
ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್ನ (Bollywood) ಬೇಡಿಕೆಯ ಹೀರೋಗಳಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಅವರ ಸಿನಿಮಾ ಹಿಟ್ ಆಗಲಿ ಅಥವಾ ಆಗದೇ ಇರಲಿ ಅವರಿಗೆ ಇರೋ ಬೇಡಿಕೆ ಮಾತ್ರ ಕಡಿಮೆ ಆಗುವಂಥದ್ದಲ್ಲ. ಈಗ ಸಲ್ಮಾನ್ ಖಾನ್ ಅವರು ‘ಸಿಕಂದರ್’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಈದ್ ಪ್ರಯುಕ್ತ ರಿಲೀಸ್ ಆಗಲಿದೆ. ಈ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಅವರು ಪಡೆದುಕೊಂಡ ಸಂಭಾವನೆ ವಿಚಾರ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಸಲ್ಮಾನ್ ಖಾನ್ ಅವರು ಕಾಲ್ಶೀಟ್ ಕೊಡೋದು ಆಪ್ತ ಬಳಗದವರಿಗೆ ಮಾತ್ರ. ಅವರು ಸಾಜಿದ್ ನಾಡಿಯಾದ್ವಾಲಾ ನಿರ್ಮಾಣದ ‘ಸಿಕಂದರ್’ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕೆ ತಮಿಳಿನ ಎಆರ್ ಮುರಗದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಸಲ್ಲು ಅವರು 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.
ಸಲ್ಮಾನ್ ಖಾನ್ ಸಂಭಾವನೆ ಪಡೆಯೋದು ಮಾತ್ರವಲ್ಲ, ಸಿನಿಮಾ ಹಿಟ್ ಆದರೆ ಬರೋ ಲಾಭದಲ್ಲಿ ಪಾಲನ್ನು ಕೂಡ ಪಡೆಯಲಿದ್ದಾರೆ. ಲಾಭದಲ್ಲಿ ಸಲ್ಮಾನ್ ಖಾನ್ಗೆ ಸಿಗೋ ಪಾಲೆಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಲ್ಮಾನ್ ಖಾನ್ ಅಭಿಮಾನಿಗಳು ಸದ್ಯ ಹಿಗ್ಗುತ್ತಿದ್ದಾರೆ.
ಇದನ್ನೂ ಓದಿ:ಸಿನಿಮಾ ಕೈಬಿಟ್ಟು ಸಲ್ಮಾನ್ ಖಾನ್ಗೆ ಕ್ಷಮೆ ಕೇಳಿದ ಅಟ್ಲಿ; ರಾಂಗ್ ಆದ ಭಾಯಿಜಾನ್?
ಇನ್ನು ಸಲ್ಮಾನ್ ಖಾನ್ಗೆ ಇಷ್ಟು ದೊಡ್ಡ ಸಂಭಾವನೆ ಕೊಟ್ಟರೆ ನಷ್ಟ ಆಗೋದು ಗ್ಯಾರಂಟಿಯಾ? ಹೀಗೊಂದು ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿರೋದು ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ ಬಂದ್ ಆಗಿದ್ದು. ದಕ್ಷಿಣದ ಸನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಅಟ್ಲಿ ಜೊತೆ ಸಿನಿಮಾ ಮಾಡುತ್ತಿದೆ. ಈ ಚಿತ್ರಕ್ಕೆ ಸಲ್ಮಾನ್ ಖಾನ್ ಅವರು ಹೀರೋ ಆಗಿ ನಟಿಸಬೇಕಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ.
ಸಲ್ಮಾನ್ ಖಾನ್ ಅವರಿಗೆ ಇರೋ ಬೇಡಿಕೆ ಕಡಿಮೆ ಆಗಿದ್ದರಿಂದಲೇ ಸನ್ ಪಿಕ್ಚರ್ಸ್ ಬಂಡವಾಳ ಹೂಡಲು ನಿರಾಕರಿಸಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರಗಳನ್ನು ಕೇಳಿ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಇನ್ನು ಅಟ್ಲಿ ಕೂಡ ಸಲ್ಮಾನ್ ಖಾನ್ಗೆ ಕ್ಷಮೆ ಕೇಳಿದ್ದಾರೆ. ಈ ಚಿತ್ರಕ್ಕಾಗಿಯೂ ಸಲ್ಮಾನ್ ಖಾನ್ ಅವರು 100 ಕೋಟಿ ರೂಪಾಯಿ ಸಂಭಾವನೆ ಪಡೆಯುವವರು ಇದ್ದರು ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ಈ ಅಲ್ಲು ಅರ್ಜುನ್ ನಟಿಸುತ್ತಾ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ