ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ನಿರ್ದೇಶಕ ಅಟ್ಲಿಗೆ ಬಾಲಿವುಡ್ನಲ್ಲಿ ಇದೆಂಥ ಸ್ಥಿತಿ
ಅಟ್ಲೀ ನಿರ್ದೇಶನದ 'ಜವಾನ್' ಚಿತ್ರದ ಭರ್ಜರಿ ಯಶಸ್ಸಿನ ನಂತರ, ಅವರ ನಿರ್ಮಾಣದ 'ಬೇಬಿ ಜಾನ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದೆ. 50 ಕೋಟಿ ರೂಪಾಯಿ ಗಳಿಕೆಯ ಗುರಿಯನ್ನು ತಲುಪಲು ವಿಫಲವಾಗಿದೆ. 'ಥೇರಿ' ಚಿತ್ರದ ಹಿಂದಿ ರಿಮೇಕ್ ಆಗಿರುವ ಈ ಚಿತ್ರ, ಮೂಲ ಚಿತ್ರದೊಂದಿಗೆ ಹೋಲಿಕೆ ಮಾಡಲ್ಪಟ್ಟು, ನಿರೀಕ್ಷೆಗಳನ್ನು ಪೂರ್ಣಗೊಳಿಸಲು ವಿಫಲವಾಗಿದೆ.
ನಿರ್ದೇಶಕ ಅಟ್ಲಿ ಅವರು ಬಾಲಿವುಡ್ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ದಕ್ಷಿಣದಲ್ಲಿ ಮಿಂಚಿದ ಬಳಿಕ ನೇರವಾಗಿ ‘ಜವಾನ್’ ಸಿನಿಮಾ ಮೂಲಕ ಬಾಲಿವುಡ್ಗೆ ಟಿಕೆಟ್ ಪಡೆದರು. ಅಲ್ಲಿ ಅವರ ಸಿನಿಮಾಗಳು ಸಾಕಷ್ಟು ಹೆಸರು ಮಾಡಿದವು. ಈಗ ಅವರಿಗೆ ಬಾಲಿವುಡ್ನಲ್ಲಿ ಕಷ್ಟ ಎದುರಾಗಿದೆ. ಅವರ ನಿರ್ಮಾಣದ ಹೊಸ ಸಿನಿಮಾ ‘ಬೇಬಿ ಜಾನ್’ 50 ಕೋಟಿ ರೂಪಾಯಿ ಗಳಿಕೆ ಮಾಡಲು ಒದ್ದಾಡಿದೆ.
ಅಟ್ಲಿ ಅವರಿಗೆ ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ನಿರ್ದೇಶನದ ‘ಜವಾನ್’ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿ ಗಮನ ಸೆಳೆದಿದೆ. ಈಗ ಅವರು ಹಿಂದಿಯಲ್ಲೇ ಸಿನಿಮಾ ನಿರ್ಮಾಣಕ್ಕೆ ಇಳಿದರು. ತಮ್ಮದೇ ನಿರ್ದೇಶನದ ‘ಥೇರಿ’ ಚಿತ್ರವನ್ನು ಹಿಂದಿಗೆ ‘ಬೇಬಿ ಜಾನ್’ ಹೆಸರಲ್ಲಿ ರಿಮೇಕ್ ಮಾಡಿದರು. ಈ ಚಿತ್ರಕ್ಕೆ ಅವರು ನಿರ್ಮಾಪಕರಾದರೂ ಮುಂದೆ ನಿಂತು ಸಿನಿಮಾ ಪ್ರಚಾರದಲ್ಲಿ ಭಾಗಿ ಆದರು. ಆದರೆ, ಸಿನಿಮಾಗೆ ಹಿನ್ನಡೆ ಆಗಿದೆ. ಅನೇಕರು ಮೂಲ ಚಿತ್ರದ ಜೊತೆ ಇದನ್ನು ಹೋಲಿಕೆ ಮಾಡುತ್ತಿದ್ದಾರೆ.
ಅಟ್ಲಿ ಅವರು ‘ಬೇಬಿ ಜಾನ್’ ಚಿತ್ರದ ಬಗ್ಗೆ ಹೊಗಳಿದ್ದರು. ‘ರಣಬೀರ್ ಕಪೂರ್ ಅವರನ್ನು ಅನಿಮಲ್ ಸಿನಿಮಾ ಹೇಗೆ ಸೂಪರ್ಸ್ಟಾರ್ ಆಗಿ ಮಾಡಿತೋ ಅದೇ ರೀತಿ ಬೇಬಿ ಜಾನ್ ಸಿನಿಮಾ ವರುಣ್ ಧವನ್ನ ಸ್ಟಾರ್ ಆಗಿಸುತ್ತದೆ’ ಎಂದಿದ್ದರು. ಆದರೆ, ಅದು ಕೇವಲ ಮಾತಿಗೆ ಸೀಮಿತ ಆಗಿದೆ. ಅಂದುಕೊಂಡಂತೆ ಏನೂ ನಡೆದಿಲ್ಲ.
‘ಬೇಬಿ ಜಾನ್’ ಸಿನಿಮಾಗೆ ವೀಕೆಂಡ್ನಲ್ಲೂ ಕಲೆಕ್ಷನ್ ಆಗಿಲ್ಲ. ಈ ಚಿತ್ರದ ಒಟ್ಟಾರೆ ಗಳಿಕೆ 27 ಕೋಟಿ ರೂಪಾಯಿ ಆಗಿದೆ. ಈ ಚಿತ್ರ 50 ಕೋಟಿ ರೂಪಾಯಿ ಆದರೂ ಗಳಿಸಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. 1000 ಕೋಟಿ ರೂಪಾಯಿ ಬಿಸ್ನೆಸ್ ಎಲ್ಲಿ, 27 ಕೋಟಿ ರೂಪಾಯಿ ಬಿಸ್ನೆಸ್ ಎಲ್ಲಿ ಎಂದು ಅನೇಕರು ಹೋಲಿಕೆ ಮಾಡುತ್ತಿದ್ದಾರೆ. ಹೀಗಾಗಿ, ‘ಬೇಬಿ ಜಾನ್’ ಚಿತ್ರವನ್ನು ದೊಡ್ಡ ಡಿಸಾಸ್ಟರ್ ಎಂದು ಘೋಷಿಸಲಾಗುತ್ತಿದೆ.
ಇದನ್ನೂ ಓದಿ: ‘ದೇಶವೇ ಹೆಮ್ಮೆಪಡೋ ಸಿನಿಮಾ ಮಾಡುವೆ’; ಸಲ್ಮಾನ್ ಜೊತೆಗಿನ ಚಿತ್ರ ಘೋಷಿಸಿದ ಅಟ್ಲಿ
‘ಬೇಬಿ ಜಾನ್’ ಚಿತ್ರಕ್ಕೆ ಅಟ್ಲಿ ಸಾಕಷ್ಟು ಹೈಪ್ ಕೊಟ್ಟಿದ್ದರು. ಅಲ್ಲದೆ, ಸಾಕಷ್ಟು ಪ್ರಚಾರ ಕೂಡ ಮಾಡಿದ್ದರು. ಆದರೆ, ಅದ್ಯಾವುದೂ ಕೆಲಸ ಮಾಡಿಲ್ಲ. ಸಿನಿಮಾಗೆ ಸಾಕಷ್ಟು ಹಿನ್ನಡೆ ಆಗುತ್ತಲೇ ಇದೆ. ಮುಂದೆ ಚಿತ್ರ ಮತ್ತೆ ಚೇತರಿಕೆ ಕಾಣುತ್ತದೆಯೇ ನೋಡಬೇಕಿದೆ. ಅಟ್ಲಿ ಅವರು ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.