ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟ ಕೋಮಲ್ ಕುಮಾರ್; ಚಿತ್ರದ ಶೀರ್ಷಿಕೆ ‘ಕೋಣ’
ಡಾರ್ಕ್ ಕಾಮಿಡಿ ಶೈಲಿಯಲ್ಲಿ ‘ಕೋಣ’ ಸಿನಿಮಾ ಮೂಡಿಬರಲಿದೆ. ಎಸ್. ಹರಿಕೃಷ್ಣ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. 2024ರ ಜನವರಿಯಲ್ಲಿ ಈ ಸಿನಿಮಾಗೆ ಶೂಟಿಂಗ್ ಶುರು ಆಗಲಿದೆ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ಡಿಫರೆಂಟ್ ಶೀರ್ಷಿಕೆಯ ಕಾರಣದಿಂದ ಈ ಸಿನಿಮಾ ಗಮನ ಸೆಳೆಯುತ್ತಿದೆ.
ಕನ್ನಡ ಚಿತ್ರರಂಗದಲ್ಲಿ (Sandalwood) ನಟ ಕೋಮಲ್ ಕುಮಾರ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ತಮ್ಮ ಸಹಜಾಭಿನಯದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಹಾಸ್ಯದ ಪಾತ್ರಗಳಲ್ಲಿ ಅವರನ್ನು ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ. ವಿಶೇಷ ಏನೆಂದರೆ, ಕೋಮಲ್ ಕುಮಾರ್ (Komal Kumar) ಅವರು ಈಗ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಟೈಟಲ್ ಕೂಡ ವಿಶೇಷವಾಗಿದೆ. ‘ಕೋಣ’ ಎಂದು ಈ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನಾವರಣ ಮಾಡಲಾಯಿತು. ಈ ಸಿನಿಮಾವು ಕನ್ನಡ ಮಾತ್ರವಲ್ಲದೇ ಒಟ್ಟು ಐದು ಭಾಷೆಗಳಲ್ಲಿ ನಿರ್ಮಾಣ ಆಗಲಿದೆ. ‘ಕೋಣ’ ಸಿನಿಮಾ (Kona Movie) ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..
ಡಾರ್ಕ್ ಕಾಮಿಡಿ ಶೈಲಿಯಲ್ಲಿ ‘ಕೋಣ’ ಸಿನಿಮಾ ಮೂಡಿಬರಲಿದೆ. ಎಸ್. ಹರಿಕೃಷ್ಣ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಜಗ್ಗೇಶ್ ನಟನೆಯ ‘8 ಎಂಎಂ’ ಸಿನಿಮಾಗೆ ಹರಿಕೃಷ್ಣ ಅವರು ನಿರ್ದೇಶನ ಮಾಡಿದ್ದರು. ಈಗ ಅವರು ‘ಕೋಣ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಒಂದು ನೈಜ ಘಟನೆಯನ್ನು ಆಧರಿಸಿ ಈ ಚಿತ್ರ ತಯಾರಾಗಲಿದೆ. ಕೋಮಲ್ ಕುಮಾರ್ ಅವರು ಈವರೆಗೂ ಕಾಣಿಸಿಕೊಂಡಿರದ ಪಾತ್ರವನ್ನು ‘ಕೋಣ’ ಸಿನಿಮಾದಲ್ಲಿ ನಿಭಾಯಿಸಲಿದ್ದಾರೆ.
ಇದನ್ನೂ ಓದಿ: ಮಮ್ಮುಟ್ಟಿ ಹೊಸ ಪ್ಯಾನ್ ಇಂಡಿಯಾ ಸಿನಿಮಾ ‘ಬ್ರಹ್ಮಯುಗಂ’; ಕನ್ನಡದಲ್ಲೂ ಬರಲಿದೆ ಈ ಚಿತ್ರ
ಪ್ರಾಣಿಗಳೇ ಮುಖ್ಯ ಪಾತ್ರದಲ್ಲಿ ಇರುವ ಅನೇಕ ಸಿನಿಮಾಗಳು ಕನ್ನಡದಲ್ಲಿ ಈಗಾಗಲೇ ಬಂದಿವೆ. ಆನೆ, ಕೋತಿ, ನಾಯಿ ಮುಂತಾದ ಪ್ರಾಣಿಗಳ ವಿಷಯವನ್ನು ಕಥೆಯ ಕೇಂದ್ರವಾಗಿಸಿಕೊಂಡ ಸಿನಿಮಾಗಳು ಸಾಕಷ್ಟಿವೆ. ಈಗ ಕೋಮಲ್ ಕುಮಾರ್ ಅವರ ಹೊಸ ಸಿನಿಮಾಗೆ ‘ಕೋಣ’ ಎಂದು ಹೆಸರು ಇಟ್ಟಿರುವುದು ಈ ಕಾರಣದಿಂದ ಆಸಕ್ತಿ ಮೂಡಿಸಿದೆ. 2024ರ ಜನವರಿಯಲ್ಲಿ ಈ ಸಿನಿಮಾಗೆ ಶೂಟಿಂಗ್ ಶುರು ಆಗಲಿದೆ ಎಂದು ನಿರ್ದೇಶಕ ಹರಿಕೃಷ್ಣ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಜ್ಯೋತಿಕಾ? 20 ವರ್ಷದ ಬಳಿಕ ದಳಪತಿ ವಿಜಯ್ ಜೊತೆ ನಟನೆ
ವಿನೋದ್ ಕುಮಾರ್ ಮತ್ತು ಸೆಲ್ವನ್ ಅವರು ‘ತೇಜ್ವಿನ್ ಪ್ರೊಡಕ್ಷನ್’ ಲಾಂಛನದ ಮೂಲಕ ‘ಕೋಣ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವಿನೋದ್ ಕುಮಾರ್ ಬಿ. ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಉಮೇಶ್ ಆರ್. ಬಿ. ಅವರ ಸಂಕಲನ ಮಾಡುತ್ತಿದ್ದಾರೆ. ಸಂಜಯ್ ಮತ್ತು ಉತ್ತಮ್ ಸ್ವರೂಪ್ ಅವರು ‘ಕೋಣ’ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.