ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ಚಿತ್ರವನ್ನೂ ಮಣಿಸಲಿದೆ ‘ಕಾಂತಾರ’; ಏನಿದು ಲೆಕ್ಕಾಚಾರ?
ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ‘ಕಾಂತಾರ’ ಸಿನಿಮಾ ಅಬ್ಬರಿಸುತ್ತಿದೆ. ಸೋಮವಾರ (ಅಕ್ಟೋಬರ್ 24) ಈ ಚಿತ್ರ 1.90 ಕೋಟಿ ರೂ. ಬಾಚಿಕೊಂಡಿದೆ. ಈ ಮೂಲಕ ಸಿನಿಮಾದ ಒಟ್ಟು ಕಲೆಕ್ಷನ್ 24.15 ಕೋಟಿ ರೂಪಾಯಿ ಆಗಿದೆ.
ಇತ್ತೀಚೆಗೆ ಬಾಲಿವುಡ್ನವರು ಹಾಕುತ್ತಿರುವ ಶ್ರಮವೆಲ್ಲವೂ ವ್ಯರ್ಥವಾಗುತ್ತಿದೆ. ಈ ವರ್ಷ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಚಿತ್ರಗಳ ಲೆಕ್ಕ ಹಾಕಲು ಹೋದರೆ ಒಂದು ಕೈನ ಬೆರಳುಗಳು ಮಾತ್ರ ಸಾಕು. ಈ ಮಧ್ಯೆ ಹಿಂದಿಗೆ ಡಬ್ ಆಗಿ ತೆರೆ ಕಾಣುತ್ತಿರುವ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿವೆ. ಇಂದು (ಅಕ್ಟೋಬರ್ 25) ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’ (Ram Setu) ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾಗಳು ರಿಲೀಸ್ ಆಗಿವೆ. ಈ ಚಿತ್ರಗಳಿಗೆ ಒಳ್ಳೆಯ ವಿಮರ್ಶೆ ಸಿಗುತ್ತಿಲ್ಲ. ಹೀಗಾಗಿ, ‘ಕಾಂತಾರ’ (Kantara Movie) ಸಿನಿಮಾಗೆ ಇದು ಪ್ಲಸ್ ಆಗಲಿದೆ.
ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ‘ಕಾಂತಾರ’ ಸಿನಿಮಾ ಅಬ್ಬರಿಸುತ್ತಿದೆ. ಸೋಮವಾರ (ಅಕ್ಟೋಬರ್ 24) ಈ ಚಿತ್ರ 1.90 ಕೋಟಿ ರೂ. ಬಾಚಿಕೊಂಡಿದೆ. ಈ ಮೂಲಕ ಸಿನಿಮಾದ ಒಟ್ಟು ಕಲೆಕ್ಷನ್ 24.15 ಕೋಟಿ ರೂಪಾಯಿ ಆಗಿದೆ. ಈ ವಾರ ದೀಪಾವಳಿ ಇದೆ. ಹೀಗಾಗಿ ಸಾಲು ಸಾಲು ರಜೆಗಳಿವೆ. ಇದು ಚಿತ್ರತಂಡಕ್ಕೆ ಸಹಕಾರಿ ಆಗುವ ನಿರೀಕ್ಷೆ ಇದೆ.
‘ರಾಮ್ ಸೇತು’ ಹಾಗೂ ‘ಥ್ಯಾಂಕ್ ಗಾಡ್’ ಚಿತ್ರದಿಂದ ‘ಕಾಂತಾರ’ ಕಲೆಕ್ಷನ್ಗೆ ಹೊಡೆತ ಉಂಟಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ಎರಡೂ ಚಿತ್ರಕ್ಕೆ ಹೇಳಿಕೊಳ್ಳುವಂತಹ ವಿಮರ್ಶೆ ಸಿಕ್ಕಿಲ್ಲ. ‘ರಾಮ್ ಸೇತು’ ಚಿತ್ರದಲ್ಲಿ ಕಥೆಯ ನರೇಷನ್ ಉತ್ತಮವಾಗಿಲ್ಲ ಎಂದು ಕೆಲವರು ಕೊಂಕು ತೆಗೆದಿದ್ದಾರೆ. ‘ಥ್ಯಾಂಕ್ ಗಾಡ್’ ಚಿತ್ರ ಕೂಡ ಸಪ್ಪೆಯಾಗಿದೆ ಎಂಬುದು ವಿಮರ್ಶಕರ ಅಭಿಪ್ರಾಯ. ಈ ಎಲ್ಲಾ ಕಾರಣದಿಂದ ‘ಕಾಂತಾರ’ ಈ ವಾರವೂ ಬಾಕ್ಸ್ ಆಫೀಸ್ನಲ್ಲಿ ಬಂಗಾರದ ಬೆಳೆ ತೆಗೆಯುವ ಸೂಚನೆ ಸಿಕ್ಕಿದೆ.
ಇದನ್ನೂ ಓದಿ: 3 ಸಾವಿರ ಮಂದಿಗೆ ‘ಕಾಂತಾರ’ ಸಿನಿಮಾನ ಉಚಿತವಾಗಿ ತೋರಿಸಿದ ಹೊಂಬಾಳೆ ಫಿಲ್ಮ್ಸ್; ಎಲ್ಲಿ?
‘ಕಾಂತಾರ’ ಚಿತ್ರಕ್ಕೆ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೇರಿ ಅನೇಕರು ಈ ಚಿತ್ರವನ್ನು ಹೊಗಳಿದ್ದಾರೆ. ಇದರಿಂದ ಚಿತ್ರಕ್ಕೆ ಹೊಸ ಬಲ ಸಿಕ್ಕಿದೆ. ಸ್ಟಾರ್ ನಟರ ಎರಡು ಚಿತ್ರಗಳು ರಿಲೀಸ್ ಆಗಿರುವುದರಿಂದ ‘ಕಾಂತಾರ’ ಚಿತ್ರಕ್ಕೆ ಸಿಕ್ಕ ಥಿಯೇಟರ್ಗಳ ಸಂಖ್ಯೆ ಕಡಿಮೆ ಆಗಿತ್ತು. ಎರಡೂ ಚಿತ್ರಕ್ಕೆ ಸಾಧಾರಣ ವಿಮರ್ಶೆ ಸಿಕ್ಕಿರುವುದರಿಂದ ‘ಕಾಂತಾರ’ ಶೋಗಳ ಸಂಖ್ಯೆ ಮತ್ತೆ ಹೆಚ್ಚುವ ನಿರೀಕ್ಷೆ ಇದೆ.