ಹಾಸ್ಯ ನಟ ರಾಜು ಶ್ರೀವಾತ್ಸವ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ; ಪವಾಡ ನಡೆದರಷ್ಟೇ ಬಚಾವ್​?

ಆಗಸ್ಟ್ 10ರಂದು ದೆಹಲಿಯ ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ರಾಜುಗೆ ಹೃದಯಾಘಾತವಾಯಿತು. ನಂತರ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಳೆದ ಒಂದು ವಾರದಿಂದ ಅವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾಸ್ಯ ನಟ ರಾಜು ಶ್ರೀವಾತ್ಸವ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ; ಪವಾಡ ನಡೆದರಷ್ಟೇ ಬಚಾವ್​?
ರಾಜು
Edited By:

Updated on: Aug 18, 2022 | 5:11 PM

ಹಾಸ್ಯ ನಟ, ಸ್ಟ್ಯಾಂಡಪ್​ ಕಾಮಿಡಿಯನ್ ರಾಜು ಶ್ರೀವಾತ್ಸವ್ (Raju Srivastav) ಅವರು ಆಸ್ಪತ್ರೆ ಸೇರಿ ಒಂದು ವಾರ ಕಳೆದಿದೆ. ಆದರೆ, ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿಲ್ಲ. ಅವರು ದಿನ ಕಳೆದಂತೆ ಕುಗ್ಗುತ್ತಿದ್ದಾರೆ. ಈಗ ಅವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ರಾಜು ಶ್ರೀವಾತ್ಸವ್ ಫ್ಯಾನ್ಸ್ ಆತಂಕಗೊಂಡಿದ್ದಾರೆ. ಪವಾಡ ನಡೆದು ಅವರು ಬದುಕಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಅಧಿಕೃತ ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಆಗಸ್ಟ್ 10ರಂದು ದೆಹಲಿಯ ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ರಾಜುಗೆ ಹೃದಯಾಘಾತವಾಯಿತು. ನಂತರ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಳೆದ ಒಂದು ವಾರದಿಂದ ಅವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ರಾಜು ಶ್ರೀವಾತ್ಸವ್ ತಂಡದವರು ಇತ್ತೀಚೆಗೆ ಹೇಳಿದ್ದರು. ಆದರೆ, ರಾಜು ಆರೋಗ್ಯ ದಿನ ಕಳೆದಂತೆ ಕುಸಿಯುತ್ತಿದೆ ಎಂದು ಮೂಲಗಳು ಹೇಳಿರುವುದಾಗಿ ಹಿಂದುಸ್ತಾನ್ ಟೈಮ್ಸ್​ ವರದಿ ಮಾಡಿದೆ.

‘ರಾಜು ವೀಕ್ ಆಗುತ್ತಿದ್ದಾರೆ. ಅವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದೆ. ರಾಜು ಬದುಕಬೇಕಾದರೆ ಪವಾಡ ನಡೆಯಬೇಕು’ ಎಂದು ಅವರ ಆಪ್ತರ ಹೇಳಿರುವ ಬಗ್ಗೆ ವರದಿ ಆಗಿದೆ. ಇದು ಅವರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ.

ಇದನ್ನೂ ಓದಿ: ಜಿಮ್ ಮಾಡುತ್ತಿದ್ದ ವೇಳೆ ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಹಿಂದಿ ಚಿತ್ರರಂಗದಿಂದ ರಾಜು ಶ್ರೀವಾತ್ಸವ್​ ಬಣ್ಣದ ಬದುಕು ಆರಂಭಿಸಿದರು. ‘ಮೈನೆ ಪ್ಯಾರ್ ಕಿಯಾ’, ‘ಬಾಜಿಗರ್​’, ‘ಬಾಂಬೆ ಟು ಗೋವಾ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಂತರ ಸ್ಟ್ಯಾಂಡಪ್​ ಕಾಮಿಡಿಯನ್ ಆಗಿಯೂ ಗುರುತಿಸಿಕೊಂಡರು. ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್​’ನಲ್ಲಿ ಎರಡನೇ ರನ್ನರ್​ ಅಪ್ ಆದರು. ಇನ್ನು, ರಿಯಾಲಿಟಿ ಶೋನಲ್ಲೂ ಶ್ರೀವಾತ್ಸವ್ ಭಾಗವಹಿಸಿದ್ದರು. ಹಿಂದಿ ಬಿಗ್ ಬಾಸ್​ನ ಮೂರನೇ ಸೀಸನ್​ಗೆ ಅವರು ಸ್ಪರ್ಧಿ ಆಗಿದ್ದರು. ‘ಕಾಮಿಡಿ ಕಾ ಮಹಾ ಮುಕ್ಬಾಲ್​’, ‘ನಾಚ್ ಬಲಿಯೇ’ ರಿಯಾಲಿಟಿ ಶೋನ ಆರನೇ ಸೀಸನ್​ಗೆ ಅವರು ಸ್ಪರ್ಧಿ ಆಗಿದ್ದರು.