ಬೆಂಗಳೂರು ಲಿಫ್ಟ್​ನಲ್ಲಿ ರಿತೇಶ್​ ದೇಶ್​ಮುಖ್​ಗೆ ಆಗಿತ್ತು ಅವಮಾನ; ಇಲ್ಲಿದೆ ಹಳೆಯ ಘಟನೆ

ರಿತೇಶ್ ದೇಶ್​ಮುಖ್​ ಅವರ ಜನ್ಮದಿನದಂದು, ಅವರ ಜೀವನದ ವಿವಿಧ ಅಂಶಗಳನ್ನು ಚರ್ಚಿಸಲಾಗಿದೆ. ಬೆಂಗಳೂರಿನ ಲಿಫ್ಟ್‌ನಲ್ಲಿ ಅವರಿಗೆ ಸಂಭವಿಸಿದ ಘಟನೆ ಬಗ್ಗೆ ಹೇಳಿಕೊಂಡಿದ್ದರು. ಅವರನ್ನು ಜೆನಿಲಿಯಾ ಅವರ ಪತಿ ಎಂದು ದಕ್ಷಿಣ ಭಾರತದಲ್ಲಿ ಹೆಚ್ಚು ಗುರುತಿಸಲಾಗುತ್ತದೆ ಎಂದು ಲೇಖನ ಉಲ್ಲೇಖಿಸುತ್ತದೆ. ಅವರ ಅಭಿಮಾನಿಗಳು ಹೊಸ ಸಿನಿಮಾಗಳಲ್ಲಿ ಅವರನ್ನು ನೋಡಲು ಬಯಸುತ್ತಿದ್ದಾರೆ.

ಬೆಂಗಳೂರು ಲಿಫ್ಟ್​ನಲ್ಲಿ ರಿತೇಶ್​ ದೇಶ್​ಮುಖ್​ಗೆ ಆಗಿತ್ತು ಅವಮಾನ; ಇಲ್ಲಿದೆ ಹಳೆಯ ಘಟನೆ
ಜೆನಿಲಿಯಾ-ರಿತೇಶ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 17, 2024 | 8:47 AM

ರಿತೇಶ್ ದೇಶ್​ಮುಖ್ ಅವರು ಬಾಲಿವುಡ್​ನಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಇಂದು (ಡಿಸೆಂಬರ್ 17) ರಿತೇಶ್ ದೇಶ್​ಮುಖ್ ಅವರ ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ. ರಿತೇಶ್ ಅವರಿಗೆ ಈ ಮೊದಲು ಬೆಂಗಳೂರು ಲಿಫ್ಟ್​ನಲ್ಲಿ ಅವಮಾನ ಆಗಿತ್ತು. ಆ ಬಗ್ಗೆ ಹೇಳಿಕೊಂಡಿದ್ದರು. ಈ ಘಟನೆಯನ್ನು ಅವರು ಫನ್ ಆಗಿಯೇ ತೆಗೆದುಕೊಂಡಿದ್ದರು.

ರಿತೇಶ್ ಅವರು ಜೆನಿಲಿಯಾ ಅವರನ್ನು ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಕನ್ನಡಿಗರಿಗೆ ಜೆನಿಲಿಯಾ ಪರಿಚಯ ಇದೆ. ಅವರು ಕನ್ನಡದಲ್ಲೂ ನಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ರಿತೇಶ್ ಅವರನ್ನು ಅನೇಕರು ಜೆನಿಲಿಯಾ ಪತಿ ಎಂದು ಗುರುತಿಸುವವರೇ ಹೆಚ್ಚು. ಇದೇ ರೀತಿಯ ಘಟನೆ ಬೆಂಗಳೂರಿನಲ್ಲೂ ಆಗಿತ್ತು.

ರಿತೇಶ್ ಒಮ್ಮೆ ಬೆಂಗಳೂರಿನ ಹೋಟೆಲ್​ನ ಲಿಫ್ಟ್​ನಲ್ಲಿ ಹೋಗುತ್ತಿದ್ದರು. ‘ನೀವು ಜೆನಿಲಿಯಾ ಪತಿ ಅಲ್ಲವಾ’ ಎಂದು ಅಲ್ಲಿದ್ದವರು ಕೇಳಿದರು. ಇದಕ್ಕೆ ರಿತೇಶ್​ಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ‘ನಾನು ಇಲ್ಲಿ ಜೆನಿಲಿಯಾ ಪತಿ. ಆದರೆ, ಮಹಾರಾಷ್ಟ್ರದಲ್ಲಿ ಎಲ್ಲರೂ ಜೆನಿಲಿಯಾ ಅವರನ್ನು ಗುರುತಿಸೋದು ರಿತೇಶ್ ಅವರ ಪತ್ನಿ ಎಂದು’ ಎಂಬುದಾಗಿ ರಿತೇಶ್ ಹೇಳಿದ್ದರು.

ಆಗ ಅಲ್ಲಿ ಲಿಫ್ಟ್​ನಲ್ಲಿ ಇದ್ದವರು ಸುಮ್ಮನೆ ಆಗಲಿಲ್ಲ. ‘ಅದು ಒಂದು ರಾಜ್ಯದಲ್ಲಿ ಮಾತ್ರ. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರದಲ್ಲಿ ನೀವು ಜೆನಿಲಿಯಾ ಪತಿ ಅಷ್ಟೇ’ ಎಂದು ಉತ್ತರಿಸಿದ್ದರು. ಈ ಘಟನೆಯ ಬಗ್ಗೆ ರಿತೇಶ್ ಅನೇಕ ಬಾರಿ ಹೇಳಿದ್ದಾರೆ. ಅವರಿಗೆ ಇದು ಅವಮಾನದ ಸಂಗತಿಯೇ. ಆದರೆ, ಇದನ್ನು ಅವರು ಆ ರೀತಿಯಲ್ಲಿ ತೆಗೆದುಕೊಂಡಿಲ್ಲ. ಅವರಿಗೆ ಈ ಬಗ್ಗೆ ಖುಷಿ ಇದೆ. ‘ನನ್ನನ್ನು ಜೆನಿಲಿಯಾ ಪತಿ ಎಂದು ಗುರುತಿಸಿದಾಗ ಖುಷಿ ಆಗುತ್ತದೆ’ ಎಂದು ರಿತೇಶ್ ಹೇಳಿಕೊಂಡಿದ್ದರು.

ಇದನ್ನೂ ಓದಿ: ಜೆನಿಲಿಯಾ ಡಿಸೋಜಾ-ರಿತೇಶ್​ ದೇಶಮುಖ್​ ದಾಂಪತ್ಯಕ್ಕೆ 12 ವರ್ಷ

ರಿತೇಶ್ ಅವರು ಇತ್ತೀಚೆಗೆ ನಟನೆಯಿಂದ ದೂರ ಇದ್ದಾರೆ. ಅವರು ಅಷ್ಟಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಹೊಸ ಚಿತ್ರಗಳಲ್ಲಿ ನಟಿಸಿ ಅವರು ಗಮನ ಸೆಳೆಯುವ ಪ್ರಯತ್ನ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ