Rakhi Sawant: ಗಂಡನ ಮೇಲೆ ತಾನೇ ಕೇಸ್​ ಹಾಕಿ ಜೈಲಿಗೆ ಕಳಿಸಿ, ಈಗ ಜಾಮೀನು ಸಿಗಲಿ ಅಂತ ಪ್ರಾರ್ಥಿಸಿದ ರಾಖಿ ಸಾವಂತ್​

Rakhi Sawant Husband | Adil Khan: ಈಗ ರಾಖಿ ಸಾವಂತ್​ ಅವರ ಮನಸ್ಸು ಕರಗಿದೆಯೇ? ಮತ್ತೆ ಅವರು ಆದಿಲ್​ ಖಾನ್​ ಜೊತೆ ಸಂಸಾರ ಮಾಡುತ್ತಾರಾ? ಆ ಬಗ್ಗೆಯೂ ರಾಖಿ ಮಾತನಾಡಿದ್ದಾರೆ.

Rakhi Sawant: ಗಂಡನ ಮೇಲೆ ತಾನೇ ಕೇಸ್​ ಹಾಕಿ ಜೈಲಿಗೆ ಕಳಿಸಿ, ಈಗ ಜಾಮೀನು ಸಿಗಲಿ ಅಂತ ಪ್ರಾರ್ಥಿಸಿದ ರಾಖಿ ಸಾವಂತ್​
ರಾಖಿ ಸಾವಂತ್

Updated on: Mar 16, 2023 | 12:26 PM

ನಟಿ, ಡ್ಯಾನ್ಸರ್ ರಾಕಿ ಸಾವಂತ್ (Rakhi Sawant) ಅವರನ್ನು ಅರ್ಥ ಮಾಡಿಕೊಳ್ಳಲು ನೆಟ್ಟಿಗರಿಗೆ ಸಾಧ್ಯವಾಗುತ್ತಿಲ್ಲ. ದಿನಕ್ಕೊಂದು ರೀತಿ ವರ್ತಿಸುವ ಅವರ ಬಗ್ಗೆ ಯಾವುದೇ ರೀತಿ ನಿರ್ಧಾರಕ್ಕೆ ಬರುವುದು ಕಷ್ಟ. ರಾಖಿ ಸಾವಂತ್​ ಅವರ ಸಂಸಾರದ ಗಲಾಟೆ ಜಗಜ್ಜಾಹೀರಾಗಿದೆ. ಪತಿ ಆದಿಲ್​ ಖಾನ್ (Adil Khan)​ ಮೇಲೆ ಹಲವು ಗಂಭೀರ ಆರೋಪ ಹೊರಿಸಿ, ಕೇಸ್​ ಹಾಕಿದ್ದಾರೆ ರಾಖಿ. ಅದರ ಪರಿಣಾಮವಾಗಿ ಆದಿಲ್​ ಖಾನ್​ ಜೈಲಿನಲ್ಲಿದ್ದಾರೆ. ಅಚ್ಚರಿ ಏನೆಂದರೆ ಈಗ ಗಂಡನಿಗೆ ಜಾಮೀನು ಸಿಗಲಿ ಎಂದು ಅವರು ಪ್ರಾರ್ಥಿಸುತ್ತಿದ್ದಾರೆ! ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿರುವ ರಾಖಿ ಸಾವಂತ್​ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ.

ರಾಖಿ ಸಾವಂತ್ ಅವರು ದುಬೈನಲ್ಲಿ ಡ್ಯಾನ್ಸ್​ ಕ್ಲಾಸ್​ ಹೊಂದಿದ್ದಾರೆ. ಅದರ ಸಲುವಾಗಿ ಅವರು ಆಗಾಗ ದುಬೈಗೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ದುಬೈನಿಂದ ವಾಪಸ್​ ಬರುವಾಗ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಇಂದು ಬೆಳಗ್ಗೆ ಪ್ರಾರ್ಥನೆ ಮಾಡುವಾಗ ನನಗೆ ಈ ಆಲೋಚನೆ ಬಂತು. ರಂಜಾನ್​ ಎಂದರೆ ಕ್ಷಮಿಸುವ ಮಾಸ. ನಾನು ಆದಿಲ್​ನನ್ನು ಕ್ಷಮಿಸದೇ ಇರಬಹುದು. ಆದರೆ ಅವನಿಗೆ ಜಾಮೀನು ಸಿಗಲಿ ಅಂತ ಪ್ರಾರ್ಥಿಸುತ್ತೇನೆ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಇದನ್ನೂ ಓದಿ: Rakhi Sawant: ದುಬೈನಲ್ಲಿ ರಾಖಿ ಸಾವಂತ್​ಗೆ ಹೊಸ ಮನೆ, ಕಾರು; ಆದರೂ ತಪ್ಪಲಿಲ್ಲ ಕಣ್ಣೀರು

ಇದನ್ನೂ ಓದಿ
Rakhi Sawant Detained: ಕಾಂಟ್ರವರ್ಸಿ ನಟಿ ರಾಖಿ ಸಾವಂತ್​ ಅರೆಸ್ಟ್​; ಶೆರ್ಲಿನ್​ ಚೋಪ್ರಾ ಹಾಕಿದ್ದ ಕೇಸ್​ನಲ್ಲಿ ಹೆಚ್ಚಿತು ಸಂಕಷ್ಟ
Rakhi Sawant Marriage: ರಾಖಿ ಸಾವಂತ್​ ಜೊತೆ ಮದುವೆ ಆಗಿದ್ದು ನಿಜ ಎಂದು ಒಪ್ಪಿಕೊಂಡ ಆದಿಲ್ ಖಾನ್​
Rakhi Sawant: ಫಾತಿಮಾ ಅಂತ ಹೆಸರು ಬದಲಿಸಿಕೊಂಡ ರಾಖಿ ಸಾವಂತ್​; ಆದಿಲ್​​ ಜತೆಗಿನ ಶಾದಿ ರಹಸ್ಯ ಬಹಿರಂಗ
Rakhi Sawant: ಮತ್ತೊಂದು ವಿವಾಹ ಆದ ರಾಖಿ ಸಾವಂತ್; ಆದಿಲ್ ಜತೆಗಿನ ಮದುವೆ ಫೋಟೋ ವೈರಲ್

‘ನಾನು ಒಳ್ಳೆಯ ಪತ್ನಿ ಆಗಿದ್ದೆ. ಆದರೆ ಅವನು ನನ್ನ ಜೀವನ ಹಾಳು ಮಾಡಿದ. ನಾನು ಅಷ್ಟು ಪ್ರೀತಿ ಮಾಡಬಾರದಿತ್ತು. ಅವನಿಗೆ ಜಾಮೀನು ಸಿಗಲಿ. ನಾನು ಮಾಡಿದ ಆರೋಪಗಳು ಗಂಭೀರವಾಗಿವೆ. ಮೀಡಿಯಾ ಮೂಲಕ ಅವನಿಗೆ ನಾನು ಸಂದೇಶ ಕಳಿಸುತ್ತಿದ್ದೇನೆ. ಜಾಮೀನು ಸಿಕ್ಕ ಬಳಿಕ ನೀನು ಬೇರೆ ಯಾರ ಜೀವನವನ್ನೂ ಹಾಳು ಮಾಡಬೇಡ. ನೀನು ಬದಲಾಗಲು ಪ್ರಯತ್ನಿಸು. ಮದುವೆಯಾದರೆ ನನ್ನ ಜೊತೆ ನಡೆದುಕೊಂಡ ಹಾಗೆ ಆ ವ್ಯಕ್ತಿಯ ಜೊತೆ ನಡೆದುಕೊಳ್ಳಬೇಡ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಇದನ್ನೂ ಓದಿ: Rakhi Sawant: ‘ನಾನು ಹಿಂದೂ ಅಂತ ಆದಿಲ್​ ಖಾನ್​ ಮನೆಯವರು ನನ್ನ ಸೇರಿಸಿಕೊಳ್ತಿಲ್ಲ’; ಮೈಸೂರಲ್ಲಿ ರಾಖಿ ಸಾವಂತ್​ ಕಣ್ಣೀರು

ಇಷ್ಟೆಲ್ಲ ಹೇಳಿರುವ ರಾಖಿ ಸಾವಂತ್​ ಅವರ ಮನಸ್ಸು ಕರಗಿದೆಯೇ? ಮತ್ತೆ ಅವರು ಆದಿಲ್​ ಖಾನ್​ ಜೊತೆ ಸಂಸಾರ ಮಾಡುತ್ತಾರಾ? ‘ಎಂದಿಗೂ ನಾನು ಅವನ ಬಳಿ ಮತ್ತೆ ಹೋಗುವುದಿಲ್ಲ. ಇನ್ಮುಂದೆ ನಾನು ಒಬ್ಬಳೇ ಜೀವನ ಕಳೆಯಬೇಕು. ಆತನಿಗೆ ಒಳ್ಳೆಯದಾಗಲಿ ಅಂತ ನಾನು ಪ್ರಾರ್ಥಿಸುತ್ತಿದ್ದೇನೆ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ. 2022ರಲ್ಲಿ ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಮದುವೆ ಆಯಿತು. ಒಂದಷ್ಟು ತಿಂಗಳ ಕಾಲ ಆ ವಿಚಾರವನ್ನು ಮುಚ್ಚಿಡಲಾಗಿತ್ತು. ಶಾದಿ ಸಮಾಚಾರ ಬಹಿರಂಗ ಆದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us