ನಟ ಸಲ್ಮಾನ್ ಖಾನ್ ಅವರು ಇತ್ತೀಚೆಗೆ ವಿಶೇಷ ವಾಚ್ ಧರಿಸಿ ಪೋಸ್ ಕೊಟ್ಟಿದ್ದರು. ಈ ವಾಚ್ ‘ರಾಮ ಜನ್ಮಭೂಮಿ ಎಡಿಷನ್’ ವಾಚ್ ಆಗಿತ್ತು. ಇದು ಅನೇಕರ ಕಣ್ಣು ಕುಕ್ಕಿದೆ. ಮುಸ್ಲಿಂ ಸಮುದಾಯದ ಧರ್ಮ ಗುರುಗಳು ಈ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಸಲ್ಮಾನ್ ಖಾನ್ (Salman Khan) ‘ಹರಾಮ್’ ಮಾಡಿದ್ದಾರೆ ಎಂದು ದೂರಿದ್ದಾರೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಜೋರಾಗುತ್ತಿವೆ. ಅವರು ಕ್ಷಮೆ ಕೇಳಬೇಕು ಎನ್ನುವ ಆಗ್ರಹವೂ ವ್ಯಕ್ತವಾಗಿದೆ.
ಸಲ್ಮಾನ್ ಖಾನ್ ಅವರು ಮುಸ್ಲಿಂ ಸಮುದಾಯಕ್ಕೆ ಸೇರದವರಾಗಿರಬಹುದು, ಆದರೆ, ಅವರು ಎಲ್ಲಾ ಧರ್ಮದವರನ್ನು ಗೌರವಿಸುತ್ತಾರೆ. ಸಿನಿಮಾಗಳಲ್ಲಿ ಭಜರಂಗಿ ಪಾತ್ರವನ್ನು ಅವರು ಮಾಡುತ್ತಾರೆ. ಅದೇ ರೀತಿ ನಿಜ ಜೀವನದಲ್ಲೂ ಅವರು ಎಲ್ಲಾ ದೇವರುಗಳನ್ನು ಸಮಾನವಾಗಿ ಕಾಣುತ್ತಾರೆ. ಇದೇ ಮನಸ್ಥಿತಿಯಲ್ಲಿ ಅವರು ರಾಮ ಜನ್ಮಭೂಮಿ ದೇವಾಲಯ ಇರುವ ವಾಚ್ ಧರಿಸಿದ್ದಕ್ಕೆ ಟೀಕೆ ಎದುರಿಸಬೇಕಾಗಿದೆ.
‘ಸಲ್ಮಾನ್ ಖಾನ್ ಅವರು ರಾಮ ಮಂದಿರದ ಪ್ರಚಾರಕ್ಕಾಗಿ ತಯಾರಿಸಿದ ರಾಮ ಮಂದಿರ ಆವೃತ್ತಿಯ ವಾಚ್ ಧರಿಸಿದ್ದಾರೆ. ಮುಸ್ಲಿಂ ಆಗಿರುವಾಗ ಕೈಯಲ್ಲಿ ಅಂತಹ ಗಡಿಯಾರವನ್ನು ಧರಿಸುವುದು ಹರಾಮ್’ ಎಂದು ಆಲ್ ಇಂಡಿಯಾ ಮುಸ್ಲಿಂ ಜಮಾತ್ನ ಮೌಲಾನಾ ಶಹಾಬುದ್ದೀನ್ ರಾಜ್ವಿ ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
#WATCH | Bareilly, UP: On Actor Salman Khan, President of All India Muslim Jamaat, Maulana Shahabuddin Razvi Bareilvi says, “Salman Khan is a very famous personality in India… Salman Khan has been seen wearing a Ram edition watch to promote Ram Mandir… If any Muslim, even if… pic.twitter.com/nCGSGhddLM
— ANI (@ANI) March 28, 2025
‘ಸಲ್ಮಾನ್ ಖಾನ್ ಭಾರತದ ಜನಪ್ರಿಯ ವ್ಯಕ್ತಿ. ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸಲ್ಮಾನ್ ಖಾನ್ ಕೂಡ ಮುಸ್ಲಿಂ. ಹೀಗಿರುವಾಗ ಈ ರೀತಿ ವಾಚ್ ಧರಿಸೋದು ಎಷ್ಟು ಸರಿ? ಸಲ್ಮಾನ್ ಖಾನ್ ಆಗಿರಲಿ ಅಥವಾ ಇನ್ಯಾವುದೇ ಮುಸ್ಲಿಂ ಆಗಿರಲಿ, ರಾಮ ಮಂದಿರ ಅಥವಾ ಯಾವುದೇ ಇತರ ಮುಸ್ಲಿಮೇತರ ವಿಷಯವನ್ನು ಪ್ರಚಾರ ಮಾಡುತ್ತಿದ್ದರೆ ಅದನ್ನು ಕಾನೂನುಬಾಹಿರ ಮತ್ತು ಹರಾಮ್ ಎಂದು ಪರಿಗಣಿಸಲಾಗುತ್ತದೆ. ಸಲ್ಮಾನ್ ಖಾನ್ ಅವರು ಶರಿಯತ್ ತತ್ವಗಳನ್ನು ಅನುಸರಿಸಬೇಕೆಂದು ನಾನು ಒತ್ತಾಯಿಸುತ್ತೇನೆ’ ಎಂದು ಮೌಲಾನಾ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ, ದೇವರಿಗೆ ಬಿಟ್ಟಿದ್ದು: ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಧರಿಸಿರುವುದು ಜಾಕೋಬ್ ಆ್ಯಂಡ್ ಕೋ ಅವರ ಎಪಿಕ್ ರಾಮ್ ಜನ್ಮಭೂಮಿ ಟೈಟಾನಿಯಮ್ ಎಡಿಷನ್ 2 ವಾಚ್ ಇದಾಗಿದೆ. ಇದರ ಬೆಲೆ 34 ಲಕ್ಷ ರೂಪಾಯಿ. ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ಮಾರ್ಚ್ 30ರಂದು ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.