The Kerala Story: ಒಟಿಟಿ ಪ್ರಾಬಲ್ಯ ಹೆಚ್ಚಿರುವಾಗ ಚಿತ್ರಮಂದಿರಗಳಲ್ಲಿ ‘ದಿ ಕೇರಳ ಸ್ಟೋರಿ’ ಬ್ಯಾನ್​ ಮಾಡಿದ್ದಕ್ಕೆ ಅರ್ಥವುಂಟೆ?

|

Updated on: May 09, 2023 | 5:09 PM

Ban on The Kerala Story: ಮಮತಾ ಬ್ಯಾನರ್ಜಿ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದ ಪ್ರದರ್ಶನವನ್ನು ನಿಷೇಧಿಸಿರುವುದಕ್ಕೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಈ ಚಿತ್ರ ಉತ್ತಮವಾಗಿ ಪ್ರದರ್ಶನ ಆಗುತ್ತಿದೆ.

The Kerala Story: ಒಟಿಟಿ ಪ್ರಾಬಲ್ಯ ಹೆಚ್ಚಿರುವಾಗ ಚಿತ್ರಮಂದಿರಗಳಲ್ಲಿ ‘ದಿ ಕೇರಳ ಸ್ಟೋರಿ’ ಬ್ಯಾನ್​ ಮಾಡಿದ್ದಕ್ಕೆ ಅರ್ಥವುಂಟೆ?
ಅದಾ ಶರ್ಮಾ
Follow us on

ಯಾವುದೇ ಸೂಕ್ಷ್ಮ ವಿಚಾರಗಳ ಬಗ್ಗೆ ಸಿನಿಮಾ ತಯಾರಾದಾಗ ಪರ-ವಿರೋಧ ಚರ್ಚೆ ಆಗುತ್ತದೆ. ಕೆಲವರು ಬ್ಯಾನ್​ ಮಾಡಬೇಕು ಎಂಬ ವಾದ ಮುಂದಿಡುತ್ತಾರೆ. ಸದ್ಯ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರಕ್ಕೆ ಹಾಗೆಯೇ ಆಗಿದೆ. ಐಸಿಸ್​ ಉಗ್ರ ಸಂಘಟನೆಯ ಕುಮ್ಮಕ್ಕಿನಿಂದ ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್​ ಜಿಹಾದ್​ ಮತ್ತು ಮತಾಂತರದ ಕುರಿತು ‘ದಿ ಕೇರಳ ಸ್ಟೋರಿ’ ಸಿನಿಮಾ ಸಿದ್ಧವಾಗಿದೆ. ಅದಾ ಶರ್ಮಾ ಮುಖ್ಯಭೂಮಿಕೆ ನಿಭಾಯಿಸಿರುವ ಈ ಚಿತ್ರಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಸಿನಿಮಾವನ್ನು (The Kerala Story Ban) ಬ್ಯಾನ್​ ಮಾಡಲಾಗಿದೆ. ರಾಜ್ಯದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ‘ದಿ ಕೇರಳ ಸ್ಟೋರಿ’ ಚಿತ್ರದ ಪ್ರದರ್ಶನವನ್ನು ನಿಷೇಧಿಸಿರುವುದಾಗಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದಾರೆ. ಆದರೆ ಬೇರೆ ರಾಜ್ಯಗಳಲ್ಲಿ ಈ ಚಿತ್ರಕ್ಕೆ ಉತ್ತಮ ರೀತಿಯಲ್ಲಿ ಕಲೆಕ್ಷನ್​ ಆಗುತ್ತದೆ. ಅಲ್ಲದೇ, ಒಟಿಟಿ ಪ್ರಾಬಲ್ಯ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಯಾವುದೇ ಸಿನಿಮಾವನ್ನು ಚಿತ್ರಮಂದಿರದಲ್ಲಿ ಪ್ರದರ್ಶನ ಆಗದಂತೆ ನಿಷೇಧಿಸುವುದು ಅಪ್ರಸ್ತುತ ಎಂಬ ಮಾತು ಕೇಳಿಬಂದಿದೆ.

ಮೊದಲ ಲಾಕ್​ಡೌನ್​ ಬಳಿಕ ಒಟಿಟಿ ಪ್ಲಾಟ್​ಫಾರ್ಮ್​ಗಳ ವ್ಯಾಪ್ತಿ ಹಿರಿದಾಯಿತು. ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳುವ ಬದಲು ಮನೆಯಲ್ಲೇ ಕುಳಿತು ಸಿನಿಮಾ ನೋಡಲು ಆರಂಭಿಸಿದರು. ಒಟಿಟಿಗೆ ಚಂದಾದಾರರಾಗುವವರ ಸಂಖ್ಯೆ ಹೆಚ್ಚಿತು. ಈಗ ಹೊಸ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಎಲ್ಲ ಒಟಿಟಿ ಸಂಸ್ಥೆಗಳ ನಡುವೆ ಸಖತ್​ ಪೈಪೋಟಿ ಇದೆ. ದೇಶದ ಎಲ್ಲ ಮೂಲೆಗಳನ್ನೂ ಒಟಿಟಿ ತಲುಪುತ್ತದೆ. ವಿಶ್ವಾದ್ಯಂತ ಇರುವ ಪ್ರೇಕ್ಷಕರು ಒಟಿಟಿ ಮೂಲಕ ಯಾವುದೇ ದೇಶದ ಸಿನಿಮಾವನ್ನು ನೋಡಬಹುದಾಗಿದೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಮಿಂಚಿದ ಅದಾ ಶರ್ಮಾ

ಇದನ್ನೂ ಓದಿ
‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮಧ್ಯ ಪ್ರದೇಶ ಸರ್ಕಾರ
The Kerala Story: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ತೋರಿಸಿರೋದು ನಿಜವೋ ಸುಳ್ಳೋ? ಟ್ವಿಟರ್​ನಲ್ಲಿ ಜೋರಾಗಿದೆ ಚರ್ಚೆ
Adah Sharma: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಗಮನ ಸೆಳೆದ ಅದಾ ಶರ್ಮಾ ನಟನೆ; ಪ್ರೇಕ್ಷಕರಿಂದ ಸಿಕ್ತು ಮೆಚ್ಚುಗೆ
The Kerala Story Review: ಐಸಿಸ್ ಸಂಚಿನ ಕುರಿತು ಎಚ್ಚರಿಕೆ ಸಂದೇಶ ಸಾರುವ ‘ದಿ ಕೇರಳ ಸ್ಟೋರಿ’

‘ದಿ ಕೇರಳ ಸ್ಟೋರಿ’ ಸಿನಿಮಾ ಹಲವು ರಾಜ್ಯಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ ಮುಂತಾದ ಕಡೆಗಳಲ್ಲಿ ಚಿತ್ರಮಂದಿರಗಳು ಬಹುತೇಕ ಭರ್ತಿ ಆಗುತ್ತಿವೆ. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ನಿಷೇಧ ಹೇರಲಾಗಿದೆ. ಒಂದಷ್ಟು ದಿನಗಳು ಕಳೆದ ಬಳಿಕ ಈ ಸಿನಿಮಾ ಒಟಿಟಿಯಲ್ಲಿ ಲಭ್ಯವಾಗಲಿದೆ. ಆಗ ಪಶ್ಚಿಮ ಬಂಗಾಳದ ಜನರು ಕೂಡ ಈ ಸಿನಿಮಾವನ್ನು ಒಟಿಟಿ ಮೂಲಕ ವೀಕ್ಷಿಸುತ್ತಾರೆ. ಹಾಗಾಗಿ ಚಿತ್ರಮಂದಿರಗಳಲ್ಲಿ ಬ್ಯಾನ್​ ಮಾಡಿದ್ದರಲ್ಲಿ ಅರ್ಥವೇ ಇಲ್ಲ ಎನ್ನಬಹುದು.

ಇದನ್ನೂ ಓದಿ: The Kerala Story: ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಬ್ಯಾನ್​; ನಿರ್ಧಾರಕ್ಕೆ ಕಾರಣ ತಿಳಿಸಿದ ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದ ಪ್ರದರ್ಶನವನ್ನು ನಿಷೇಧಿಸಿರುವುದಕ್ಕೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಸಿನಿಮಾವನ್ನು ನೋಡುವುದು ಬಿಡುವುದು ಜನರ ಆಯ್ಕೆಗೆ ಬಿಟ್ಟ ವಿಚಾರ ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತವಾಗಿದೆ. ಸದ್ಯಕ್ಕೆ ಭಾರತದಲ್ಲಿ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್​ ಆಗುತ್ತಿದೆ. 4 ದಿನಕ್ಕೆ 45 ಕೋಟಿ ರೂಪಾಯಿಗೂ ಹೆಚ್ಚು ಕಮಾಯಿ ಮಾಡಿ ಮುನ್ನುಗ್ಗುತ್ತಿದೆ.

‘ದಿ ಕೇರಳ ಸ್ಟೋರಿ’ ಕಲೆಕ್ಷನ್​ ವಿವರ:

ಮೊದಲ ದಿನ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ 8.3 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. ಎರಡನೇ ದಿನ ಕಲೆಕ್ಷನ್​ ಹೆಚ್ಚಾಯಿತು. ಶನಿವಾರ ಈ ಸಿನಿಮಾ ಬರೋಬ್ಬರಿ 11.22 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನವಾದ ಭಾನುವಾರ 16.40 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಸದ್ದು ಮಾಡಿತು. ಸೋಮವಾರ ಬಾಕ್ಸ್​ ಆಫೀಸ್​ ಹಣೆಬರಹ ಏನಾಗಬಹುದು ಎಂಬ ಕೌತುಕ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ನಾಲ್ಕನೇ ದಿನವಾದ ಮೇ 8ರಂದು ‘ದಿ ಕೇರಳ ಸ್ಟೋರಿ’ ಸಿನಿಮಾ 10 ಕೋಟಿ ರೂಪಾಯಿ ಗಳಿಸಿದೆ ಎಂಬುದು ವಿಶೇಷ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.