Ranveer Singh: ನಗ್ನ ಫೋಟೋ ಕೇಸ್; ಪೊಲೀಸರ ಮುಂದೆ ವಿಚಾರಣೆಗೆ ಬರಲಾಗದೆ ಹೊಸ ವರಸೆ ತೋರಿದ ರಣವೀರ್​ ಸಿಂಗ್​

Ranveer Singh Photoshoot Case: ಹಲವು ಪ್ರಾಜೆಕ್ಟ್​ಗಳಲ್ಲಿ ರಣವೀರ್ ಸಿಂಗ್​ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ನಗ್ನ ಫೋಟೋಶೂಟ್​ ಕೇಸ್​ಗೆ ಸಂಬಂಧಿಸಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗದಿರಲು ನೆಪ ಹೇಳಿದ್ದಾರೆ.

Ranveer Singh: ನಗ್ನ ಫೋಟೋ ಕೇಸ್; ಪೊಲೀಸರ ಮುಂದೆ ವಿಚಾರಣೆಗೆ ಬರಲಾಗದೆ ಹೊಸ ವರಸೆ ತೋರಿದ ರಣವೀರ್​ ಸಿಂಗ್​
ರಣವೀರ್ ಸಿಂಗ್
Follow us
| Updated By: ಮದನ್​ ಕುಮಾರ್​

Updated on:Aug 21, 2022 | 7:07 PM

ನಟ ರಣವೀರ್​ ಸಿಂ​ಗ್​ (Ranveer Singh) ಅವರಿಗೆ ಸಂಕಷ್ಟ ಎದುರಾಗಿದೆ. ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಹೊಂದಿರುವ ‘ಪೇಪರ್​’ ಮ್ಯಾಗಜಿನ್​ ಸಲುವಾಗಿ ಅವರು ಮಾಡಿಸಿದ ನಗ್ನ ಫೋಟೋಶೂಟ್​ (Ranveer Singh Photoshoot) ಹಲವು ವಿವಾದಕ್ಕೆ ಕಾರಣ ಆಗಿದೆ. ಈ ಫೋಟೋಶೂಟ್​ಗೆ ಸಂಬಂಧಿಸಿದಂತೆ ರಣವೀರ್​ ಸಿಂಗ್​ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ಕೆಲವೇ ದಿನಗಳ ಹಿಂದೆ ಸುದ್ದಿ ಹೊರಬಿದ್ದಿತ್ತು. ಆ ಪ್ರಕರಣದ ವಿಚಾರಣೆಗೆ ಹಾಜರಾಗಲು ರಣವೀರ್​ ಸಿಂಗ್ ಈಗ​ ಹಿಂದೇಟು ಹಾಕುತ್ತಿದ್ದಾರೆ. ಆಗಸ್ಟ್​ 22ರಂದು ಮುಂಬೈ ಪೊಲೀಸರ (Mumbai Police) ಎದುರು ಅವರು ವಿಚಾರಣೆಗೆ ಒಳಪಡಬೇಕು. ಆದರೆ ಒಂದಷ್ಟು ಕಾರಣಗಳನ್ನು ನೀಡಿ ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ನೀಡಿರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ. ವಿಚಾರಣೆಗೆ ಹಾಜರಾಗಲು ರಣವೀರ್​ ಸಿಂಗ್​ ಎರಡು ವಾರಗಳ ಕಾಲ ಸಮಯ ಕೇಳಿದ್ದಾರೆ ಎಂದು ಹೇಳಲಾಗಿದೆ.

ರಣವೀರ್​ ಸಿಂಗ್​ ಮಾಡಿಸಿದ ನಗ್ನ ಫೋಟೋಶೂಟ್​ನಿಂದ ಮಹಿಳೆಯರ ಗೌರವಕ್ಕೆ ಧಕ್ಕೆ ಆಗಿದೆ ಎಂದು ಆರೋಪಿಸಿ ಕೆಲವರು ದೂರು ನೀಡಿದ್ದರು. ಆ ಕುರಿತು ವಿಚಾರಣೆ ನಡೆಸುವ ಸಲುವಾಗಿ ರಣವೀರ್​ ಸಿಂಗ್​ಗೆ ಪೊಲೀಸರು ಸಮನ್ಸ್​ ನೀಡಿದ್ದರು. ಸಮನ್ಸ್​ ನೀಡಲು ಅವರ ಮನೆಗೆ ತೆರಳಿದ್ದಾಗ ಅವರು ಅಲ್ಲಿ ಇರಲಿಲ್ಲ. ಆಗಸ್ಟ್​ 22ರಂದು ಮುಂಬೈನ ಬೇಂಬೂರ್​ ಪೊಲೀಸ್​ ಠಾಣೆಗೆ ಹಾಜರಾಗುವಂತೆ ಸಮನ್ಸ್​ನಲ್ಲಿ ತಿಳಿಸಲಾಗಿತ್ತು.

ಹಲವು ಪ್ರಾಜೆಕ್ಟ್​ಗಳಲ್ಲಿ ರಣವೀರ್ ಸಿಂಗ್​ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಪೊಲೀಸರ ಎದುರು ವಿಚಾರಣೆಗೆ ಹಾಜರಾಗದಿರಲು ನೆಪ ಹೇಳಿದ್ದಾರೆ. ಆ ಮೂಲಕ ಹೊಸ ವರಸೆ ತೋರಿದ್ದಾರೆ. ಇನ್ನೂ ಎರಡು ವಾರಗಳ ಕಾಲ ಸಮಯಾವಕಾಶ ಬೇಕು ಎಂದು ಅವರು ಪೊಲೀಸರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ಹೊಸ ದಿನಾಂಕವನ್ನು ನಿಗದಿಪಡಿಸಿ, ಮತ್ತೊಮ್ಮೆ ಸಮನ್ಸ್​ ಜಾರಿಮಾಡಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ
Image
Ranveer Singh: ಮತ್ತೆ ಬೆತ್ತಲಾಗುವಂತೆ ರಣವೀರ್​ ಸಿಂಗ್​ಗೆ ಬೇಡಿಕೆ; ಈ ಬಾರಿ ಆಹ್ವಾನ ಬಂದಿರೋದು ಪ್ರಾಣಿಗಳಿಗೋಸ್ಕರ
Image
Ranveer Singh: ಬೆತ್ತಲೆ ಫೋಟೋ ಹಂಚಿಕೊಂಡ ರಣವೀರ್​ ಸಿಂಗ್​ ವಿರುದ್ಧ ಕೇಸ್​ ದಾಖಲಿಸಿದ ಮುಂಬೈ ಪೊಲೀಸರು
Image
Alia Bhatt: ‘ರಣವೀರ್​ ಸಿಂಗ್​ ಜತೆ ಏನು ಬೇಕಾದ್ರೂ ಮಾತಾಡ್ತೀನಿ’; ಮದುವೆ ಬಳಿಕ ಆಲಿಯಾ ಭಟ್​ ಅಚ್ಚರಿಯ ಹೇಳಿಕೆ
Image
Ranveer Singh: ರಣವೀರ್​ ಸಿಂಗ್​ ಒಟ್ಟು ಆಸ್ತಿ ಎಷ್ಟು? 2 ಸಿನಿಮಾ ಸೋತ ಮಾತ್ರಕ್ಕೆ ಕರಗಿಲ್ಲ ಸ್ಟಾರ್​ ನಟನ ನೂರಾರು ಕೋಟಿ ಸಂಪತ್ತು

ಐಪಿಸಿ ಸೆಕ್ಷನ್​ 292, 293 ಹಾಗೂ 509ರ ಅಡಿಯಲ್ಲಿ ರಣವೀರ್​ ಸಿಂಗ್​ ವಿರುದ್ಧ ಕೇಸ್​ ದಾಖಲಾಗಿದೆ. ಇದರಿಂದ ಅವರಿಗೆ ಸಂಕಷ್ಟ ಎದುರಾಗಿದೆ. ಜುಲೈ 22ರಂದು ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ನಗ್ನ ಫೋಟೋಗಳನ್ನು ಶೇರ್​ ಮಾಡಿಕೊಂಡರು. ಇದನ್ನು ಕಂಡು ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ರಣವೀರ್​ ಸಿಂಗ್​ ಪರ ಮಾತನಾಡಿದ್ದಾರೆ. ಅಂತಿಮವಾಗಿ ಈ ಕೇಸ್​ ಏನಾಗಲಿದೆ ಎಂಬ ಕೌತುಕ ಮೂಡಿದೆ.

Published On - 7:07 pm, Sun, 21 August 22

ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ಮಹಿಳಾ ಅಭಿಮಾನಿಯ ನಡೆಯಿಂದ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ
ಮಹಿಳಾ ಅಭಿಮಾನಿಯ ನಡೆಯಿಂದ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ
ಉಪ ಚುನಾವಣೆಯ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಸವದಿ
ಉಪ ಚುನಾವಣೆಯ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಸವದಿ