
ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ. ವಿಜಯ್ ದೇವರಕೊಂಡ ಅವರನ್ನು ಮದುವೆ ಆದ ಬಳಿಕ ಅವರ ನಟನೆಯ ಮೊದಲ ಸಿನಿಮಾ ತೆರೆಗೆ ಬರುತ್ತಿದೆ. ಅದುವೇ ‘ಕಾಕ್ಟೇಲ್ 2’. ಹಿಂದಿಯ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಜೂನ್ 19ರಂದು ರಿಲೀಸ್ ಆಗಲಿರುವ ಈ ಚಿತ್ರದ ಹಾಡಿನ ಬಿಡುಗಡೆ ಸಮಾರಂಭ ಭಾನುವಾರ (ಮೇ 17) ರಾತ್ರಿ ಅದ್ಧೂರಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸಹನಟಿ ಕೃತಿ ಸನೂನ್ ಅವರ ಸೌಂದರ್ಯವನ್ನು ಹೊಗಳುವ ಬರದಲ್ಲಿ ರಶ್ಮಿಕಾ ವೇದಿಕೆಯಲ್ಲೇ ಬಾಯಿ ತಪ್ಪಿ ಇಂಗ್ಲಿಷ್ನ ‘F’ ಪದ ಬಳಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ, ಶಾಹಿದ್ ಕಪೂರ್, ಕೃತಿ ಸನೂನ್ ಇದ್ದರು. ಕೃತಿ ಅವರನ್ನು ನೋಡಿ ಅತಿಯಾದ ಉತ್ಸಾಹದಲ್ಲಿದ್ದ ರಶ್ಮಿಕಾ ಮಾತನಾಡಿದರು. ‘ಕಾಕ್ಟೇಲ್ 2 ಚಿತ್ರದಲ್ಲಿ ಏನೋ ಒಂದು ವಿಶೇಷತೆ ಇದೆ. ಕೃತಿ ನೀವು ತುಂಬಾ ಹಾಟ್ ಆಗಿ ಕಾಣಿಸುತ್ತಿದ್ದೀರಾ ಎಂಬುದು ಇಡೀ ಜಗತ್ತಿಗೇ ಗೊತ್ತು. ನೀವು ನಿಜಕ್ಕೂ F****** ಹಾಟ್’ ಎಂದುಬಿಟ್ಟರು. ತಾವು ಆಡಿದ ಮಾತು ಅರಿವಿಗೆ ಬರುತ್ತಿದ್ದಂತೆ ಕೈಯಿಂದ ಬಾಯಿ ಮುಚ್ಚಿಕೊಂಡ ರಶ್ಮಿಕಾ, ‘ನನ್ನನ್ನು ಕ್ಷಮಿಸಿ! ಆ ಪದವನ್ನು ಸೈಲೆನ್ಸ್ ಮಾಡಿಬಿಡಿ’ ಎಂದು ವಿನಂತಿಸಿಕೊಂಡರು.
ರಶ್ಮಿಕಾ ಅವರು ತಾವು ಆಡಿದ ಮಾತಿನಿಂದ ಸ್ವಲ್ಪ ಮುಜುಗರವನ್ನು ಎದುರಿಸಿದರು. ಇದನ್ನು ಕಂಡು ಅಲ್ಲಿದ್ದ ಪ್ರೇಕ್ಷಕರು ಮತ್ತು ಮಾಧ್ಯಮದವರು ಜೋರಾಗಿ ನಕ್ಕು, ಚಪ್ಪಾಳೆ ತಟ್ಟಿದರು. ನಂತರ ಸಿನಿಮಾ ಬಗ್ಗೆ ರಶ್ಮಿಕಾ ಮಾತನಾಡಿದರು. ‘ನಾವೆಲ್ಲರೂ ಈ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದೇವೆ. ಇಡೀ ಸಿನಿಮಾದಲ್ಲಿ ಪ್ರತಿಯೊಂದು ದೃಶ್ಯವೂ ಮ್ಯಾಜಿಕಲ್ ಆಗಿ ಮೂಡಿಬಂದಿದೆ. ಈಗ ರಿಲೀಸ್ ಆಗಿರುವುದು ಕೇವಲ ಟ್ರೈಲರ್ನಂತಹ ತುಣುಕು ಅಷ್ಟೇ. ಮುಂದೆ ಚಿತ್ರದಲ್ಲಿ ನೋಡಲು ತುಂಬಾ ವಿಷಯಗಳಿವೆ’ ಎಂದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದರು.
ಇದನ್ನೂ ಓದಿ: ‘ಮಾನಸಿಕ ನೆಮ್ಮದಿ ನೀಡಿದ್ದು ವಿಜಯ್’; ರಶ್ಮಿಕಾ ಮಂದಣ್ಣ ಮನದಾಳದ ಮಾತು
ಹೋಮಿ ಅದಾಜಾನಿಯಾ ‘ಕಾಕ್ಟೇಲ್ 2’ ಚಿತ್ರ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ದಿನೇಶ್ ವಿಜನ್ ಅವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. 2012ರಲ್ಲಿ ಬಂದ ಸೂಪರ್ ಹಿಟ್ ‘ಕಾಕ್ಟೇಲ್’ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಮದುವೆಯ ನಂತರ ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ಬರಲಿರುವ ರಶ್ಮಿಕಾ ಮಂದಣ್ಣ ಅವರ ಈ ಹೊಸ ಅವತಾರವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.