ಲಾಕ್ಅಪ್ ಶೋ ಗೆದ್ದ ಮುನಾವರ್ ಫರೂಖಿ; ವಿನ್ನರ್ಗೆ ಸಿಕ್ಕ ಹಣ ಎಷ್ಟು, ಸವಲತ್ತುಗಳೇನು?
‘ಲಾಕಪ್’ ರಿಯಾಲಿಟಿ ಶೋನಲ್ಲಿ ಕಂಗನಾ ನಿರೂಪಣೆಗೂ ಮೆಚ್ಚುಗೆ ವ್ಯಕ್ತವಾದವು. ದಿನ ಕಳೆದಂತೆ ಶೋ ಜನಪ್ರಿಯತೆ ಹೆಚ್ಚಿತು. 70ಕ್ಕೂ ಹೆಚ್ಚು ದಿನ ಪ್ರಸಾರ ಕಂಡ ಈ ಶೋ ಈಗ ಪೂರ್ಣಗೊಂಡಿದೆ.
ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ನಿರೂಪಣೆಯಲ್ಲಿ ಮೂಡಿ ಬಂದ ‘ಲಾಕಪ್’ ರಿಯಾಲಿಟಿ ಶೋ (Lock Upp Reality Show) ನೇರವಾಗಿ ಒಟಿಟಿಯಲ್ಲಿ ಪ್ರಸಾರವಾಗಿತ್ತು. ಈ ಶೋಗೆ ದೊಡ್ಡ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಈಗ ಈ ಶೋ ಫಿನಾಲೆ ಪೂರ್ಣಗೊಂಡಿದೆ. ಶನಿವಾರ (ಮೇ 7) ರಾತ್ರಿ ನಡೆದ ಅದ್ದೂರಿ ಫಿನಾಲೆಯಲ್ಲಿ ಮುನಾವರ್ ಫರೂಖಿ ಅವರು (Munawar Faruqui) ‘ಲಾಕಪ್’ ಶೋನ ಕಪ್ ಎತ್ತಿದ್ದಾರೆ. ಫ್ಯಾನ್ಸ್ ಕಡೆಯಿಂದ ಮುನಾವರ್ಗೆ ಬರೋಬ್ಬರಿ 18 ಲಕ್ಷ ವೋಟ್ ಸಿಕ್ಕಿತ್ತು. ಇದಲ್ಲದೆ, ಕಂಗನಾ ಕೂಡ ಅವರಿಗೆ ವೋಟ್ ಮಾಡಿದರು. ಇದರಿಂದ ಮುನಾವರ್ ಗೆದ್ದು ಬೀಗಿದರು.
‘ಲಾಕಪ್’ ರಿಯಾಲಿಟಿ ಶೋ ಆರಂಭದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈ ಶೋ ‘ಬಿಗ್ ಬಾಸ್’ ರೀತಿಯಲ್ಲೇ ಇದೆ ಎನ್ನುವ ಆರೋಪಗಳು ಕೇಳಿ ಬಂದವು. ಹಲವು ವಿವಾದಾತ್ಮಕ ಸ್ಪರ್ಧಿಗಳು ಶೋನಲ್ಲಿ ಇದ್ದಿದ್ದರಿಂದ ಈ ಶೋ ನಿಧಾನವಾಗಿ ಜನಪ್ರಿಯತೆ ಪಡೆದುಕೊಂಡಿತು. ಅಷ್ಟೇ ಅಲ್ಲ, ಕಂಗನಾ ನಿರೂಪಣೆಗೂ ಮೆಚ್ಚುಗೆ ವ್ಯಕ್ತವಾದವು. ದಿನ ಕಳೆದಂತೆ ಶೋ ಜನಪ್ರಿಯತೆ ಹೆಚ್ಚಿತು. 70ಕ್ಕೂ ಹೆಚ್ಚು ದಿನ ಪ್ರಸಾರ ಕಂಡ ಈ ಶೋ ಈಗ ಪೂರ್ಣಗೊಂಡಿದೆ.
‘ಲಾಕಪ್’ ರಿಯಾಲಿಟಿ ಶೋಅನ್ನು ಏಕ್ತಾ ಕಪೂರ್ ನಿರ್ಮಾಣ ಮಾಡಿದ್ದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಮುನಾವರ್ ವಿನ್ ಆದ ಬಗ್ಗೆ ಅವರು ಘೋಷಣೆ ಮಾಡಿದ್ದಾರೆ. ಇನ್ನು, ಪಾಯಲ್ ರೋಹಟ್ಗಿ ಅವರು ಮೊದಲ ರನ್ನರ್ಅಪ್ ಆಗಿ ಹೊರ ಹೊಮ್ಮಿದ್ದಾರೆ. ಅಂಜಲಿ ಅರೋರಾ ಎರಡನೇ ರನ್ನರ್ಅಪ್ ಆಗಿದ್ದಾರೆ.
ಮುನಾವರ್ ಅವರು 20 ಲಕ್ಷ ರೂಪಾಯಿ ಹಣ ಗೆದ್ದಿದ್ದಾರೆ. ಜತೆಗೆ ಅವರಿಗೆ ಕಾರು, ಸುಂದರ ಟ್ರೋಫಿ ಸಿಕ್ಕಿದೆ. ಅವರ ಇಟಲಿ ಟ್ರಿಪ್ನ ಸಂಪೂರ್ಣ ಖರ್ಚನ್ನು ನಿರ್ಮಾಣ ಸಂಸ್ಥೆ ನೋಡಿಕೊಳ್ಳಲಿದೆ. ಈ ಬಗ್ಗೆ ಫಿನಾಲೆಯಲ್ಲಿ ಘೋಷಣೆ ಮಾಡಲಾಗಿದೆ. ಮುನಾವರ್ ಕಪ್ ಗೆದ್ದಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಫಿನಾಲೆ ವೇಳೆ ಅಚ್ಚರಿಯ ಘೋಷಣೆ ಮಾಡಲಾಯಿತು. ಪ್ರಿನ್ಸ್ ನರುಲಾ ಅವರು ಸ್ಪರ್ಧಿ ಆಗಿರಲಿಲ್ಲ. ಸಮಸ್ಯೆಗಳನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಅವರನ್ನು ಈ ಶೋಗೆ ಕಳುಹಿಸಲಾಯಿತು ಎಂದು ಕಂಗನಾ ಹೇಳಿದ್ದಾರೆ. ಅವರು ಕಪ್ ಗೆಲ್ಲದಿದ್ದರೂ ಆಲ್ಟ್ ಬಾಲಜಿ ಅವರ ಲಾಕಪ್ ಕಡೆಯಿಂದ ಅವರಿಗೆ ಪ್ರಾಜೆಕ್ಟ್ ಒಂದನ್ನು ಆಫರ್ ಮಾಡಲಾಗಿದೆ.
View this post on Instagram
ಮುನಾವರ್ ಅವರು ಈ ಶೋ ಮುಗಿದ ಬೆನ್ನಲ್ಲೇ ಮತ್ತೊಂದು ಶೋಗೆ ರೆಡಿ ಆಗುತ್ತಿದ್ದಾರೆ ಎನ್ನಲಾಗಿದೆ. ‘ಖತ್ರೋಂ ಕೆ ಖಿಲಾಡಿ 12’ ಶೋನಲ್ಲಿ ಅವರು ಸ್ಪರ್ಧಿ ಆಗಲಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರ ಬರಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.