AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಇಲ್ಲಿ ಒಬ್ಬಂಟಿ, ನನ್ನ ಬಲಿಪಶು ಮಾಡಲಾಗಿದೆ’; ಕೋರ್ಟ್​ ಎದುರು ಭಾವುಕರಾದ ನಟಿ ನೋರಾ ಫತೇಹಿ

‘ನಾನು ಸುಕೇಶ್​ ಚಂದ್ರಶೇಖರ್​ ಜೊತೆ ಸಂಬಂಧ ಇಟ್ಟುಕೊಂಡಿದ್ದೆ ಎಂದು ಆರೋಪಿಸಿದರು. ಎಲ್ಲರ ಗಮನ ಬೇರೆಡೆ ಸೆಳೆಯಲು ನನ್ನ ಹೆಸರನ್ನು ಸೇರಿಸಲಾಗಿದೆ’ ಎಂದು ನೋರಾ ಹೇಳಿದ್ದಾರೆ.  

‘ನಾನು ಇಲ್ಲಿ ಒಬ್ಬಂಟಿ, ನನ್ನ ಬಲಿಪಶು ಮಾಡಲಾಗಿದೆ’; ಕೋರ್ಟ್​ ಎದುರು ಭಾವುಕರಾದ ನಟಿ ನೋರಾ ಫತೇಹಿ
ನೋರಾ-ಜಾಕ್ವೆಲಿನ್
ರಾಜೇಶ್ ದುಗ್ಗುಮನೆ
|

Updated on:Aug 01, 2023 | 8:28 AM

Share

200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ (Sukesh Chandrashekhar) ಅರೆಸ್ಟ್​ ಆಗಿದ್ದಾನೆ. ಈತನ ಜೊತೆ ಸಂಪರ್ಕದಲ್ಲಿದ್ದರು ಎಂಬ ಆರೋಪದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿ ಕೂಡ ಸಂಕಷ್ಟ ಅನುಭವಿಸಿದ್ದಾರೆ. ಆಗಾಗ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ತಮ್ಮ ಮಾನ ಹಾನಿ ಮಾಡಲಾಗಿದೆ ಎಂದು ಕಳೆದ ಡಿಸೆಂಬರ್​ನಲ್ಲಿ ನೋರಾ ಅವರು ಜಾಕ್ವೆಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ದೆಹಲಿಯ ಪಟಿಯಾಲ ಹೌಸ್​ಕೋರ್ಟ್​ನಲ್ಲಿ ನಡೆದಿದೆ. ಕೋರ್ಟ್​ಗೆ ಹಾಜರಿ ಹಾಕಿ ನೋರಾ ಅವರು ತಮ್ಮ ಹೇಳಿಕೆ ದಾಖಲು ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ ಎಂಬುದು ನೋರಾ ಅವರ ಹೇಳಿಕೆ. ‘ನನ್ನನ್ನು ಸಮಯಸಾಧಕಿ ಎಂದು ಕರೆದರು. ನಾನು ಸುಕೇಶ್​ ಚಂದ್ರಶೇಖರ್​ ಜೊತೆ ಸಂಬಂಧ ಇಟ್ಟುಕೊಂಡಿದ್ದೆ ಎಂದು ಆರೋಪಿಸಿದರು. ಎಲ್ಲರ ಗಮನ ಬೇರೆಡೆ ಸೆಳೆಯಲು ನನ್ನ ಹೆಸರನ್ನು ಸೇರಿಸಲಾಗಿದೆ’ ಎಂದು ನೋರಾ ಹೇಳಿದ್ದಾರೆ.

‘ಈ ಪ್ರಕರಣದಿಂದ ನಾನು ಸಾಕಷ್ಟು ಆಫರ್ ಕಳೆದುಕೊಂಡಿದ್ದೇನೆ. ನನ್ನ ವರ್ಚಸ್ಸಿಗೆ ಕುತ್ತು ಬಂದಿದೆ. ಮಾನಸಿಕವಾಗಿ ಕಿರಿಕಿರಿ ಆಗಿದೆ. ಕಾರ್ಯಕ್ರಮವೊಂದಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಕರೆಯಲಾಗಿತ್ತು ಅಷ್ಟೇ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನನಗೆ ಅವರ ಬಗ್ಗೆ ಗೊತ್ತೂ ಇಲ್ಲ. ನಾನು ಹೊರಗಿನವಳು. ನಾನು ಈ ದೇಶದಲ್ಲಿ ಒಬ್ಬಂಟಿ. ಹೀಗಾಗಿ ಕೆಲವರನ್ನು ರಕ್ಷಿಸಲು ನನ್ನ ಬಲಿಪಶು ಮಾಡಲಾಗಿದೆ’ ಎಂದು ನೋರಾ ಫತೇಹಿ ಹೇಳಿದ್ದಾರೆ.

ಇದನ್ನೂ ಓದಿ:  ಜಾಕ್ವೆಲಿನ್​ ಫರ್ನಾಂಡಿಸ್​ ಹಾಟ್​ ಫೋಟೋಸ್​ ನೋಡಿ ಹುಬ್ಬೇರಿಸಿದ ಪಡ್ಡೆ ಹುಡುಗರು

‘ನನ್ನ ವೃತ್ತಿ ಜೀವನಕ್ಕೆ ಹಾಗೂ ವರ್ಚಸ್ಸಿಗೆ ಉಂಟಾದ ಹಾನಿಗೆ ಪರಿಹಾರ ಹಣ ಬೇಕು. ಈ ಕಾರಣದಿಂದ ನಾನು ಮಾನಹಾನಿ ಅರ್ಜಿ ಸಲ್ಲಿಸಿದ್ದೇನೆ’ ಎಂದು ನೋರಾ ಹೇಳಿದ್ದಾರೆ. ಡಿಸೆಂಬರ್ 12ರಂದು ನೋರಾ ಅವರು ಜಾಕ್ವೆಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಈ ಪ್ರಕರಣದಲ್ಲಿ ನೋರಾ ಹೆಸರನ್ನು  ಜಾಕ್ವೆಲಿನ್ ಎಳೆದು ತಂದಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:22 am, Tue, 1 August 23