ಆ ದೃಶ್ಯಕ್ಕೆ ಒಳ ಉಡುಪಿನಲ್ಲಿ ಬಾ ಅಂದ್ರು; ಬಾಲಿವುಡ್ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ರಾಧಿಕಾ ಆಪ್ಟೆ

ಬಾಲಿವುಡ್ ನಟಿ ರಾಧಿಕಾ ಆಪ್ಟೆ ಚಿತ್ರರಂಗದ ಅಸಂಬದ್ಧ ಬೇಡಿಕೆಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಕಥೆಗೆ ಅಗತ್ಯವಿಲ್ಲದಿದ್ದರೂ ಅತಿಯಾದ ಬೋಲ್ಡ್ ದೃಶ್ಯ ಹಾಗೂ ಒಳ ಉಡುಪಿನಲ್ಲಿ ಆಕ್ಷನ್ ದೃಶ್ಯ ಮಾಡಲು ನಿರ್ದೇಶಕರು ಒತ್ತಾಯಿಸುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಈ ವಿಚಾರ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ನಟಿಯ ಬೆಂಬಲಕ್ಕೆ ಅಭಿಮಾನಿಗಳು ನಿಂತಿದ್ದಾರೆ.

ಆ ದೃಶ್ಯಕ್ಕೆ ಒಳ ಉಡುಪಿನಲ್ಲಿ ಬಾ ಅಂದ್ರು; ಬಾಲಿವುಡ್ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ

Updated on: Sep 19, 2026 | 1:25 PM

ಮುಖ್ಯಾಂಶಗಳು

  • ಶರ್ಟ್ ಬೇಡ, ಒಳ ಉಡುಪಿನಲ್ಲಿ ಫೈಟ್ ಮಾಡಿ
  • ನಿರ್ದೇಶಕರ ಅಸಂಬದ್ಧ ಬೇಡಿಕೆ ಬಿಚ್ಚಿಟ್ಟ ರಾಧಿಕಾ ಆಪ್ಟೆ
  • ಕಥೆಗೆ ಬೇಡದಿದ್ದರೂ ಕಿಸ್ ಮಾಡಲು ಒತ್ತಡ 

ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಹಾಗೂ ಬೋಲ್ಡ್ ಪಾತ್ರದ ಮೂಲಕ ಹೆಸರು ಮಾಡಿರುವ ನಟಿ ರಾಧಿಕಾ ಆಪ್ಟೆ ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಕಥೆಗೆ ಅಗತ್ಯವಿಲ್ಲದಿದ್ದರೂ ಅತಿಯಾದ ಬೋಲ್ಡ್ ದೃಶ್ಯಗಳಲ್ಲಿ ನಟಿಸುವಂತೆ ಕೆಲವು ನಿರ್ದೇಶಕರು ಹೇಗೆ ಒತ್ತಡ ಹೇರುತ್ತಿದ್ದರು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ನೀಡಿದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿವೆ.

‘ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯ ಮಾಡಿದ ನಂತರ ಚಿತ್ರರಂಗದಲ್ಲಿ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡಿತು. ನಾನು ಯಾವುದೇ ದೃಶ್ಯದಲ್ಲಾದರೂ ಸುಲಭವಾಗಿ ನಟಿಸುತ್ತೇನೆ ಎಂದು ಹಲವರು ಭಾವಿಸಿದರು. ‘ಈಕೆ ಹೇಗೆ ಬೇಕಿದ್ದರೂ ನಟಿಸುತ್ತಾಳೆ’ ಎಂಬ ಹಗುರವಾದ ಧೋರಣೆ ಅವರಲ್ಲಿತ್ತು. ಇದು ನನಗೆ ಆರಂಭದಲ್ಲಿ ದೊಡ್ಡ ಕಿರಿಕಿರಿಯನ್ನು ಉಂಟುಮಾಡಿತು’ ಎಂದಿದ್ದಾರೆ ರಾಧಿಕಾ.

‘ಅನಗತ್ಯವಾಗಿ ಸಹನಟನಿಗೆ ಕಿಸ್ ಮಾಡಲು ಹಲವು ಬಾರಿ ಒತ್ತಾಯಿಸುತ್ತಿದ್ದರು. ಸ್ವಲ್ಪ ಕಿಸ್ ಮಾಡಿ, 15 ಸೆಕೆಂಡ್ ನಟಿಸಿ ಎಂದು ಹಗುರವಾಗಿ ಹೇಳುತ್ತಿದ್ದರು. ಕಥೆಗೆ ಇದರ ಅಗತ್ಯವೇನು ಎಂದು ಕೇಳಿದರೆ ಅವರ ಬಳಿ ಉತ್ತರವೇ ಇರುತ್ತಿರಲಿಲ್ಲ. ಇಂತಹ ಅನುಭವಗಳು ನನಗೆ ಚಿತ್ರರಂಗದಲ್ಲಿ ಪದೇ ಪದೇ ಎದುರಾಗಿದ್ದವು’ ಎಂದು ಬೇಸರ ಹೊರಹಾಕಿದ್ದಾರೆ ರಾಧಿಕಾ.

‘ಒಮ್ಮೆ ಆ್ಯಕ್ಷನ್ ದೃಶ್ಯವೊಂದರಲ್ಲಿ ನಟಿಸುವಾಗ ಶರ್ಟ್ ಬಟನ್ ಹಾಕಬೇಡಿ ಎಂದು ಕೇಳಿಕೊಂಡಿದ್ದರು. ನಂತರ ಶರ್ಟ್ ತೆಗೆದು ಒಳಉಡುಪಿನಲ್ಲಿಯೇ ಫೈಟ್ ದೃಶ್ಯ ಮಾಡಿ ಎಂದು ವಿಚಿತ್ರ ಬೇಡಿಕೆ ಇಟ್ಟಿದ್ದರು. ಇದನ್ನು ಕೇಳಿ ನನಗೆ ತೀವ್ರ ಆಘಾತವಾಗಿತ್ತು. ನಾನು ತಕ್ಷಣವೇ ಆ ಬೇಡಿಕೆಯನ್ನು ನಿರಾಕರಿಸಿದೆ’ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಧುರಂದರ್’ ಸಿನಿಮಾ ಅನ್ನು ಟೀಕಿಸಿದರೇ ನಟಿ ರಾಧಿಕಾ ಆಪ್ಟೆ?

ಪ್ರಸ್ತುತ ನೆಟ್‌ಫ್ಲಿಕ್ಸ್‌ನ ‘ಲಸ್ಟ್ ಸ್ಟೋರೀಸ್ 3’ ಚಿತ್ರದಲ್ಲಿ ನಟಿ ರಾಧಿಕಾ ಆಪ್ಟೆ ಕಾಣಿಸಿಕೊಂಡಿದ್ದಾರೆ. ತಮ್ಮ ಕಲಾತ್ಮಕ ಅಭಿನಯದಿಂದಲೇ ಗುರುತಿಸಿಕೊಂಡಿರುವ ಅವರು ಇಂತಹ ಘಟನೆಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಸಿನಿಮಾ ರಂಗದಲ್ಲಿ ಮಹಿಳೆಯರಿಗೆ ಎದುರಾಗುವ ಇಂತಹ ಅಸಂಬದ್ಧ ಬೇಡಿಕೆಗಳ ವಿರುದ್ಧ ಅವರು ಕಿಡಿಕಾರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us