AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ದಿನಕ್ಕೆ ಅರ್ಧ ಶತಕ ಬಾರಿಸಿದ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’; ಇಲ್ಲಿದೆ ಬಾಕ್ಸ್​ ಆಫೀಸ್​ ಲೆಕ್ಕ

Ranveer Singh: ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ 4 ದಿನಕ್ಕೆ 50 ಕೋಟಿ ರೂಪಾಯಿ ಗಡಿ ದಾಡುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾಗೆ ಕರಣ್​ ಜೋಹರ್​ ನಿರ್ದೇಶನ ಮಾಡಿದ್ದಾರೆ.

4 ದಿನಕ್ಕೆ ಅರ್ಧ ಶತಕ ಬಾರಿಸಿದ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’; ಇಲ್ಲಿದೆ ಬಾಕ್ಸ್​ ಆಫೀಸ್​ ಲೆಕ್ಕ
ರಣವೀರ್​ ಸಿಂಗ್​, ಆಲಿಯಾ ಭಟ್​
ಮದನ್​ ಕುಮಾರ್​
|

Updated on: Aug 01, 2023 | 12:27 PM

Share

ನಟ ರಣವೀರ್​ ಸಿಂಗ್​ (Ranveer Singh) ಅವರು ಬಾಲಿವುಡ್​ನಲ್ಲಿ ಬೇಡಿಕೆಯ ನಟ ಆಗಿದ್ದಾರೆ. ಒಂದು ಕಾಲದಲ್ಲಿ ‘ಪದ್ಮಾವತ್​’, ‘ಬಾಜಿರಾವ್​ ಮಸ್ತಾನಿ’ ಮುಂತಾದ ಸೂಪರ್ ಹಿಟ್​ ಸಿನಿಮಾಗಳನ್ನು ನೀಡಿದ ಅವರು ಇತ್ತೀಚೆಗೆ ಕೊಂಚ ಸೊರಗಿದ್ದಾರೆ ಎಂಬುದು ಕೂಡ ನಿಜ. ಬಾಕ್ಸ್​ ಆಫೀಸ್​ನಲ್ಲಿ ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡುತ್ತಿಲ್ಲ. ಸಮಾಧಾನಕರ ಸಂಗತಿ ಏನೆಂದರೆ ಅವರು ನಟಿಸಿರುವ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ (Rocky Aur Rani Ki Prem Kahani) ಸಿನಿಮಾ ಅರ್ಧ ಶತಕ ಬಾರಿಸಿದೆ. ಅಂದರೆ, ಈ ಸಿನಿಮಾದ ಕಲೆಕ್ಷನ್​ 50 ಕೋಟಿ ರೂಪಾಯಿ ದಾಟಿದೆ. ಕರಣ್​ ಜೋಹರ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಣವೀರ್​ ಸಿಂಗ್​ಗೆ ಜೋಡಿಯಾಗಿ ಆಲಿಯಾ ಭಟ್​ (Alia Bhatt) ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಜುಲೈ 28ರಂದು ಬಿಡುಗಡೆಯಾದ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಮೊದಲ ದಿನ 11.10 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ದಿನ ಕಲೆಕ್ಷನ್​ ಹೆಚ್ಚಿತು. ಅಂದು ಈ ಚಿತ್ರ 16.05 ಕೋಟಿ ರೂಪಾಯಿ ಬಾಚಿಕೊಂಡಿತು. ಭಾನುವಾರ (ಜುಲೈ 30) ಕೂಡ ಉತ್ತಮವಾಗಿಯೇ (18.75 ಕೋಟಿ ರೂಪಾಯಿ) ಕಮಾಯಿ ಆಯಿತು. ಆದರೆ ಸೋಮವಾರ ಈ ಸಿನಿಮಾದ ಗಳಿಕೆ ಗಣನೀಯವಾಗಿ ಕುಸಿದಿದೆ. ಮೂಲಗಳ ಪ್ರಕಾರ ಸೋಮವಾರ ಕೇವಲ 7 ಕೋಟಿ ರೂಪಾಯಿ ಆಗಿದೆ. ಅಲ್ಲಿಗೆ, 4 ದಿನಕ್ಕೆ 50 ಕೋಟಿ ರೂಪಾಯಿ ಗಡಿ ದಾಟುವಲ್ಲಿ ಈ ಸಿನಿಮಾ ಯಶಸ್ವಿಯಾಗಿದೆ.

ಇದನ್ನೂ ಓದಿ: ‘ಒಂದು ಎಚ್ಚರಿಕೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು’; ದೀಪಿಕಾ ಪಡುಕೋಣೆ ಹಾಟ್​ ಅವತಾರಕ್ಕೆ ದಂಗಾದ ಪತಿ ರಣವೀರ್​ ಸಿಂಗ್​

ವಾರದ ದಿನಗಳಲ್ಲಿ ಎಷ್ಟು ಕಲೆಕ್ಷನ್​ ಆಗುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ಸೋಮವಾರ (ಜುಲೈ 31) ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದ ಕಲೆಕ್ಷನ್​ ಕುಸಿದಿದೆ. ಮಂಗಳವಾರದ ಗಳಿಕೆ ಇನ್ನೂ ಕಡಿಮೆ ಅಗುವ ಸಾಧ್ಯತೆ ಇದೆ. ಇನ್ನು, ಚಿತ್ರಮಂದಿರಗಳಲ್ಲಿ ‘ಆಪನ್​ಹೈಮರ್​’, ‘ಬಾರ್ಬಿ’ ಮುಂತಾದ ಸಿನಿಮಾಗಳು ಪೈಪೋಟಿ ನೀಡುತ್ತಿವೆ. ದಕ್ಷಿಣ ಭಾರತದಲ್ಲಿ ‘ಕೌಸಲ್ಯ ಸುಪ್ರಜಾ ರಾಮ’, ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’, ‘ಆಚಾರ್​ ಆ್ಯಂಡ್​ ಕೋ’, ‘ಬೇಬಿ’ ಮುಂತಾದ ಚಿತ್ರಗಳು ಚೆನ್ನಾಗಿ ಪ್ರದರ್ಶನ ಕಾಣುತ್ತಿವೆ. ಹಾಗಾಗಿ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರಕ್ಕೆ ಕೊಂಚ ಹಿನ್ನಡೆ ಆಗಿದೆ.

ಇದನ್ನೂ ಓದಿ: Ranveer Singh: ‘ಸುಮ್ಮನೆ ಇರು, ಚಪ್ಪಲಿ ಏಟು ತಿಂತೀಯ’: ದೀಪಿಕಾ ಜೊತೆ ಸಿನಿಮಾ ನೋಡಲು ಬಂದ ರಣವೀರ್​ ಸಿಂಗ್​ಗೆ ಈ ಪರಿಸ್ಥಿತಿ ಯಾಕೆ?

ಬಹುವರ್ಷಗಳ ಬಳಿಕ ಕರಣ್​ ಜೋಹರ್​ ಅವರು ನಿರ್ದೇಶನ ಮಾಡಿದ ಸಿನಿಮಾ ಎಂಬ ಕಾರಣಕ್ಕಾಗಿ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರದ ಮೇಲೆ ಹೈಪ್​ ಸೃಷ್ಟಿ ಆಗಿತ್ತು. ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಅವರು ಜೋಡಿಯಾಗಿ ನಟಿಸಿದ್ದರಿಂದ ನಿರೀಕ್ಷೆ ಹೆಚ್ಚಿತ್ತು. ಬಿಗ್ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬಂದಿದೆ. ಅಂಥ ಬಿಗ್​ ಬಜೆಟ್​ ಚಿತ್ರಕ್ಕೆ ಈಗ ಆಗಿರುವ ಕಲೆಕ್ಷನ್​ ಆಶಾದಾಯಕವಲ್ಲ ಎನ್ನಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ