ದಿನ ಕಳೆದಂತೆ ತಗ್ಗುತ್ತಿದೆ ಶಾರುಖ್ ಖಾನ್ ನಟನೆಯ ‘ಪಠಾಣ್​’ ಸಿನಿಮಾ ಕಲೆಕ್ಷನ್​; ಇಲ್ಲಿದೆ ಕಾರಣ

|

Updated on: Feb 01, 2023 | 12:35 PM

Pathaan Movie Collection: ‘ಪಠಾಣ್​’ ಸಿನಿಮಾ ಜನವರಿ 25ರಂದು ರಿಲೀಸ್ ಆಯಿತು. ಮಸ್ತ್​ ಆ್ಯಕ್ಷನ್ ಇರುವ ಕಾರಣ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟರು. ಏಳು ದಿನಗಳಲ್ಲಿ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ 300 ಕೋಟಿ ರೂ. ಬಾಚಿಕೊಂಡು ಸಾಧನೆ ಮಾಡಿದೆ.

ದಿನ ಕಳೆದಂತೆ ತಗ್ಗುತ್ತಿದೆ ಶಾರುಖ್ ಖಾನ್ ನಟನೆಯ ‘ಪಠಾಣ್​’ ಸಿನಿಮಾ ಕಲೆಕ್ಷನ್​; ಇಲ್ಲಿದೆ ಕಾರಣ
ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್
Follow us on

ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್​’ ಸಿನಿಮಾ ತನ್ನ ಅಬ್ಬರವನ್ನು ಮುಂದುವರಿಸಿದೆ. ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ 300 ಕೋಟಿ ರೂ. ಕ್ಲಬ್ ಸೇರಿದೆ. ಈ ಮೂಲಕ ಅತಿ ವೇಗದಲ್ಲಿ ಈ ಸಾಧನೆ ಮಾಡಿದ ಮೊದಲ ಹಿಂದಿ ಸಿನಿಮಾ ಎನ್ನುವ ಖ್ಯಾತಿಗೆ ‘ಪಠಾಣ್​’ (Pathaan Movie) ಸಾಕ್ಷಿ ಆಗಿದೆ. ವಾರದ ದಿನ ಆಗಿದ್ದರಿಂದ ದಿನ ಕಳೆದಂತೆ ಚಿತ್ರದ ಕಲೆಕ್ಷನ್ ತಗ್ಗುತ್ತಿದೆ. ವೀಕೆಂಡ್​ನಲ್ಲಿ ಸಿನಿಮಾ ಮತ್ತೆ ಅಬ್ಬರದ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

‘ಪಠಾಣ್​’ ಸಿನಿಮಾ ಜನವರಿ 25ರಂದು ರಿಲೀಸ್ ಆಯಿತು. ಮಸ್ತ್​ ಆ್ಯಕ್ಷನ್ ಇರುವ ಕಾರಣ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟರು. ಏಳು ದಿನಗಳಲ್ಲಿ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ 300 ಕೋಟಿ ರೂ. ಬಾಚಿಕೊಂಡು ಸಾಧನೆ ಮಾಡಿದೆ. ವಿದೇಶದಲ್ಲೂ ಸಿನಿಮಾ ಅಬ್ಬರಿಸುತ್ತಿದ್ದು ವಿಶ್ವ ಬಾಕ್ಸ್​ ಆಫೀಸ್​ನ ಒಟ್ಟಾರೆ ಕಲೆಕ್ಷನ್ 600 ಕೋಟಿ ರೂಪಾಯಿ ದಾಟಿದೆ. ಈ ಚಿತ್ರದಿಂದ ಶಾರುಖ್ ಖಾನ್ ಅವರು ಒಳ್ಳೆಯ ಕಂಬ್ಯಾಕ್ ಮಾಡಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ ಹಿಂದಿ ವರ್ಷನ್​ನಲ್ಲಿ 430+ ಕೋಟಿ ರೂಪಾಯಿ ಬಾಚಿಕೊಂಡಿತ್ತು. ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಹಿಂದಿ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕಿತ್ತು. ಈ ದಾಖಲೆಯ ಮೇಲೆ ‘ಪಠಾಣ್​’ ಕಣ್ಣಿಟ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ಈ ದಾಖಲೆ ಮುರಿಯುವ ಸಾಧ್ಯತೆ ಇದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಇದನ್ನೂ ಓದಿ: Pathaan Sequel: ಬರಲಿದೆ ‘ಪಠಾಣ್​ 2’; ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಶಾರುಖ್​ ಖಾನ್​

‘ಪಠಾಣ್​’ ಚಿತ್ರದ ಗಳಿಕೆ ತಗ್ಗುತ್ತಿದೆ. ಇದಕ್ಕೆ ಕಾರಣ ವಾರದ ದಿನಗಳು. ಭಾನುವಾರ (ಜನವರಿ 29) ಈ ಚಿತ್ರ 58 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಸೋಮವಾರ (ಜನವರಿ 30) 25 ಕೋಟಿ ರೂಪಾಯಿ ಹಾಗೂ ಮಂಗಳವಾರ (ಜನವರಿ 31) ಸಿನಿಮಾ 21 ಕೋಟಿ ರೂಪಾಯಿ ಬಾಚಿಕೊಂಡಿದೆ. ಇಂದು (ಫೆಬ್ರವರಿ 1) ಈ ಚಿತ್ರದ ಗಳಿಕೆ ಮತ್ತಷ್ಟು ಇಳಿಕೆ ಆಗಬಹುದು. ಆದರೆ, ವಾರಾಂತ್ಯಕ್ಕೆ ಸಿನಿಮಾ ಮತ್ತೆ ಅಬ್ಬರಿಸುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ