‘ರಾಮಾಯಣ’ ಸಿನಿಮಾಗಾಗಿ ಹಳ್ಳಿಗೆ ಹೋಗಿ ತರಬೇತಿ ಪಡೆಯುತ್ತಿರುವ ರಣಬೀರ್​ ಕಪೂರ್​

‘ಅನಿಮಲ್​’ ಸಿನಿಮಾದಿಂದ ಭರ್ಜರಿ ಯಶಸ್ಸು ಪಡೆದ ರಣಬೀರ್​ ಕಪೂರ್​ ಅವರು ಈಗ ಸುಮ್ಮನೆ ಕುಳಿತಿಲ್ಲ. ರಾಮನ ಪಾತ್ರಕ್ಕೆ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಳ್ಳಿಗೆ ಹೋಗಿ ತರಬೇತಿ ಪಡೆಯುತ್ತಿದ್ದಾರೆ. ಅವರು ವರ್ಕೌಟ್​ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದೆ. ರಾಮಾಯಣ ಕಥೆಯಾಧಾರಿತ ಸಿನಿಮಾಗಾಗಿ ರಣಬೀರ್​ ಕಪೂರ್​ ಸಜ್ಜಾಗುತ್ತಿದ್ದಾರೆ.

‘ರಾಮಾಯಣ’ ಸಿನಿಮಾಗಾಗಿ ಹಳ್ಳಿಗೆ ಹೋಗಿ ತರಬೇತಿ ಪಡೆಯುತ್ತಿರುವ ರಣಬೀರ್​ ಕಪೂರ್​
ರಣಬೀರ್​ ಕಪೂರ್​
Follow us
ಮದನ್​ ಕುಮಾರ್​
|

Updated on: Apr 08, 2024 | 10:36 PM

ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾಗೆ ಭರದ ಸಿದ್ಧತೆ ನಡೆಯುತ್ತಿದೆ. ಬಾಲಿವುಡ್​ (Bollywood) ಮಂದಿಯ ಪಾಲಿಗೆ ಇದು ತುಂಬ ಮಹತ್ವದ ಪ್ರಾಜೆಕ್ಟ್​ ಆಗಲಿದೆ. ನಟ ರಣಬೀರ್​ ಕಪೂರ್​ ಅವರು ರಾಮನ ಪಾತ್ರ ಮಾಡಲಿದ್ದಾರೆ. ‘ದಂಗಲ್​’ ಸಿನಿಮಾ ಮೂಲಕ ಗಮನ ಸೆಳೆದ ನಿತೇಶ್​ ತಿವಾರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಶೂಟಿಂಗ್​ ಆರಂಭ ಆಗಿದೆ. ಆದರೆ ರಣಬೀರ್​ ಕಪೂರ್​ (Ranbir Kapoor) ಅವರ ದೃಶ್ಯಗಳ ಚಿತ್ರೀಕರಣ ಶುರುವಾಗುವುದು ಇನ್ನೂ ತಡವಾಗಲಿದೆ. ಹಾಗಂತ ರಣಬೀರ್​ ಕಪೂರ್​ ಸುಮ್ಮನೆ ಕುಳಿತಿಲ್ಲ. ಕಠಿಣ ವರ್ಕೌಟ್​ ಮಾಡುವ ಮೂಲಕ ಅವರು ತಯಾರಾಗುತ್ತಿದ್ದಾರೆ.

ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದರೆ ಫಿಟ್​ ಆಗಿರಬೇಕು. ಅಲ್ಲದೇ ಗೆಟಪ್​ ಸಹ ಬದಲಾಯಿಸಿಕೊಳ್ಳಬೇಕು. ಅದಕ್ಕಾಗಿ ರಣಬೀರ್​ ಕಪೂರ್​ ಅವರು ತಮ್ಮ ಟ್ರೇನರ್​ ಜೊತೆ ಹಳ್ಳಿಗೆ ಹೋಗಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ವಿವಿಧ ಬಗೆಯ ವ್ಯಾಯಾಮ ಮಾಡುತ್ತಿರುವ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಆ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಲಾಗಿದೆ.

ಈ ಮೊದಲು ರಾಮಾಯಣ ಕಥೆ ಆಧರಿಸಿ ‘ಆದಿಪುರುಷ್​’ ಸಿನಿಮಾ ಮೂಡಿಬಂದಿತ್ತು. ಅದರಲ್ಲಿ ಪ್ರಭಾಸ್​ ಅವರು ರಾಮನ ಪಾತ್ರ ಮಾಡಿದ್ದರು. ಜನರಿಗೆ ಪ್ರಭಾಸ್​ ಅವರ ಗೆಟಪ್​ ಇಷ್ಟ ಆಗಿರಲಿಲ್ಲ. ರಾಮನ ಪಾತ್ರಧಾರಿಯ ಮುಖದಲ್ಲಿ ಕಳೆ ಇಲ್ಲದಿದ್ದರೆ ಪ್ರೇಕ್ಷಕರನ್ನು ಸೆಳೆಯುವುದು ಕಷ್ಟ. ‘ಆದಿಪುರುಷ್​’ ಸಿನಿಮಾವನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದರು. ಹಾಗಾಗುವುದು ಬೇಡ ಎಂಬ ಉದ್ದೇಶದಿಂದ ರಣಬೀರ್​ ಕಪೂರ್​ ಅವರು ಸೂಕ್ತ ತಯಾರಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಆರಂಭದಲ್ಲೇ ಎಡವಿದ ‘ರಾಮಾಯಣ’ ಚಿತ್ರತಂಡ; ಚಿತ್ರೀಕರಣದ ಫೋಟೋಗಳು ಲೀಕ್​

ಈ ಸಿನಿಮಾದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್​ ಯಶ್​ ಅವರು ರಾವಣನಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಗಾಸಿಪ್ ಹಬ್ಬಿದೆ. ಸಾಯಿ ಪಲ್ಲವಿ ಅವರಿಗೆ ಸೀತೆಯ ಪಾತ್ರವನ್ನು ನೀಡಲಾಗುತ್ತಿದೆ ಎಂದು ಕೂಡ ಅನೇಕ ಮಾಧ್ಯಮಗಳು ಸುದ್ದಿ ಪ್ರಕಟ ಮಾಡಿವೆ. ಚಿತ್ರತಂಡದಿಂದ ಯಾವುದೇ ರೀತಿಯ ಘೋಷಣೆ ಆಗಿಲ್ಲ. ಸನ್ನಿ ಡಿಯೋಲ್ ಅವರು ಆಂಜನೇಯನ ಪಾತ್ರ ಮಾಡುತ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ