ಮತ್ತೊಮ್ಮೆ ಮಹಿಳೆಯ ವೇಷದಲ್ಲಿ ಬಂದ ಆಯುಷ್ಮಾನ್ ಖುರಾನಾ; ಸೀಕ್ವೆಲ್ನಲ್ಲಿ ಮನರಂಜನೆ ಡಬಲ್?
ಆಗಸ್ಟ್ 25ರಂದು ಕನ್ನಡದಲ್ಲಿ ‘ಟೋಬಿ’ ರಿಲೀಸ್ ಆಗುತ್ತಿದೆ. ‘ಟೋಬಿ’ ಅಲ್ಲದೆ ಆಗಸ್ಟ್ ತಿಂಗಳಲ್ಲಿ ‘ಜೈಲರ್’, ‘ಒಎಂಜಿ 2’ ಸೇರಿ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಇವುಗಳ ಜೊತೆ ‘ಡ್ರೀಮ್ ಗರ್ಲ್ 2’ ಸ್ಪರ್ಧಿಸಬೇಕಿದೆ.
2018ರಲ್ಲಿ ರಿಲೀಸ್ ಆದ ‘ಡ್ರೀಮ್ ಗರ್ಲ್’ ಸಿನಿಮಾ (Dream Girl Movie) ಸೂಪರ್ ಹಿಟ್ ಆಯಿತು. ಕಡಿಮೆ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು. ನಿರ್ಮಾಪಕಿ ಏಕ್ತಾ ಕಪೂರ್ ಅವರು ಈ ಚಿತ್ರದಿಂದ ಲಾಭ ಕಂಡರು. ಚೊಚ್ಚಲ ನಿರ್ದೇಶನದಲ್ಲೇ ರಾಜ್ ಶಾಂಡಿಲ್ಯ (Raaj Shaandilyaa) ಅವರು ಗೆದ್ದು ಬೀಗಿದರು. ಈಗ ‘ಡ್ರೀಮ್ ಗರ್ಲ್ 2’ ಚಿತ್ರ ಸಿದ್ಧವಾಗಿದೆ. ಆಗಸ್ಟ್ 25ರಂದು ರಿಲೀಸ್ ಆಗಲಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ.
ಆಯುಷ್ಮಾನ್ ಖುರಾನಾ ಅವರು ಹಾಸ್ಯಪ್ರಧಾನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ‘ಡ್ರೀಮ್ ಗರ್ಲ್’ ಚಿತ್ರದಲ್ಲಿ ಅವರ ಪಾತ್ರ ಗಮನ ಸೆಳೆದಿತ್ತು. ಹುಡುಗಿಯಂತೆ ಮಾತನಾಡುವ ಕಲೆ ಕಥಾನಾಯಕನಿಗೆ ಪ್ರಾಪ್ತವಾಗಿರುತ್ತದೆ. ಆತ ದುಡ್ಡಿಗಾಗಿ ಒಂದು ಕಾಲ್ ಸೆಂಟರ್ ಸೇರಿಕೊಳ್ಳುತ್ತಾನೆ. ಹುಡುಗಿಯ ಜೊತೆ ಮಾತನಾಡಬೇಕು ಎಂದು ಕಾದು ಕುಳಿತ ಪುರುಷರಿಗಾಗಿ ಮಾಡಲಾದ ಕಾಲ್ ಸೆಂಟರ್ ಇದು. ಎಲ್ಲರ ಜೊತೆಗೂ ಯುವತಿಯಂತೆ ಮಾತನಾಡುತ್ತಾನೆ ಕಥಾ ನಾಯಕ. ನಂತರ ಏನಾಗುತ್ತದೆ ಎಂಬುದು ಸಿನಿಮಾದ ಕಥೆ. ಈಗ ಅದೇ ಥೀಮ್ ಇಟ್ಟುಕೊಂಡು ರಾಜ್ ಅವರು ಸೀಕ್ವೆಲ್ ಮಾಡಿದ್ದಾರೆ.
ಆಯುಷ್ಮಾನ್ ಖುರಾನಾ ಅವರಿಗೆ ಜೊತೆಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದ ಇಲ್ಲಿಯವರೆಗೆ ಅನನ್ಯಾಗೆ ಯಾವುದೇ ಹಿಟ್ ಸಿಕ್ಕಿಲ್ಲ. ‘ಡ್ರೀಮ್ ಗರ್ಲ್ 2’ ಚಿತ್ರದಿಂದಾದರೂ ಅವರಿಗೆ ಗೆಲುವು ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಹೀರೋಯಿನ್ ಹೊರತುಪಡಿಸಿ ಉಳಿದ ಪಾತ್ರವರ್ಗ ಸೀಕ್ವೆಲ್ನಲ್ಲೂ ಮುಂದುವರಿದಿದೆ.
Life ki sabse dangerous performance dene jaa raha hoon, pyaar zaroor dena! ??#DreamGirl2Trailer Out Now ?https://t.co/jdorstoMM0#25AugustHogaMast#DreamGirl2 in cinemas on 25th August.@writerraj @ananyapandayy @EktaaRKapoor @balajimotionpic @Pooja_DreamGirl
— Ayushmann Khurrana (@ayushmannk) August 1, 2023
ಇದನ್ನೂ ಓದಿ: ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ದಿಟ್ಟೆ ಅಂತ ಕರೆಸಿಕೊಳ್ಳವುದಕ್ಕೆ ಹಲವಾರು ಕಾರಣಗಳಿವೆ!
ಆಗಸ್ಟ್ 25ರಂದು ಕನ್ನಡದಲ್ಲಿ ‘ಟೋಬಿ’ ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಗ್ಗೆ ಕರ್ನಾಟಕದ ಮಂದಿಗೆ ಹೆಚ್ಚು ನಿರೀಕ್ಷೆ ಇದೆ. ‘ಟೋಬಿ’ ಅಲ್ಲದೆ ಆಗಸ್ಟ್ ತಿಂಗಳಲ್ಲಿ ‘ಜೈಲರ್’, ‘ಒಎಂಜಿ 2’ ಸೇರಿ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಇವುಗಳ ಜೊತೆ ‘ಡ್ರೀಮ್ ಗರ್ಲ್ 2’ ಸ್ಪರ್ಧಿಸಿ ಗೆಲ್ಲಬೇಕಿದೆ. ಟ್ರೇಲರ್ ನೋಡಿದವರಿಗೆ ಸಿನಿಮಾದ ಮೇಲೆ ಭರವಸೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ