AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ekta Kapoor: ‘ಎಕ್ಸ್​ಎಕ್ಸ್​ಎಕ್ಸ್​’ ಮೂಲಕ ಸೈನಿಕರ ಪತ್ನಿಯರಿಗೆ ಅವಮಾನ; ಏಕ್ತಾ ಕಪೂರ್​ ವಿರುದ್ಧ ಅರೆಸ್ಟ್​ ವಾರೆಂಟ್​

Arrest Warrant | Alt Balaji: ಲೈಂಗಿಕ ಸಂಬಂಧಗಳ ವಿವಿಧ ಆಯಾಮಗಳನ್ನು ಇಟ್ಟುಕೊಂಡು ಈ ವೆಬ್​ ಸರಣಿ ಮೂಡಿಬಂದಿವೆ. ಇದರಲ್ಲಿ ಸೈನಿಕರ ಪತ್ನಿಯರಿಗೆ ಅವಮಾನ ಮಾಡಲಾಗಿದೆ ಎಂದು ಕೇಸ್​ ದಾಖಲಾಗಿದೆ.

Ekta Kapoor: ‘ಎಕ್ಸ್​ಎಕ್ಸ್​ಎಕ್ಸ್​’ ಮೂಲಕ ಸೈನಿಕರ ಪತ್ನಿಯರಿಗೆ ಅವಮಾನ; ಏಕ್ತಾ ಕಪೂರ್​ ವಿರುದ್ಧ ಅರೆಸ್ಟ್​ ವಾರೆಂಟ್​
ಏಕ್ತಾ ಕಪೂರ್
TV9 Web
| Edited By: |

Updated on:Sep 29, 2022 | 7:47 AM

Share

ಕಿರುತೆರೆ, ಒಟಿಟಿ ಮತ್ತು ಸಿನಿಮಾ ಜಗತ್ತಿನಲ್ಲಿ ನಿರ್ಮಾಪಕಿ ಏಕ್ತಾ ಕಪೂರ್ (Ekta Kapoor)​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವಾರು ಶೋಗಳ ಮೂಲಕ ಅವರು ಮನೆಮಾತಾಗಿದ್ದಾರೆ. ಎಷ್ಟೋ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅವರು ಅವಕಾಶ ನೀಡಿದ್ದಾರೆ. ಏಕ್ತಾ ಕಪೂರ್​ ಒಡೆತನದ ‘ಆಲ್ಟ್​ ಬಾಲಾಜಿ’ ಒಟಿಟಿ ಮೂಲಕ ಹಲವಾರು ವೆಬ್​ ಸಿರೀಸ್​ಗಳು ನಿರ್ಮಾಣ ಆಗಿವೆ. ಈ ವೆಬ್​ ಸರಣಿಗಳು (Web Series) ತುಂಬ ಬೋಲ್ಡ್​ ಆಗಿರುತ್ತವೆ ಎಂಬ ಆರೋಪ ಮೊದಲಿನಿಂದಲೂ ಇದೆ. ಈಗ ಇದೇ ವಿಚಾರವಾಗಿ ಏಕ್ತಾ ಕಪೂರ್​ ಮತ್ತು ಅವರ ತಾಯಿ ಶೋಭಾ ಕಪೂರ್​ ಮೇಲೆ ಅರೆಸ್ಟ್​ ವಾರೆಂಟ್​ (Arrest Warrant) ಜಾರಿ ಮಾಡಲಾಗಿದೆ. ‘ಎಕ್ಸ್ಎಕ್ಸ್​ಎಕ್ಸ್​’ ವೆಬ್​ ಸರಣಿಯಲ್ಲಿ ಸೈನಿಕರ ಪತ್ನಿಯರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದಡಿ ಕೇಸ್​ ದಾಖಲಾಗಿದೆ.

‘ಎಕ್ಸ್ ಎಕ್ಸ್​ ಎಕ್ಸ್​’ ವೆಬ್​ ಸೀರಿಸ್​ನ ಮೊದಲ ಸೀಸನ್​ 2018ರಲ್ಲಿ ಪ್ರಸಾರವಾಗಿತ್ತು. 2020ರ ಜನವರಿಯಲ್ಲಿ ಎರಡನೇ ಸೀಸನ್​ ಬಿಡುಗಡೆ ಆಯಿತು. ಇದರ ಪ್ರತಿ ಎಪಿಸೋಡ್​ನಲ್ಲಿ ಎಪಿಸೋಡ್​ಗಳಲ್ಲಿ ಬೇರೆ ಬೇರೆ ಕಥೆ ಇದೆ. ಲೈಂಗಿಕ ಸಂಬಂಧಗಳ ವಿವಿಧ ಆಯಾಮಗಳನ್ನು ಇಟ್ಟುಕೊಂಡು ಈ ಸಂಚಿಕೆಗಳು ಮೂಡಿಬಂದಿವೆ. ಇದರಲ್ಲಿ ಸೈನಿಕರ ಕುಟುಂಬಕ್ಕೆ ಹಾಗೂ ಪತ್ನಿಯರಿಗೆ ಅವಮಾನ ಮಾಡಲಾಗಿದೆ ಎಂದು ಮಾಜಿ ಸೈನಿಕರೊಬ್ಬರು ಕೇಸ್​ ದಾಖಲಿಸಿದ್ದಾರೆ.

ಸೈನಿಕನ ಪತ್ನಿ ಬಗ್ಗೆ ಆಕ್ಷೇಪಾರ್ಹ ರೀತಿಯ ದೃಶ್ಯಗಳನ್ನು ಈ ವೆಬ್​ ಸರಣಿ ಹೊಂದಿದೆ ಎಂದು ಮಾಜಿ ಸೈನಿಕ ಶಂಭು ಕುಮಾರ್​ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್​ಗೆ ಸಮನ್ಸ್​ ಜಾರಿ ಮಾಡಲಾಗಿದೆ. ‘ವಿರೋಧ ವ್ಯಕ್ತವಾದ ಬಳಿಕ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಲಾಗಿದೆ ಎಂದು ಏಕ್ತಾ ಕಪೂರ್​ ಹಾಗೂ ಶೋಭಾ ಕಪೂರ್​ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ವಿಚಾರಣೆಗೆ ಹಾಜರಾಗದೇ ಇರುವುದಕ್ಕೆ ಅರೆಸ್ಟ್​ ವಾರೆಂಟ್​ ನೀಡಲಾಗಿದೆ’ ಎಂದು ದೂರುದಾರರ ಪರ ವಕೀಲರಾದ ರಿಷಿಕೇಶ್​ ಪಾಠಕ್​ ತಿಳಿಸಿದ್ದಾರೆ.

ಇದನ್ನೂ ಓದಿ
Image
ಲಾಕ್​ಅಪ್ ಶೋ ಗೆದ್ದ ಮುನಾವರ್ ಫರೂಖಿ; ವಿನ್ನರ್​ಗೆ ಸಿಕ್ಕ ಹಣ ಎಷ್ಟು, ಸವಲತ್ತುಗಳೇನು?
Image
‘ಕೆಲಸ ಇಲ್ಲ ಅಂತ ವಿವಾದ ಮಾಡಿಕೊಂಡೆ’; ಎಲ್ಲವನ್ನೂ ಒಪ್ಪಿಕೊಂಡ ಕಾಂಟ್ರವರ್ಸಿ ನಟಿ ಪೂನಂ ಪಾಂಡೆ
Image
ಇನ್​ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್ ಶೇರ್ ಮಾಡಿ, ಡಿಲೀಟ್ ಮಾಡಿದ ಕಂಗನಾ; ಅದರಲ್ಲಿತ್ತು ಹೊಸ ಸಮಾಚಾರ!
Image
‘ನಾಗಿಣಿ’ ಸೀರಿಯಲ್​ ನಟಿಯರಿಗೆ ರಣವೀರ್​ ಸಿಂಗ್ ಪೈಪೋಟಿ; ಸ್ನೇಕ್​ ಡ್ಯಾನ್ಸ್​ ಕಂಡು ನಿರ್ಮಾಪಕಿ ಫಿದಾ

ಲಾಕ್​ಡೌನ್​ ಬಳಿಕ ಒಟಿಟಿ ಪ್ರಾಬಲ್ಯ ಹೆಚ್ಚಾಯಿತು. ಸೆನ್ಸಾರ್​ನ ಹಂಗಿಲ್ಲ ಎಂಬ ಕಾರಣಕ್ಕೆ ತುಂಬ ಬೋಲ್ಡ್​ ಆದಂತಹ ಕಂಟೆಂಟ್​ಗಳನ್ನು ಕೆಲವು ಒಟಿಟಿಗಳು ಬಿತ್ತರಿಸುತ್ತಿವೆ. ಕಳೆದ ವರ್ಷ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅರೆಸ್ಟ್​ ಆಗಲು ಇದೇ ಕಾರಣ. ಅವರು ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು ಎಂಬ ಆರೋಪ ಇದೆ. ಆದರೆ ಅವರು ಮಾಡಿದ್ದು ಅಶ್ಲೀಲ ಸಿನಿಮಾ ಅಲ್ಲ, ಬರೀ ಬೋಲ್ಡ್​ ಸಿನಿಮಾಗಳು ಎಂದು ಕೆಲವರು ವಾದಿಸಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:47 am, Thu, 29 September 22

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!