ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಿರ್ದೇಶಕ ಅಟ್ಲಿ ಖ್ಯಾತಿ ಹೆಚ್ಚಿದೆ. ಖ್ಯಾತ ನಿರ್ಮಾಪಕರು, ನಟರು ಇವರ ಮನೆ ಬಾಗಿಲಲ್ಲಿ ನಿಂತಿದ್ದಾರೆ. ಈಗ ಅವರ ನಿರ್ದೇಶನ ‘ಎ6’ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಸಲ್ಮಾನ್ ಖಾನ್ ಹೀರೋ. ಈ ಸಿನಿಮಾ 2026ರಲ್ಲಿ ಸೆಟ್ಟೇರಲಿದೆ. ಈಗ ಅಟ್ಲಿ ಅವರು ಚಿತ್ರದ ಬಜೆಟ್ ರಿವೀಲ್ ಮಾಡಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ಅಟ್ಲಿ ಅವರ ಸಿನಿಮಾದಲ್ಲಿ ಸ್ಟಾರ್ ಹೀರೋಗಳು ಇರುತ್ತಾರೆ. ಜೊತೆಗೆ ಅದರ ಬಜೆಟ್ ಕೂಡ ದೊಡ್ಡದಾಗಿಯೇ ಇರುತ್ತದೆ. ಈಗ ‘ಎ6’ ಚಿತ್ರದ ಬಜೆಟ್ 500 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ಮೂಲಕ ಸಿನಿಮಾದ ಮೇಲೆ ಇರುವ ನಿರೀಕ್ಷೆ ಹೆಚ್ಚುವಂತೆ ಆಗಿದೆ. ಸಿನಿಮಾ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲವೂ ಮೂಡಿದೆ.
ಹಾಗಾದರೆ ಸಿನಿಮಾ ರಿಲೀಸ್ ಆಗೋದು ಯಾವಾಗ? ಆ ಪ್ರಶ್ನೆಗೂ ಉತ್ತರ ಇದೆ. ಸಲ್ಮಾನ್ ಖಾನ್ ತಮ್ಮ ಸಿನಿಮಾಗಳನ್ನು ಈದ್‌ಗೆ ರಿಲೀಸ್ ಮಾಡಲು ಹೆಚ್ಚು ಆದ್ಯತೆ ನೀಡುತ್ತಾರೆ. ಈ ವರ್ಷ ಅವರ ನಟನೆಯ ‘ಸಿಖಂದರ್’ ರಿಲೀಸ್ ಆಗಲಿದೆ. 2026ರಲ್ಲಿ ಅವರ ನಟನೆಯ ಯಾವುದೇ ಚಿತ್ರ ತೆರೆಗೆ ಬರುವುದಿಲ್ಲ. ಹೀಗಾಗಿ, 2027ರ ಈದ್‌ಗೆ ಚಿತ್ರವನ್ನು ತೆರೆಗೆ ತರುವ ಆಲೋಚನೆ ತಂಡಕ್ಕೆ ಇದೆ.
ಸಲ್ಮಾನ್ ಖಾನ್ ಅವರು ಬಾಡಿ ಮೆಂಟೇನ್ ಮಾಡಿದ್ದಾರೆ. ಅವರು ತಮ್ಮ ದೇಹದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಅವರು ಈ ಚಿತ್ರಕ್ಕಾಗಿ ದೇಹ ತೂಕವನ್ನು ಕಳೆದುಕೊಳ್ಳಲಿದ್ದಾರೆ. ಸಿಖಂದರ್ ಸಿನಿಮಾ ಕೆಲಸಗಳು ಮುಗಿದ ಬಳಿಕ ಅವರು ಈ ಬಗ್ಗೆ ಗಮನ ಹರಿಸಲಿದ್ದಾರೆ.
ಇದನ್ನೂ ಓದಿ: ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ನಿರ್ದೇಶಕ ಅಟ್ಲಿಗೆ ಬಾಲಿವುಡ್ನಲ್ಲಿ ಇದೆಂಥ ಸ್ಥಿತಿ
ಅಟ್ಲಿ ತಮಿಳಿನರು. ಹೀಗಾಗಿ ಈ ಚಿತ್ರ ತಮಿಳಿನಲ್ಲೂ ರಿಲೀಸ್ ಆಗಲಿದೆ. ಈ ಕಾರಣದಿಂದಲೇ ರಜನಿಕಾಂತ್ ಜೊತೆ ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಸೂಪರ್ಸ್ಟಾರ್ಗಳೇ. ಇವರಿಗೆ ನೀಡುವ ಸಂಭಾವನೆಯೇ ಸಿನಿಮಾ ಬಜೆಟ್ ಹೆಚ್ಚಲು ಪ್ರಮುಖ ಕಾರಣ ಆಗಲಿದೆ. ಈ ಚಿತ್ರದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.