ಸಾವರ್ಕರ್​​ ಮೇಲಿನ ಗೌರವಕ್ಕೆ ಈ ರೀತಿ ಬದಲಾದ ನಟ ರಣದೀಪ್​ ಹೂಡಾ

|

Updated on: Mar 18, 2024 | 7:00 PM

ಕೆಲವೇ ದಿನಗಳ ಹಿಂದೆ ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಚಿತ್ರದ ಟ್ರೇಲರ್​ ಬಿಡುಗಡೆ ಆಯಿತು. ಆ ಮೂಲಕ ನಿರೀಕ್ಷೆ ಹೆಚ್ಚಿಸಲಾಗಿತ್ತು. ಈಗ ನಟ ರಣದೀಪ್​ ಹೂಡಾ ಅವರ ಹೊಸ ಫೋಟೋ ವೈರಲ್​ ಆಗಿದೆ. ಇದನ್ನು ಕಂಡ ಬಳಿಕ ಸಿನಿಮಾ ಮೇಲಿನ ನಿರೀಕ್ಷೆ ಡಬಲ್​ ಆಗಿದೆ. ಹಿಂದಿ, ಮರಾಠಿ ಭಾಷೆಯಲ್ಲಿ ಮಾರ್ಚ್​ 22ರಂದು ಈ ಸಿನಿಮಾ ತೆರೆಕಾಣಲಿದೆ.

ಸಾವರ್ಕರ್​​ ಮೇಲಿನ ಗೌರವಕ್ಕೆ ಈ ರೀತಿ ಬದಲಾದ ನಟ ರಣದೀಪ್​ ಹೂಡಾ
ರಣದೀಪ್​ ಹೂಡಾ
Follow us on

ಬಹುನಿರೀಕ್ಷಿತ ‘ಸ್ವಾತಂತ್ರ್ಯ ವೀರ ಸಾವರ್ಕರ್​’ (Swatantrya Veer Savarkar) ಸಿನಿಮಾ ಪ್ರಮೋಷನ್​ನಲ್ಲಿ ನಟ ರಣದೀಪ್​ ಹೂಡಾ ಅವರು ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅಲ್ಲದೇ ನಿರ್ದೇಶನ ಕೂಡ ಅವರೇ ಮಾಡಿದ್ದಾರೆ. ಇದು ವಿನಾಯಕ್​ ದಾಮೋದರ್​ ಸಾವರ್ಕರ್​ (Vinayak Damodar Savarkar) ಅವರ ಬದುಕಿನ ವಿವರವನ್ನು ಆಧರಿಸಿ ತಯಾರಾದ ಸಿನಿಮಾ. ಹಾಗಾಗಿ ಪ್ರೇಕ್ಷಕರಿಗೆ ಹೆಚ್ಚು ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಸಾವರ್ಕರ್​ ಪಾತ್ರಕ್ಕೆ ರಣದೀಪ್​ ಹೂಡಾ (Randeep Hooda) ಬಣ್ಣ ಹಚ್ಚಿದ್ದಾರೆ. ಆ ಪಾತ್ರದ ಮೇಲಿನ ಗೌರವ ಮತ್ತು ಬದ್ಧತೆಗಾಗಿ ರಣದೀಪ್​ ಹೂಡಾ ಅವರು ಬಾಡಿ ಟ್ರಾನ್ಸ್​ಫಾರ್ಮೇಷನ್​ ಮಾಡಿಕೊಂಡಿದ್ದಾರೆ. ಅವರು ಬದಲಾದ ಪರಿ ಕಂಡು ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾ ಮಾರ್ಚ್​ 22ರಂದು ಬಿಡುಗಡೆ ಆಗಲಿದೆ. ಪ್ರಚಾರ ಕಾರ್ಯದಲ್ಲಿ ಇಡೀ ತಂಡ ನಿರತವಾಗಿದೆ. ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಇರುವಾಗ ರಣದೀಪ್ ಹೂಡಾ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರನ್ನು ಗುರುತು ಹಿಡಿಯುವುದೇ ಕಷ್ಟವಾಗಿದೆ. ಅಷ್ಟರಮಟ್ಟಿಗೆ ಅವರು ಬದಲಾಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗಿದೆ.

ಕಟ್ಟುಮಸ್ತಾದ ಬಾಡಿ ಹೊಂದಿದ್ದ ರಣದೀಪ್​ ಹೂಡಾ ಅವರು ಸಾವರ್ಕರ್​ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ. ಅಂದಾಜು 30 ಕೆಜಿ ದೇಹದ ತೂಕವನ್ನು ಅವರು ಕಡಿಮೆ ಮಾಡಿಕೊಂಡಿದ್ದಾರೆ. ಎದೆಗೂಡಿನ ಮೂಳೆಗಳು ಕಾಣುವ ರೀತಿಯಲ್ಲಿ ಪೋಸ್​ ನೀಡಿದ್ದಾರೆ. ಅವರ ಬದ್ಧತೆಗೆ ಅಭಿಮಾನಿಗಳು ಭೇಷ್​ ಎನ್ನುತ್ತಿದ್ದಾರೆ. ನೀವು ಯಾವ ಹಾಲಿವುಡ್ ಹೀರೋಗೂ ಕಮ್ಮಿ ಇಲ್ಲ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ. ವೈರಲ್​ ಫೋಟೋಗೆ ನೆಟ್ಟಿಗರು ಕಮೆಂಟ್​ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಟ್ರೇಲರ್​ ಬಿಡುಗಡೆ; ಇದು ಬೇರೆಯದೇ ಕಥೆ

ಈ ಸಿನಿಮಾದಲ್ಲಿ ರಣದೀಪ್​ ಹೂಡಾ ಜೊತೆ ನಟಿ ಅಂಕಿತಾ ಲೋಖಂಡೆ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಮಾರ್ಚ್​ 22ರಂದು ಹಿಂದಿ ಮಾತ್ರವಲ್ಲದೇ ಮರಾಠಿ ಭಾಷೆಯಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದೆ. ಮಹಾತ್ಮ ಗಾಂಧಿ, ಬಾಲ ಗಂಗಾಧರ್​ ತಿಲಕ್​, ಡಾ. ಬಿ.ಆರ್​. ಅಂಬೇಡ್ಕರ್​, ಸುಭಾಷ್​ ಚಂದ್ರ ಬೋಸ್​, ಜವಹರ್​ ಲಾಲ್​ ನೆಹರು, ಮದನ್​ ಲಾಲ್​ ಧಿಂಗ್ರ, ಭಗತ್​ ಸಿಂಗ್​ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳು ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಸಿನಿಮಾದಲ್ಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.