‘ರಾಮಾಯಣ’ ಸಿನಿಮಾದ ಜಟಾಯು ದೃಶ್ಯ ಮಾಡಲು ಬೇಕಾಯ್ತು ಆರೂವರೆ ವರ್ಷ

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದ ರಾವಣ ಹಾಗೂ ಜಟಾಯು ನಡುವಿನ ಯುದ್ಧದ ದೃಶ್ಯವನ್ನು ತೆರೆಮೇಲೆ ತರಲು ಬರೋಬ್ಬರಿ ಆರು ವರ್ಷಗಳು ಬೇಕಾಗಿವೆ. ಸಾವಿರಾರು ಕಲಾವಿದರ ಪರಿಶ್ರಮದಿಂದ ಈ ಸಾಹಸ ಸನ್ನಿವೇಶ ಮೂಡಿಬಂದಿದ್ದು, ಪುಷ್ಪಕ ವಿಮಾನದ ವಿನ್ಯಾಸಕ್ಕೂ ಎರಡು ವರ್ಷಗಳ ಕಾಲ ಕಷ್ಟಪಡಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

‘ರಾಮಾಯಣ’ ಸಿನಿಮಾದ ಜಟಾಯು ದೃಶ್ಯ ಮಾಡಲು ಬೇಕಾಯ್ತು ಆರೂವರೆ ವರ್ಷ
ರಾಮಾಯಣ
Edited By:

Updated on: Nov 09, 2026 | 8:13 AM

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ‘ ಸಿನಿಮಾ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಸಿನಿಮಾದಲ್ಲಿ ಬರುವ ರಾವಣ ಹಾಗೂ ಜಟಾಯು ನಡುವಿನ ರೋಮಾಂಚಕ ಯುದ್ಧದ ದೃಶ್ಯವನ್ನು ತೆರೆಮೇಲೆ ತರಲು ಬರೋಬ್ಬರಿ ಆರು ವರ್ಷಗಳ ಕಠಿಣ ಪರಿಶ್ರಮ ಬೇಕಾಯಿತಂತೆ. ಈ ದೃಶ್ಯದ ನಿರ್ಮಾಣದ ಹಿಂದೆ ಸಾವಿರಾರು ಕಲಾವಿದರು ಹಾಗೂ ತಂತ್ರಜ್ಞರ ಶ್ರಮ ಅಡಗಿದೆ ಎಂದು ನಿರ್ದೇಶಕರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಚಿತ್ರದ ಈ ಪ್ರಮುಖ ಸಾಹಸ ಸನ್ನಿವೇಶದ ಬಗ್ಗೆ ನಿರ್ದೇಶಕ ನಿತೇಶ್ ತಿವಾರಿ ಮಾತನಾಡಿದ್ದಾರೆ. ಆರಂಭಿಕ ಹಂತದ ಕಲ್ಪನೆಯಿಂದ ಹಿಡಿದು ಅಂತಿಮ ಹಂತದ ಕೆಲಸ ಮುಗಿಯುವವರೆಗೆ ಕೇವಲ ಒಂದೇ ಒಂದು ಆಕ್ಷನ್ ದೃಶ್ಯಕ್ಕೆ ಆರು ವರ್ಷಗಳು ಹಿಡಿದಿವೆ ಎಂದು ಅವರು ತಿಳಿಸಿದ್ದಾರೆ. ಈ ದೃಶ್ಯವನ್ನು ಮರುಸೃಷ್ಟಿಸಲು ಪಟ್ಟಿರುವ ಪರಿಶ್ರಮದ ಬಗ್ಗೆ ಗಂಟೆಗಟ್ಟಲೆ ಮಾತನಾಡಬಹುದು ಎಂದೂ ಅವರು ಹೇಳಿಕೊಂಡಿದ್ದಾರೆ.

Loading...

ಇದೇ ವೇಳೆ ಚಿತ್ರದಲ್ಲಿ ಬರುವ ರಾವಣನ ಪ್ರಸಿದ್ಧ ಪುಷ್ಪಕ ವಿಮಾನದ ವಿನ್ಯಾಸದ ಬಗ್ಗೆಯೂ ನಿರ್ದೇಶಕರು ಕುತೂಹಲಕಾರಿ ಸಂಗತಿ ಹಂಚಿಕೊಂಡಿದ್ದಾರೆ. ಪುಷ್ಪಕ ವಿಮಾನದ ಅಂತಿಮ ರೂಪವನ್ನು ಪಡೆಯಲು ಅವರ ತಂಡ ಸುಮಾರು ಎರಡು ವರ್ಷಗಳನ್ನು ತೆಗೆದುಕೊಂಡಿದೆ. ಕೇವಲ ವಿಮಾನದ ವಿನ್ಯಾಸಕ್ಕಾಗಿಯೇ ಕಲಾವಿದರು ನಲ್ವತ್ತರಿಂದ ಐವಷ್ಟು ವಿಭಿನ್ನ ನಮೂನೆಗಳನ್ನು ಸಿದ್ಧಪಡಿಸಿ ಅಂತಿಮವಾಗಿ ಅತ್ಯುತ್ತಮವಾದದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಪುಷ್ಪಕ ವಿಮಾನದ ವಿನ್ಯಾಸವು ಸಂಪೂರ್ಣವಾಗಿ ಬದಲಾದ ಕಾರಣ, ಅದಕ್ಕೆ ತಕ್ಕಂತೆ ರಾವಣ ಮತ್ತು ಜಟಾಯು ಯುದ್ಧದ ಸನ್ನಿವೇಶದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಾಯಿತು ಎಂದು ನಿತೇಶ್ ತಿಳಿಸಿದ್ದಾರೆ. ಕೇವಲ ಹಾರುವ ವಾಹನದಂತೆ ತೋರದೆ, ಅದರ ಹಿಂದೆ ತಾರ್ಕಿಕ ಹಾಗೂ ವೈಜ್ಞಾನಿಕ ಹಿನ್ನೆಲೆ ಇರಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆ ಕಾಲದಲ್ಲೂ ಎಲ್ಲದರ ಹಿಂದೆ ಸೂಕ್ತ ವಿಜ್ಞಾನ ಇತ್ತು ಎಂಬ ನಂಬಿಕೆಯಿಂದಲೇ ಈ ವಿನ್ಯಾಸ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್​​: ರಾಮ-ಸೀತೆ-ರಾವಣನ ಪರಿಚಯಿಸಿದ ನಿರ್ದೇಶಕ ನಿತೇಶ್ ತಿವಾರಿ

ದೃಶ್ಯಕಾವ್ಯವಾಗಿ ಮೂಡಿಬರುತ್ತಿರುವ ಈ ಸಿನಿಮಾದ ಒಂದೊಂದು ಭಾಗಕ್ಕೂ ನಿರ್ದೇಶಕರು ಮತ್ತು ಇಡೀ ತಂತ್ರಜ್ಞರ ತಂಡ ಅಪಾರ ಶ್ರಮ ವಹಿಸಿದೆ. ಪ್ರತಿಯೊಂದು ಸನ್ನಿವೇಶವೂ ಪ್ರೇಕ್ಷಕರಿಗೆ ಹೊಸ ಅನುಭವ ನೀಡಬೇಕು ಎಂಬ ಉದ್ದೇಶದಿಂದ ಅತ್ಯಂತ ನಿಖರವಾಗಿ ಈ ಚಿತ್ರವನ್ನು ರೂಪಿಸಲಾಗಿದೆ. ಸದ್ಯ ಈ ವಿಚಾರವು ಸಿನಿಪ್ರಿಯರಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us