ದಕ್ಷಿಣದಲ್ಲಿ ಹಲವು ಪ್ಯಾನ್ ಇಂಡಿಯಾ (Pan India) ಹೀರೋಗಳಿದ್ದಾರೆ. ಬಹುತೇಕ ಹೀರೋಗಳು ಮದುವೆ ಆಗಿದ್ದಾರೆ. ಅವರ ಪತ್ನಿಯ ಬಗ್ಗೆಯೂ ಚರ್ಚೆ ಆಗುತ್ತದೆ. ಕೆಲವು ಹೀರೋಗಳು ಸ್ಟಾರ್ ನಟಿಯರನ್ನೇ ಮದುವೆ ಆಗಿದ್ದಾರೆ. ಮದುವೆ ಬಳಿಕ ಕೆಲವರು ನಟನೆ ತೊರೆದಿದ್ದಾರೆ. ಇನ್ನೂ ಕೆಲವರು ನಟನೆಯಲ್ಲಿ ಮುಂದುವರಿದಿದ್ದಾರೆ. ನಟಿಯರ ಶಿಕ್ಷಣದ ಬಗ್ಗೆ ಇಲ್ಲಿದೆ ಮಾಹಿತಿ.
ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಚಿತ್ರರಂಗದ ಜೊತೆ ನಂಟು ಹೊಂದಿದ್ದಾರೆ. ಅವರು ನಟನೆಯಿಂದ ದೂರ ಇದ್ದಾರೆ. ಸದ್ಯ, ಪತಿಯ ವೃತ್ತಿ ಜೀವನಕ್ಕೆ ಬೆಂಬಲವಾಗಿದ್ದಾರೆ. ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ನಲ್ಲಿ ಬಿಕಾಮ್ ಪದವಿ ಪಡೆದರು. ನಂತರ ಎಂಬಿಎ ಓದಿದರು. ಅವರಿಗೆ ಟೀಚರ್ ಆಗಬೇಕು ಎನ್ನುವ ಕನಸು ಇತ್ತು. ಆದರೆ, ನಟನೆ ಅವರನ್ನು ಸೆಳೆಯಿತು.
ಅಲ್ಲು ಅರ್ಜುನ್ ಹಾಗೂ ಅಲ್ಲು ಸ್ನೇಹಾ ರೆಡ್ಡಿ ದಂಪತಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇವರು ಬ್ಯೂಟಿಫುಲ್ ಕಪಲ್ ಎಂಬುದು ಫ್ಯಾನ್ಸ್ ಅಭಿಪ್ರಾಯ. ಸ್ನೇಹಾ ರೆಡ್ಡಿ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಕುಟುಂಬದ ಆರೈಕೆಯಲ್ಲಿ ಸ್ನೇಹಾ ಬ್ಯುಸಿ ಆಗಿದ್ದಾರೆ.
ಮಲಯಾಳಂ ಚಿತ್ರರಂಗದ ಸ್ಟಾರ್ ಹೀರೋ ದುಲ್ಕರ್ ಸಲ್ಮಾನ್ ಅವರ ಪತ್ನಿ ಅಮಲ್ ಸೂಫಿಯಾ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದರು. ಚೆನ್ನೈನಲ್ಲಿ ಅವರು ಶಿಕ್ಷಣ ಪಡೆದಿದ್ದಾರೆ. ಈಗ ಕುಟುಂಬದ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.
ದಳಪತಿ ವಿಜಯ್ ಪತ್ನಿ ಸಂಗೀತಾ ಅವರು ಶ್ರೀಲಂಕಾದವರು. ಅವರು ಇಂಗ್ಲೆಂಡ್ನಲ್ಲಿ ಸೆಟಲ್ ಆಗಿದ್ದಾರೆ ಎನ್ನಲಾಗಿದೆ. ಅವರು ಚೆನ್ನೈನಲ್ಲಿ ಪದವಿ ಪಡೆದಿದ್ದಾರೆ. ಇಬ್ಬರೂ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದು ವದಂತಿ ಅನ್ನೋದು ಬಳಿಕ ಗೊತ್ತಾಯಿತು.
ಸೂರ್ಯ ಹಾಗೂ ಅವರ ಪತ್ನಿ ಜ್ಯೋತಿಕಾ ಇಬ್ಬರೂ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಜ್ಯೋತಿಕಾ ಅವರು ಮುಂಬೈನಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರು ಸೈಕಾಲಜಿಯಲ್ಲಿ ಮಾಸ್ಟರ್ ಡಿಗ್ರೀ ಹೊಂದಿದ್ದಾರೆ.
ರಾಮ್ ಚರಣ್ ಕುಟುಂಬದ ರೀತಿ ಅವರ ಪತ್ನಿ ಉಪಾಸನಾ ಕೂಡ ಸಾಕಷ್ಟು ದೊಡ್ಡ ಹಿನ್ನೆಲೆ ಹೊಂದಿದ್ದಾರೆ. ಅವರು ಪ್ರಾಥಮಿಕ ಶಿಕ್ಷಣವನ್ನು ಹೈದರಾಬಾದ್ನಲ್ಲಿ ಪಡೆದರು. ನಂತರ ಲಂಡನ್ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆದರು. ಅವರು ಮಾರ್ಕೆಟಿಂಗ್ ಹಾಗೂ ಬಿಸ್ನೆಸ್ ಮ್ಯಾನೇಜ್ಮೆಂಟ್ನಲ್ಲಿ ಪದವಿ ಪಡೆದಿದ್ದಾರೆ.
ರಾಣಾ ದಗ್ಗುಬಾಟಿ ಅವರ ಪತ್ನಿ ಮಿಹೀಕಾ ಬಜಾಜ್ ಅವರು ಲಂಡನ್ನಲ್ಲಿ ಇಂಟೀರಿಯರ್ ಡಿಸೈನ್ ಡಿಗ್ರೀ ಪಡೆದಿದ್ದಾರೆ. ಅವರು ತಮ್ಮದೇ ಡೆಕೋರ್ ಬಿಸ್ನೆಸ್ ಹೊಂದಿದ್ದಾರೆ. ಇವೆಂಟ್ಗಳನ್ನು ಅವರು ಮಾಡುತ್ತಾರೆ.
ಜೂನಿಯರ್ ಎನ್ಟಿಆರ್ ಅವರ ಪತ್ನಿ ಲಕ್ಷ್ಮೀ ಪ್ರಣತಿ ಅವರು ಹೈದರಾಬಾದ್ನಲ್ಲಿ ಶಿಕ್ಷಣ ಪಡೆದರು. ನಂತರ ನಜೆರ್ ಜೂನಿಯರ್ ಕಾಲೇಜ್ನಲ್ಲಿ ಪದವಿ ಪಡೆದರು.
ಇದನ್ನೂ ಓದಿ: ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ನಿರ್ದೇಶಕಿ ಬಗ್ಗೆ ನಿಮಗೆಷ್ಟು ಗೊತ್ತು?
ಮಹೇಶ್ ಬಾಬು ಅವರು ತೆಲುಗುನಲ್ಲಿ ಸೂಪರ್ಸ್ಟಾರ್. ಅವರು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಕೆ ರೆಡಿ ಆಗಿದ್ದಾರೆ. ಅವರ ಪತ್ನಿ ನಮ್ರತಾ ಅವರು ನಟಿ ಆಗಿದ್ದರು. ಮದುವೆ ನಂತರ ಚಿತ್ರರಂಗ ತೊರೆದರು. ಅವರು ಮುಂಬೈನಲ್ಲಿ ಪದವಿ ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:37 am, Fri, 15 December 23