ಬಾಲಿವುಡ್ನಲ್ಲಿ ಈ ಸೆಲೆಬ್ರಿಟಿಗಳಿಗೆ ಇತ್ತು ಅಫೇರ್? ಭಾರೀ ಚರ್ಚೆ ಹುಟ್ಟುಹಾಕಿದ್ದ ಸ್ಟಾರ್ಸ್ಗಳಿವರು
ಮದುವೆ ಆದ ಬಳಿಕ ಅಫೇರ್ ಇಟ್ಟುಕೊಂಡು ಸುದ್ದಿ ಆದವರೂ ಸಾಕಷ್ಟಿದ್ದಾರೆ. ಕೆಲವು ಲವ್ ಅಫೇರ್ ವಿಚಾರಗಳು ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಹಲ್ಚಲ್ ಎಬ್ಬಿಸಿತ್ತು. ಆ ಬಗ್ಗೆ ಇಲ್ಲಿದೆ ವಿವರ.
ಬಾಲಿವುಡ್ ಸೆಲೆಬ್ರಿಟಿಗಳಿ ಲವ್, ಬ್ರೇಕಪ್, ಅಫೇರ್ಗಳು ಸಖತ್ ಕಾಮನ್. ಇಂದು ಸುತ್ತಾಡುತ್ತಿರುವವರು ನಾಳೆ ಬ್ರೇಕಪ್ ಮಾಡಿಕೊಳ್ಳಬಹುದು. ಮದುವೆ ಆದ ಬಳಿಕ ಅಫೇರ್ ಇಟ್ಟುಕೊಂಡು ಸುದ್ದಿ ಆದವರೂ ಸಾಕಷ್ಟಿದ್ದಾರೆ. ಕೆಲವು ಲವ್ ಅಫೇರ್ ವಿಚಾರಗಳು ಬಾಲಿವುಡ್ (Bollywood) ಅಂಗಳದಲ್ಲಿ ಸಾಕಷ್ಟು ಹಲ್ಚಲ್ ಎಬ್ಬಿಸಿತ್ತು. ಆ ರೀತಿಯ ಪ್ರಕರಣಗಳ ಬಗ್ಗೆ ಇಲ್ಲಿದೆ ವಿವರ.
ಹರ್ನಾಜ್ ಸಂಧು ಮತ್ತ ವೀರ್ ಪಹರಿಯಾ
ಹರ್ನಾಜ್ ಕೌರ್ ಸಂಧು ಹಾಗೂ ವೀರ್ ಪಹರಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ವೀರ್ ಅವರು ಪೋಸ್ಟ್ ಮಾಡಿದ್ದ ಫೋಟೋ ವೈರಲ್ ಆಗಿತ್ತು. ಈ ಫೋಟೋಗೆ ಹರ್ನಾಜ್ ಅವರು ಪ್ರತಿಕ್ರಿಯಿಸಿದ್ದರು.
ಕರೀನಾ ಕಪೂರ್ ಹಾಗೂ ಶಾಹಿದ್ ಕಪೂರ್
ಬಾಲಿವುಡ್ನಲ್ಲಿ ಕರೀನಾ ಕಪೂರ್ ಹಾಗೂ ಶಾಹಿದ್ ಕಪೂರ್ ಸುತ್ತಾಟ ನಡೆಸಿದ್ದರು. ಇವರು ‘ಜಬ್ ವಿ ಮೆಟ್’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಆ ಬಳಿಕ ಇವರ ಮಧ್ಯೆ ಪ್ರೀತಿ ಮೂಡಿತು ಎನ್ನಲಾಗಿದೆ. ಸುಮಾರು ಐದು ವರ್ಷಗಳ ಕಾಲ ಇವರು ಸುತ್ತಾಟ ನಡೆಸಿದ್ದರು. ಶಾಹಿದ್ಗಾಗಿ ಅವರು ನಾನ್ ವೆಜ್ ಬಿಟ್ಟಿದ್ದರು. ಇವರ ಸಂಬಂಧ ಬ್ರೇಕಪ್ನಲ್ಲಿ ಕೊನೆ ಆಯಿತು.
ಅಮಿತಾಭ್ ಬಚ್ಚನ್-ರೇಖಾ
ಅಮಿತಾಭ್ ಬಚ್ಚನ್ ಹಾಗೂ ರೇಖಾ ಲವ್ಸ್ಟೋರಿ ಸಾಕಷ್ಟು ಸುದ್ದಿಯಲ್ಲಿತ್ತು. ಇದು ಇನ್ನೂ ನಿಗೂಢವಾಗಿಯೇ ಇದೆ. ಈ ವಿಚಾರವನ್ನು ಇಬ್ಬರೂ ಒಪ್ಪಿಕೊಂಡಿಲ್ಲ. ರೇಖಾ ಅವರು ಹಣೆಗೆ ತಿಲಕ ಇಟ್ಟು ಕಾಣಿಸಿಕೊಂಡಿದ್ದರು. ರೇಖಾ ಹಾಗೂ ಅಮಿತಾಭ್ ಮದುವೆ ಆಗಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇವರು ಬೇರೆ ಆದರು.
ಶಾರುಖ್ ಖಾನ್ ಹಾಗೂ ಪ್ರಿಯಾಂಕಾ ಚೋಪ್ರಾ
‘ಡಾನ್’ ಸಿನಿಮಾ ಸಂದರ್ಭದಲ್ಲಿ ಶಾರುಖ್ ಖಾನ್ಗೆ ಆಗಲೇ ಮದುವೆ ಆಗಿತ್ತು. ಶಾರುಖ್ ಖಾನ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರು ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಇವರ ಮಧ್ಯೆ ಅಫೇರ್ ನಡೆಯುತ್ತಿದೆ ಎಂದು ಸುದ್ದಿ ಆಗಿತ್ತು. ಈ ಸುದ್ದಿ ಕೇಳಿ ಶಾರುಖ್ ಅಸಮಾಧಾನಗೊಂಡಿದ್ದರು.
ಹೃತಿಕ್ ರೋಷನ್-ಕಂಗನಾ ರಣಾವತ್
ಹೃತಿಕ್ ರೋಷನ್ ಹಾಗೂ ಕಂಗನಾ ರಣಾವತ್ ಸಾಕಷ್ಟು ಸುದ್ದಿಯಲ್ಲಿದ್ದರು. ಇವರು ಒಟ್ಟಾಗಿ ನಟಿಸಿದ್ದರು. ಇವರ ಮಧ್ಯೆ ರಿಲೇಶನ್ಶಿಪ್ ಇತ್ತು ಎನ್ನಲಾಗಿದೆ. ಇವರ ಲವ್ಸ್ಟೋರಿ ಇನ್ನೂ ಮಿಸ್ಟರಿಯಾಗಿಯೇ ಇದೆ. ಈ ಬಗ್ಗೆ ಕಂಗನಾ ಅವರು ಹೃತಿಕ್ ಬಗ್ಗೆ ಆರೋಪ ಮಾಡಿದ್ದರು. ಆದರೆ, ಈ ಆರೋಪವನ್ನು ಹೃತಿಕ್ ಅಲ್ಲಗಳೆದಿದ್ದರು.
ಆಮಿರ್ ಖಾನ್ ಹಾಗೂ ಫಾತಿಮಾ ಸನಾ ಶೇಖ್
ಆಮಿರ್ ಖಾನ್ ಹಾಗೂ ಕಿರಣ್ ರಾವ್ ಬೇರೆ ಆದರು. ಈ ವೇಳೆ ಆಮಿರ್ ಖಾನ್ ಅವರು ಸಾಕಷ್ಟು ಸುದ್ದಿ ಆದರು. ಫಾತಿಮಾ ಸನಾ ಶೇಖ್ ಜೊತೆ ರಿಲೇಶನ್ಶಿಪ್ ಹೊಂದಿದ್ದಕ್ಕೆ ಕಿರಣ್ ರಾವ್ಗೆ ಆಮಿರ್ ವಿಚ್ಛೇದನ ನೀಡಿದರು ಎನ್ನಲಾಗಿತ್ತು. ಆದರೆ, ಇದನ್ನು ಫಾತಿಮಾ ಅಲ್ಲ ಗಳೆದಿದ್ದರು.
ಅಕ್ಷಯ್ ಕುಮಾರ್ ಹಾಗೂ ಪ್ರಿಯಾಂಕಾ ಚೋಪ್ರಾ
ಅಕ್ಷಯ್ ಕುಮಾರ್ ಹಾಗೂ ಪ್ರಿಯಾಂಕಾ ಚೋಪ್ರಾ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದರು. ಇವರ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬಂದಿತ್ತು. ಸದ್ಯ, ಅಕ್ಷಯ್ ಕುಮಾರ್ ಅವರು ಟ್ವಿಂಕಲ್ ಖನ್ನಾ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಬಾಲಿವುಡ್ನ ಸ್ಟ್ರಾಂಗ್ ಕಪಲ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: Tiger 3: ಸಲ್ಮಾನ್ ಖಾನ್ ಮೇಲಿನ ಭಯಕ್ಕೆ ಕದ್ದುಮುಚ್ಚಿ ‘ಟೈಗರ್ 3’ ನೋಡಿದ ಅರ್ಜುನ್ ಕಪೂರ್?
ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ
ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಬೇರೆ ಅದರು. ಆ ಬಳಿಕ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಡೇಟಿಂಗ್ ಶುರು ಹಚ್ಚಿಕೊಂಡರು. ಇಬ್ಬರಿಗೂ ಮದುವೆ ಆಗುವ ಆಲೋಚನೆ ಇಲ್ಲ. ಆದರೆ, ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ