ಪುರಾಣದ ಕಥೆಗಳು ಎಂದೆಂದಿಗೂ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತವೆ. ಹಾಗಾಗಿ ಮಹಾಭಾರತ, ರಾಮಾಯಣವನ್ನು ಆಧರಿಸಿ ಹಲವು ಸಿನಿಮಾ, ಧಾರಾವಾಹಿ, ವೆಬ್ಸಿರೀಸ್, ನಾಟಕಗಳು ಮೂಡಿಬರುತ್ತಲೇ ಇವೆ. ಬಾಲಿವುಡ್ನಲ್ಲಿ ರಾಮಾಯಣ ಆಧರಿಸಿ 3ಡಿ ಸಿನಿಮಾ ಮಾಡಲು ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಸಖತ್ ನಿರೀಕ್ಷೆ ಹುಟ್ಟುಹಾಕುತ್ತಿದೆ. ರಾಮ, ಸೀತೆ, ಲಕ್ಷ್ಮಣ, ರಾವಣನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಯಾರು ಎಂಬ ಕೌತುಕ ಸಿನಿಪ್ರಿಯರ ಮನದಲ್ಲಿ ಮೂಡಿದೆ. ಅಚ್ಚರಿ ಎಂದರೆ, ಮಹೇಶ್ ಬಾಬು ಮಾಡಬೇಕಾಗಿದ್ದ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸುವ ಸಾಧ್ಯತೆ ಇದೆ. ಈ ಬಗ್ಗೆ ಬಾಲಿವುಡ್ ಅಂಗಳದಿಂದ ಗುಸುಗುಸು ಕೇಳಿಬರುತ್ತಿದೆ.
ಈ ಸಿನಿಮಾದಲ್ಲಿ ರಾಮನಾಗಿ ಮಹೇಶ್ ಬಾಬು ಹಾಗೂ ರಾವಣನಾಗಿ ಹೃತಿಕ್ ರೋಷನ್ ನಟಿಸುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆದರೆ ಈಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ರಾಮನ ಪಾತ್ರವನ್ನು ಮಹೇಶ್ ಬಾಬು ರಿಜೆಕ್ಟ್ ಮಾಡಿದ್ದಾರಂತೆ. ಅವರ ಬದಲು ಬಾಲಿವುಡ್ನ ಹ್ಯಾಂಡ್ಸಮ್ ನಟ ರಣಬೀರ್ ಕಪೂರ್ಗೆ ನಿರ್ದೇಶಕರು ಆಫರ್ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರು ಒಪ್ಪಿಕೊಂಡಿದ್ದಾರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ.
ಅಷ್ಟಕ್ಕೂ ಮಹೇಶ್ ಬಾಬು ಇಂಥ ಒಳ್ಳೆಯ ಆಫರ್ ಕೈಚೆಲ್ಲಿದ್ದೇಕೆ? ಅದಕ್ಕೆ ರಾಜಮೌಳಿ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಸುದ್ದಿ ಆಗಿರುವಂತೆ ರಾಜಮೌಳಿ ಮತ್ತು ಮಹೇಶ್ ಬಾಬು ಜೊತೆಯಾಗಿ ಒಂದು ಸಿನಿಮಾ ಮಾಡಲಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ. ರಾಜಮೌಳಿ ಒಮ್ಮೆ ಒಂದು ಸಿನಿಮಾಗೆ ಕೈಹಾಕಿದರೆ ಅದನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಮಹೇಶ್ ಬಾಬು ಬೇರೊಂದು ಸಿನಿಮಾಗೆ ಡೇಟ್ಸ್ ಹೊಂದಿಸುವುದು ಕಷ್ಟ. ಹಾಗಾಗಿ ಅವರು ರಾಮನಾಗುವ ಅವಕಾಶ ತೊರೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಸೂಕ್ತ ಆಗುತ್ತಾರೆ ಎನ್ನುವ ನಂಬಿಕೆ ಸ್ವತಃ ನಿತೇಶ್ ತಿವಾರಿ ಅವರಿಗೆ ಇದೆ ಎಂಬ ಬಗ್ಗೆಯೂ ವರದಿ ಆಗಿದೆ. ಆದರೆ ಈ ಯಾವ ವಿಚಾರಗಳ ಬಗ್ಗೆಯೂ ಅವರು ಅಧಿಕೃತವಾಗಿ ಹೇಳಿಕೊಂಡಿಲ್ಲ. ಅತ್ತ ರಣಬೀರ್ ಕಪೂರ್ ಕೂಡ ಏನನ್ನೂ ಬಾಯಿಬಿಟ್ಟಿಲ್ಲ. ಮೂರು ಪಾರ್ಟ್ಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. 700 ಕೋಟಿ ರೂ. ಬಜೆಟ್ ಮೀಸಲಿಡಲಾಗಿದೆ. ಈ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಅಧಿಕೃತವಾಗಿ ಈ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ:
ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗೆ ಗುಡ್ ಬೈ ಹೇಳಿದ ರಣಬೀರ್; ಕಾರಣವೇನು?
ಫಸ್ಟ್ಲುಕ್ನಲ್ಲೇ ದಾಖಲೆ ಬರೆದ ಮಹೇಶ್ ಬಾಬು; ಇದು ‘ಸರ್ಕಾರು ವಾರಿ ಪಾಟ’ ಹವಾ