ಭಾರತದ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ ಎಫ್​ಎಂ ರೇಡಿಯೋ ಸ್ಟೇಷನ್ಸ್

ಪಾಕಿಸ್ತಾನದ ರೇಡಿಯೋ ಹಾಗೂ ಟಿವಿಗಳಲ್ಲಿ ಭಾರತದ ಹಾಡುಗಳ ಪ್ರಸಾರವನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ. ಪಹಲ್ಗಾಮ್ ಉಗ್ರರ ದಾಳಿ ಬಳಿಕ ಎರಡೂ ದೇಶಗಳ ನಡುವೆ ಸಂಘರ್ಷ ಹೆಚ್ಚಾಗಿದೆ. ಚಿತ್ರರಂಗ ಹಾಗೂ ಮ್ಯೂಸಿಕ್ ಇಂಡಸ್ಟ್​ರಿ ಮೇಲೆ ಕೂಡ ಇದರ ಪರಿಣಾಮ ಬೀರಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಭಾರತದ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ ಎಫ್​ಎಂ ರೇಡಿಯೋ ಸ್ಟೇಷನ್ಸ್
Bollywood Songs

Updated on: May 01, 2025 | 8:50 PM

ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಬಿಗಡಾಯಿಸಿದೆ. ಪಹಲ್ಗಾಮ್ ಉಗ್ರರ ದಾಳಿ (Pahalgam Terror Attack) ಬಳಿಕ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಲು ಭಾರತ ಸಜ್ಜಾಗುತ್ತಿದೆ. ಯುದ್ಧ ಶುರುವಾಗಬಹುದು ಎಂಬ ವಾತಾವರಣ ನಿರ್ಮಾಣ ಆಗಿದೆ. ಸಿನಿಮಾ ಮತ್ತು ಸಂಗೀತ ಕ್ಷೇತ್ರದ ಮೇಲೂ ಇದರ ಪರಿಣಾಮ ಬೀರುತ್ತಿದೆ. ಈಗಾಗಲೇ ಭಾರತದಲ್ಲಿ ಪಾಕಿಸ್ತಾನದ (Pakistan) ಕಲಾವಿದರಿಗೆ ನಿಷೇಧ ಹೇರಲಾಗಿದೆ. ಅತ್ತ, ಪಾಕಿಸ್ತಾನದಲ್ಲಿ ಭಾರತದ ಮನರಂಜನಾ ಕಂಟೆಂಟ್​ಗಳನ್ನು ನಿಷೇಧಿಸಲಾಗುತ್ತಿದೆ. ಎಫ್ಎಂ ಸ್ಟೇಷನ್​ಗಳಲ್ಲಿ ಭಾರತದ ಹಾಡುಗಳನ್ನು ಪ್ರಸಾರ ಮಾಡದಂತೆ ನಿರ್ಧರಿಸಲಾಗಿದೆ.

ಪಾಕಿಸ್ತಾನದಲ್ಲಿ ಬಾಲಿವುಡ್ ಸಿನಿಮಾ ಹಾಡುಗಳಿಗೆ ಬೇಡಿಕೆ ಇದೆ. ಟಿವಿ ಮತ್ತು ರೇಡಿಯೋ ವಾಹಿನಿಗಳಲ್ಲಿ ಹಿಂದಿ ಸಾಂಗ್ಸ್ ಪ್ರಸಾರವಾದರೆ ಜನರು ಎಂಜಾಯ್ ಮಾಡುತ್ತಾರೆ. ಆದರೆ ಪಹಲ್ಗಾಮ್ ದಾಳಿಯ ನಂತರ ಪರಿಸ್ಥಿತಿ ಬದಲಾಗಿದೆ. ಪಾಕಿಸ್ತಾನ್ ಬ್ರಾಡ್​ಕಾಸ್ಟರ್ ಒಕ್ಕೂಟವು (ಪಿಬಿಎ) ಭಾರತದ ಹಾಡುಗಳ ಪ್ರಸಾರ ಮಾಡುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಈ ನಿರ್ಧಾರವನ್ನು ಅಲ್ಲಿನ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸ್ವಾಗತಿಸಿದೆ.

‘ಪಿಬಿಎ ನಿರ್ಧಾರವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮೆಚ್ಚಿದೆ. ದೇಶಭಕ್ತಿ ತೋರುವ ಈ ಕೆಲಸವು ಪ್ರಶಂಸೆಗೆ ಅರ್ಹವಾಗಿದೆ. ಇದು ದೇಶದ ಜನರ ಒಗ್ಗಟ್ಟನ್ನು ತೋರಿಸುತ್ತದೆ’ ಎಂದು ಪಾಕಿಸ್ತಾನದ ಸರ್ಕಾರದಿಂದ ಪತ್ರ ಬರೆದಿರುವುದು ವೈರಲ್ ಆಗಿದೆ. ಈಗಾಗಲೇ ಭಾರತದ ಸಿನಿಮಾಗಳ ಪ್ರದರ್ಶನವನ್ನು ಕೂಡ ಪಾಕಿಸ್ತಾನದಲ್ಲಿ ರದ್ದು ಮಾಡಲಾಗಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ
ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ರೇಖಾಚಿತ್ರ ಬಿಡುಗಡೆ
ಪಾಕ್ ಸೇನೆಗೆ ನಡುಕ ಶುರು: ಉಪಗ್ರಹ ಚಿತ್ರಗಳಿಂದ ಬಹಿರಂಗವಾಯ್ತು ರಹಸ್ಯ
ಮೆಹಂದಿ ಮಾಸುವ ಮುನ್ನವೇ ನವವಿವಾಹಿತೆಯ ಕುಂಕುಮ ಅಳಿಸಿದ ಉಗ್ರರು
ಪಹಲ್ಗಾಮ್ ದಾಳಿ: ಅಜಿತ್ ದೋವಲ್, ಜೈಶಂಕರ್ ಭೇಟಿಯಾದ ಪ್ರಧಾನಿ ಮೋದಿ

ಇದನ್ನೂ ಓದಿ: ‘ಪಹಲ್ಗಾಮ್ ದಾಳಿ ಬಗ್ಗೆ ಇಲ್ಲಿ ನಾನು ಮಾತಾಡಲ್ಲ’: ಅನುಪಮ್ ಖೇರ್ ಹೀಗೆ ಹೇಳಿದ್ದೇಕೆ?

ಸಿನಿಮಾ ಹಾಗೂ ಸಂಗೀತ ಕ್ಷೇತ್ರದಲ್ಲಿ ಭಾರತ ಮತ್ತು ಪಾಕ್ ನಡುವೆ ಮೊದಲಿನಿಂದಲೂ ಸಂಪರ್ಕ ಬೆಳೆದು ಬಂದಿದೆ. ಪಾಕಿಸ್ತಾನದ ಕಲಾವಿದರು ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲಿನ ಗಾಯಕರು ಬಾಲಿವುಡ್ ಸಾಂಗ್​ಗಳನ್ನು ಹಾಡಿದ್ದಾರೆ. ಆದರೆ ಯಾವಾಗೆಲ್ಲ ಎರಡು ದೇಶಗಳ ನಡುವೆ ಸಂಘರ್ಷ ಹೆಚ್ಚಾಗುತ್ತೋ ಆಗೆಲ್ಲ ಅಲ್ಲಿನ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಲಾಗುತ್ತದೆ.

ಪಾಕ್ ನಟ ಫವಾದ್ ಖಾನ್ ಅವರು ಭಾರತದ ‘ಅಬೀರ್ ಗುಲಾಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಭಾರತದಲ್ಲಿ ಬಿಡುಗಡೆ ಮಾಡದಂತೆ ಬ್ಯಾನ್ ಮಾಡಲಾಗಿದೆ. ನಟಿ ಮಹಿರಾ ಖಾನ್, ನಟ ಫವಾದ್ ಖಾನ್ ಮುಂತಾದವರು ಪಹಲ್ಗಾಮ್ ಘಟನೆಯನ್ನು ಖಂಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.