಮತ್ತೊಮ್ಮೆ ಟಿವಿಯಲ್ಲಿ ಸರಣಿಯನ್ನು ತೋರಿಸಿದಾಗ, ಎಲ್ಲಾ ದಾಖಲೆಗಳು ಮುರಿದುಹೋಗಿವೆ. ಆದರೆ ಈ ಸರಣಿ ಮುಗಿದಾಗ ರಮಾನಂದ ಸಾಗರ್ ಹಲವು ವಿವಾದಗಳನ್ನು ಎದುರಿಸಬೇಕಾಯಿತು.
ವೀಕ್ಷಕರಿಂದ ಪ್ರತಿದಿನ ಸಾವಿರಾರು ಮನವಿ
ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ‘ಆದಿಪುರುಷ’ ಕಳೆದ ವರ್ಷ ಬಿಡುಗಡೆಯಾಗಿ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಆ ವೇಳೆ ನೀಡಿದ ಸಂದರ್ಶನದಲ್ಲಿ ರಮಾನಂದ್ ಸಾಗರ್ ಪುತ್ರ ಪ್ರೇಮ್ ಸಾಗರ್ ಧಾರಾವಾಹಿಯ ವಿವಾದದ ಬಗ್ಗೆ ಹೇಳಿದ್ದಾರೆ. ಧಾರಾವಾಹಿಯ ಒಟ್ಟು 78 ಸಂಚಿಕೆಗಳು ಪ್ರಸಾರವಾಗಿದ್ದು, ಆ ನಂತರ ಧಾರಾವಾಹಿಯನ್ನು ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ, ರಮಾನಂದ್ ಸಾಗರ್ ಅವರಿಗೆ ಧಾರಾವಾಹಿಯ ಅಭಿಮಾನಿಗಳಿಂದ ಪ್ರತಿದಿನ ಸಾವಿರಾರು ಮನವಿಗಳು ಬರುತ್ತಿತ್ತು. ಧಾರಾವಾಹಿಯ ಕಥೆಯನ್ನು ಮುಂದಕ್ಕೆ ಕೊಂಡೊಯ್ಯಲು ಅವರನ್ನು ವಿನಂತಿಸಲಾಯಿತು. ಆದರೆ ಅವರು ಧಾರಾವಾಹಿಯ ಕಥೆಯನ್ನು ಮುಂದುವರಿಸಲು ಬಯಸಲಿಲ್ಲ,
ಉತ್ತರಾಕಾಂಡ ವಿವಾದ
ಪ್ರೇಕ್ಷಕರ ಬೇಡಿಕೆಯ ಮೇರೆಗೆ ರಾಮಾಯಣಕ್ಕೆ ಉತ್ತರಕಾಂಡವನ್ನು ಸೇರಿಸಿದರು ರಮಾನಂದ್ ಸಾಗರ್. ಅದರ ಬಗ್ಗೆ ದೊಡ್ಡ ವಿವಾದವೇ ನಡೆದಿತ್ತು. ಅಷ್ಟೇ ಅಲ್ಲ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ರಮಾನಂದ ಸಾಗರ್ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಈ ಧಾರಾವಾಹಿ ವಿವಾದ ಎದ್ದರೂ ಹಲವು ಮಂದಿಯ ಪ್ರೀತಿಗೆ ಪಾತ್ರರಾಗಿದ್ದರು. ಕೊರೊನಾ ಅವಧಿಯಲ್ಲಿ ಈ ಧಾರಾವಾಹಿಯ ಒಂದು ಸಂಚಿಕೆ 7.7 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲೂ ದಾಖಲಾಗಿದೆ.
ಇದನ್ನೂ ಓದಿ:Ram Mandir Inauguration: ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ರೋಹಿತ್ ಶರ್ಮಾ ಗೈರು: ಕಾರಣವೇನು?
ಪ್ರತಿ ಸಂಚಿಕೆಗೆ ರಾಮಾಯಣ ಸಾಕಷ್ಟು ಲಾಭ ಗಳಿಸಿತು. BBC ವರದಿಯ ಪ್ರಕಾರ, 53 ವಿವಿಧ ದೇಶಗಳಲ್ಲಿ 650 ಮಿಲಿಯನ್ ವೀಕ್ಷಕರು ಈ ಸರಣಿಯನ್ನು ವೀಕ್ಷಿಸಿದ್ದಾರೆ. ಇಂಡಿಯಾ ಟುಡೇ ವರದಿಯ ಪ್ರಕಾರ, ದೂರದರ್ಶನದಲ್ಲಿ ಧಾರಾವಾಹಿ ಮೊದಲ ಬಾರಿಗೆ 23 ಕೋಟಿ ಗಳಿಸಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ