ಬಾಲಿವುಡ್​ ಸಿನಿಮಾದಲ್ಲಿರುವ ಟಾಪ್ ಕಿಸ್ಸಿಂಗ್ ದೃಶ್ಯಗಳು ಇವೇ ನೋಡಿ..

| Updated By: ರಾಜೇಶ್ ದುಗ್ಗುಮನೆ

Updated on: Oct 12, 2023 | 8:00 AM

ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅವರು ಅನೇಕರ ಬಾರಿ ಕಿಸ್ ಮಾಡುವ ದೃಶ್ಯ ಈ ಹಾಡಿನಲ್ಲಿ ಇದೆ. ಈ ಮೊದಲು ರಿಲೀಸ್ ಆದ ಬಾಲಿವುಡ್​ನ ಸಿನಿಮಾಗಳಲ್ಲಿ ಈ ರೀತಿಯ ದೃಶ್ಯಗಳು ಹೇರಳವಾಗಿ ಇವೆ. ಆ ಸಿನಿಮಾ ಯಾವುದು, ಅದರಲ್ಲಿ ನಟಿಸಿದವರು ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಬಾಲಿವುಡ್​ ಸಿನಿಮಾದಲ್ಲಿರುವ ಟಾಪ್ ಕಿಸ್ಸಿಂಗ್ ದೃಶ್ಯಗಳು ಇವೇ ನೋಡಿ..
ಬಾಲಿವುಡ್​ ಸಿನಿಮಾದಲ್ಲಿರುವ ಟಾಪ್ ಕಿಸ್ಸಿಂಗ್ ದೃಶ್ಯಗಳು ಇವೇ ನೋಡಿ..
Follow us on

ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ (Ranbir Kapoor) ಅವರು ‘ಅನಿಮಲ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರದ ‘ಓಹ್ ಬಾಲೆ’ ಹಾಡು ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ. ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಅವರು ಅನೇಕರ ಬಾರಿ ಕಿಸ್ ಮಾಡುವ ದೃಶ್ಯ ಈ ಹಾಡಿನಲ್ಲಿ ಇದೆ. ಈ ಮೊದಲು ರಿಲೀಸ್ ಆದ ಬಾಲಿವುಡ್​ನ ಸಿನಿಮಾಗಳಲ್ಲಿ ಈ ರೀತಿಯ ದೃಶ್ಯಗಳು ಹೇರಳವಾಗಿ ಇವೆ. ಆ ಸಿನಿಮಾ ಯಾವುದು, ಅದರಲ್ಲಿ ನಟಿಸಿದವರು ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ರಣಬೀರ್​ ಕಪೂರ್ ಹಾಗೂ ದೀಪಿಕಾ ಪಡುಕೋಣೆ

ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಒಂದು ಕಾಲದಲ್ಲಿ ಪ್ರೇಮ ಪಕ್ಷಿಗಳಾಗಿದ್ದರು. ಬ್ರೇಕಪ್ ಬಳಿಕವೂ ಇವರು ಒಟ್ಟಾಗಿ ಸಿನಿಮಾ ಮಾಡಿದ್ದಾರೆ. ‘ಯೇ ಜವಾನಿ ಹೇ ದಿವಾನಿ’ ಸಿನಿಮಾದಲ್ಲಿ ಇಬ್ಬರೂ ಕಿಸ್ ಮಾಡುವ ದೃಶ್ಯ ಇತ್ತು. ಈ ದೃಶ್ಯ ಸಾಕಷ್ಟು ಗಮನ ಸೆಳೆದಿತ್ತು. ಇಬ್ಬರೂ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು.

ಶಾರುಖ್ ಖಾನ್ ಹಾಗೂ ಕತ್ರಿನಾ ಕೈಫ್

ಶಾರುಖ್ ಖಾನ್ ಹಾಗೂ ಕತ್ರಿನಾ ಕೈಪ್ ಇಬ್ಬರೂ ‘ಜಬ್​ ತಕ್​ ಹೈ ಜಾನ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಶಾರುಖ್ ಖಾನ್ ಅವರ ಲಿಪ್​ ಲಾಕ್ ಗಮನ ಸೆಳೆಯಿತು. ಶಾರುಖ್ ಹಾಗೂ ಕತ್ರಿನಾ ಕೆಮಿಸ್ಟ್ರಿಯನ್ನು ಪ್ರೇಕ್ಷಕರು ಇಷ್ಟಪಟ್ಟರು. ಬಾಲಿವುಡ್​ನ ಆನ್​ಸ್ಕ್ರೀನ್​ ಫೇವರಿಟ್ ಜೋಡಿಗಳಲ್ಲಿ ಇದು ಕೂಡ ಒಂದು.

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದಾರೆ. ಇವರನ್ನು ರೊಮ್ಯಾಂಟಿಕ್ ದಂಪತಿ ಎಂದು ಅನೇಕರು ಕರೆದಿದ್ದಾರೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಗೋಲಿಯೋ ಕಿ ರಾಸ್​ ಲೀಲಾ ರಾಮ್ ಲೀಲಾ’ ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯ ಇತ್ತು.

ಕರೀಶ್ಮಾ ಕಪೂರ್ ಹಾಗೂ ಆಮಿರ್ ಖಾನ್

ಕರೀಶ್ಮಾ ಕಪೂರ್ ಹಾಗೂ ಆಮಿರ್ ಖಾನ್ ಅವರು ‘ರಾಜಾ ಹಿಂದೂಸ್ತಾನಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಬರುವ ಚುಂಬನ ದೃಶ್ಯ ಎರಡು ನಿಮಿಷಗಳ ಕಾಲ ಇತ್ತು. ಈ ಕಿಸ್ ಸಾಕಷ್ಟು ಗಮನ ಸೆಳೆದಿತ್ತು. ಸದ್ಯ ಕರೀಶ್ಮಾ ಚಿತ್ರರಂಗದಿಂದ ದೂರ ಇದ್ದಾರೆ.

ಹೃತಿಕ್ ರೋಷನ್ ಹಾಗೂ ಐಶ್ವರ್ಯಾ ರೈ

ಹೃತಿಕ್ ರೋಷನ್ ಹಾಗೂ ಐಶ್ವರ್ಯಾ ರೈ ಇಬ್ಬರೂ ‘ಧೂಮ್ 2’ ಚಿತ್ರದಲ್ಲಿ ಒಟ್ಟಾಗಿ ನಟಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಹೃತಿಕ್ ಹಾಗೂ ಐಶ್ವರ್ಯಾ ಪರಸ್ಪರ ಕಿಸ್ ಮಾಡಿದ್ದರು. ಈ ದೃಶ್ಯ ನೋಡಿ ಅಭಿಮಾನಿಗಳು ಐಶ್ವರ್ಯಾ ವಿರುದ್ಧ ದೂರು ಕೂಡ ನೀಡಿದ್ದರು. ತೆರೆಮೇಲೆ ಕಿಸ್ ಮಾಡೋದು ಅನ್​ಕಂಫರ್ಟೆಬಲ್ ಆಗುತ್ತದೆ ಎಂದು ಐಶ್ವರ್ಯಾ ರೈ ಹೇಳಿದ್ದರು.

ಶಾಹಿದ್ ಕಪೂರ್ ಹಾಗೂ ಕರೀನಾ ಕಪೂರ್

ಶಾಹಿದ್ ಕಪೂರ್ ಹಾಗೂ ಕರೀನಾ ಕಪೂರ್ ‘ಜಬ್ ವಿ ಮೆಟ್’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾದ ಕಿಸ್ಸಿಂಗ್ ದೃಶ್ಯ ಗಮನ ಸೆಳೆಯಿತು. ಇಬ್ಬರೂ ಒಂದು ಕಾಲದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ರಣವೀರ್ ಸಿಂಗ್ ಜೊತೆ ಪೋಸ್ ಕೊಟ್ಟ ನಟಿ ಸಂಯುಕ್ತಾ ಹೆಗಡೆ

ರಣವೀರ್ ಹಾಗೂ ಅನುಷ್ಕಾ ಶರ್ಮಾ

ರಣವೀರ್ ಸಿಂಗ್ ಹಾಗೂ ಅನುಷ್ಕಾ ಶರ್ಮಾ ‘ದಿಲ್ ದಡಕ್​ನೆದೋ’ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಈ ಚಿತ್ರದಲ್ಲಿ ಪ್ಯಾಷನ್ ಆಗಿ ಕಿಸ್ ಮಾಡಿದ್ದರು. ‘ಬ್ಯಾಂಡ್ ಬಜಾ ಭಾರತ್’ ಚಿತ್ರದಲ್ಲೂ ಇಬ್ಬರೂ ಕಿಸ್ ಮಾಡುವ ದೃಶ್ಯ ಇತ್ತು.

ಹೃತಿಕ್ ಹಾಗೂ ಕತ್ರಿನಾ

ಹೃತಿಕ್ ರೋಷನ್ ಹಾಗೂ ಕತ್ರಿನಾ ಕೈಫ್ ‘ಜಿಂದಗಿ ನಾ ಮಿಲೇಗಿ ದೋಬಾರ’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಭಿನ್ನವಾಗಿ ಮೂಡಿ ಬಂದಿತ್ತು. ಹೃತಿಕ್ ಹಾಗೂ ಕತ್ರಿನಾ ಕೆಮಿಸ್ಟ್ರಿ ಗಮನ ಸೆಳೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:57 am, Thu, 12 October 23