Pathaan Box Office Collection: ಬಾಕ್ಸ್​ ಆಫೀಸ್​ನಲ್ಲಿ ‘ಪಠಾಣ್​’ ಮೋಡಿ; ಬಂಗಾರದ ಬೆಳೆ ತೆಗೆದ ಶಾರುಖ್​ ಖಾನ್​ ಸಿನಿಮಾ

| Updated By: Digi Tech Desk

Updated on: Jan 26, 2023 | 12:36 PM

Pathaan First Day Box Office Collection: ಶಾರುಖ್ ಖಾನ್​ ನಟನೆಯ ‘ಪಠಾಣ್​’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ಇಷ್ಟು ದಿನ ಸೊರಗಿದ್ದ ಬಾಲಿವುಡ್​ಗೆ ಈಗ ಹೊಸ ಕಳೆ ಬಂದಿದೆ.

Pathaan Box Office Collection: ಬಾಕ್ಸ್​ ಆಫೀಸ್​ನಲ್ಲಿ ‘ಪಠಾಣ್​’ ಮೋಡಿ; ಬಂಗಾರದ ಬೆಳೆ ತೆಗೆದ ಶಾರುಖ್​ ಖಾನ್​ ಸಿನಿಮಾ
ಶಾರುಖ್ ಖಾನ್
Follow us on

ನಿರೀಕ್ಷೆಗೂ ಮೀರಿ ‘ಪಠಾಣ್​’ ಸಿನಿಮಾ (Pathaan Movie) ಅಬ್ಬರಿಸಿದೆ. ಈ ಚಿತ್ರಕ್ಕಾಗಿ ಶಾರುಖ್​ ಖಾನ್​ ಅಭಿಮಾನಿಗಳು ಕಾತರದಿಂದ ಕಾದಿದ್ದರು. ಜನವರಿ 25ರಂದು ತೆರೆಕಂಡ ಈ ಸಿನಿಮಾಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನವೇ ‘ಪಠಾಣ್​’ ಚಿತ್ರ ಧೂಳೆಬ್ಬಿಸಿದೆ. ಬಾಕ್ಸ್​ ಆಫೀಸ್​ ಕಲೆಕ್ಷನ್​ (Pathaan Box Office Collection) ದೃಷ್ಟಿಯಿಂದ ಈ ಸಿನಿಮಾ ಬ್ಲಾಕ್​ ಬಸ್ಟರ್​ ಎನಿಸಿಕೊಂಡಿದೆ. ಒಂದು ಮೂಲದ ಪ್ರಕಾರ ಈ ಸಿನಿಮಾ ಮೊದಲ ದಿನ 50ರಿಂದ 51.5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಶಾರುಖ್​ ಖಾನ್​ (Shah Rukh Khan) ವೃತ್ತಿಜೀವನಕ್ಕೆ ‘ಪಠಾಣ್​’ ಸಿನಿಮಾದ ಗೆಲುವಿನಿಂದಾಗಿ ದೊಡ್ಡ ಬೂಸ್ಟ್​ ಸಿಕ್ಕಂತೆ ಆಗಿದೆ. ಎರಡನೇ ದಿನವಾದ ಇಂದು (ಜ.26) ಕೂಡ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

2018ರಲ್ಲಿ ತೆರೆಗೆ ಬಂದ ‘ಜೀರೋ’ ಸಿನಿಮಾದಿಂದ ಶಾರುಖ್​ ಖಾನ್ ಅವರು ಹೀನಾಯವಾಗಿ ಸೋತಿದ್ದರು. ಆ ಬಳಿಕ ಅವರು ನಾಲ್ಕು ವರ್ಷ ಬ್ರೇಕ್​ ತೆಗೆದುಕೊಂಡರು. ಅವರ ಕಮ್​ಬ್ಯಾಕ್​ ಸಿನಿಮಾವಾಗಿ ಮೂಡಿಬಂದ ‘ಪಠಾಣ್​’ ಮೂಲಕ ಗೆಲುವು ಕಾಣುವುದು ತುಂಬ ಅನಿವಾರ್ಯವಾಗಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕೈ ಹಿಡಿದಿದ್ದಾರೆ. ಫ್ಯಾನ್ಸ್​ ವಲಯದಿಂದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಯಿ ಮಾತಿನ ಪ್ರಚಾರದಿಂದಾಗಿ ‘ಪಠಾಣ್​’ ಚಿತ್ರಕ್ಕೆ ಜನಬೆಂಬಲ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​

ಇದನ್ನೂ ಓದಿ
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

‘ಪಠಾಣ್​’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹಾಗೂ ಶಾರುಖ್​ ಖಾನ್​ ಜೋಡಿಯಾಗಿ ನಟಿಸಿದ್ದಾರೆ. ಇದು ಅವರಿಬ್ಬರು ಒಟ್ಟಿಗೆ ಅಭಿನಯಿಸಿದ ನಾಲ್ಕನೇ ಸಿನಿಮಾ. ಈ ಹಿಂದೆ ಅವರು ತೆರೆ ಹಂಚಿಕೊಂಡಿದ್ದ ‘ಓಂ ಶಾಂತಿ ಓಂ’, ‘ಹ್ಯಾಪಿ ನ್ಯೂ ಇಯರ್’, ‘ಚೆನ್ನೈ ಎಕ್ಸ್​ಪ್ರೆಸ್​’ ಸಿನಿಮಾಗಳು ಸೂಪರ್ ಹಿಟ್​ ಆಗಿದ್ದವು. ಆ ಚಿತ್ರಗಳನ್ನು ಮೀರಿಸುವ ರೀತಿಯಲ್ಲಿ ‘ಪಠಾಣ್​’ ಕಲೆಕ್ಷನ್​ ಮಾಡುತ್ತಿದೆ.

ಇದನ್ನೂ ಓದಿ: Pathan Collection: ಮಧ್ಯಾಹ್ನ 3 ಗಂಟೆ ಒಳಗೆ ಅಚ್ಚರಿ ರೀತಿಯಲ್ಲಿ ಕಲೆಕ್ಷನ್​ ಮಾಡಿದ ‘ಪಠಾಣ್​’; ಇಲ್ಲಿದೆ ಪಕ್ಕಾ ಲೆಕ್ಕ

ಇಂದು (ಜನವರಿ 26) ಗಣರಾಜ್ಯೋತ್ಸವ ಆಗಿರುವುದರಿಂದ ರಜೆ ಇದೆ. ಚಿತ್ರಮಂದಿರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಇಂದು ಕೂಡ ಭರ್ಜರಿ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ. ಶೀಘ್ರದಲ್ಲೇ 100 ಕೋಟಿ ರೂಪಾಯಿ ಕ್ಲಬ್​​ಗೆ ಈ ಸಿನಿಮಾ ಸೇರಲಿದೆ. ಇನ್ನು, ವೀಕೆಂಡ್​ ದಿನಗಳಲ್ಲಿ ಕೂಡ ಸಿಕ್ಕಾಪಟ್ಟೆ ಕಮಾಯಿ ಆಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ

ಸಿದ್ದಾರ್ಥ್​ ಆನಂದ್​ ಅವರು ‘ಪಠಾಣ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅವರ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿಂದೆ ‘ವಾರ್​’ ಚಿತ್ರ ಮಾಡಿ ಗೆದ್ದಿದ್ದ ಅವರು ಈಗ ‘ಪಠಾಣ್​’ ಮೂಲಕ ಮತ್ತೊಂದು ಗೆಲುವು ಪಡೆದಿದ್ದಾರೆ. ಶಾರುಖ್​ ಖಾನ್​ ಅವರ ವೃತ್ತಿಜೀವನದಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡುವಲ್ಲಿ ಈ ಚಿತ್ರ ಯಶಸ್ವಿಯಾಗಿದೆ. ಇಷ್ಟು ದಿನ ಸೊರಗಿದ್ದ ಬಾಲಿವುಡ್​ ಬಾಕ್ಸ್​ ಆಫೀಸ್​ಗೆ ಈಗ ಹೊಸ ಕಳೆ ಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:55 am, Thu, 26 January 23