ಸಲ್ಮಾನ್ ಖಾನ್ (Salman Khan) ಹಾಗೂ ಶಾರುಖ್ ಖಾನ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಜನ್ಮದಿನದಂದು ಶಾರುಖ್ ಖಾನ್ ಆಗಮಿಸಿ ಬರ್ತ್ಡೇ ವಿಶ್ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ಸಲ್ಮಾನ್ ಖಾನ್ ಅವರು ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಜತೆಗೆ ಬರುತ್ತಿದ್ದಾರೆ. ಅಂದರೆ, ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan Teaser) ಸಿನಿಮಾದ ಟೀಸರ್ ‘ಪಠಾಣ್’ ಸಿನಿಮಾದ ಆರಂಭದಲ್ಲಿ ಪ್ರಸಾರ ಆಗಲಿದೆ.
‘ಪಠಾಣ್’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಶಾರುಖ್ ಖಾನ್ ಅವರು ನಾಲ್ಕು ವರ್ಷಗಳ ಬಳಿಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ಹಲವು ಸಿನಿಮಾ ತಂಡಗಳು ‘ಪಠಾಣ್’ ಚಿತ್ರದ ಜತೆ ಟೀಸರ್, ಟ್ರೇಲರ್ ಪ್ರಸಾರ ಮಾಡಲು ಮುಂದೆ ಬಂದಿವೆ. ಈಗ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಟೀಸರ್ ‘ಪಠಾಣ್’ ಸಿನಿಮಾ ಜತೆ ಬರುತ್ತಿರುವುದು ಅವರ ಫ್ಯಾನ್ಸ್ಗೆ ಖುಷಿ ನೀಡಿದೆ.
‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಸಲ್ಮಾನ್ ಅವರು ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಪೋಸ್ಟರ್ಗಳು ಇತ್ತೀಚೆಗೆ ರಿಲೀಸ್ ಆಗಿದ್ದವು. ಈಗ ಜನವರಿ 25ರಂದು ಟೀಸರ್ ರಿಲೀಸ್ ಆಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ. ‘ಪಠಾಣ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಅತಿಥಿ ಪಾತ್ರ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ವಿಚಾರ ಇನ್ನೂ ಅಧಿಕೃತ ಆಗಿಲ್ಲ.
ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ ಭೇಟಿಗಾಗಿ 1,100 ಕಿ.ಮೀ. ಸೈಕಲ್ ಸವಾರಿ ಮಾಡಿದ ಅಭಿಮಾನಿ; ಕಡೆಗೂ ಸಿಕ್ತು ದರ್ಶನ
‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರವನ್ನು ಫರ್ಹಾದ್ ಸಮ್ಜಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಪೂಜಾ ಹೆಗ್ಡೆ, ಶೆಹನಾಜ್ ಗಿಲ್ ಮೊದಲಾದವರು ನಟಿಸಿದ್ದಾರೆ. ಆ್ಯಕ್ಷನ್ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿಬರುತ್ತಿದೆ. ರಾಮ್ ಚರಣ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:14 pm, Sat, 21 January 23