AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲೀಸ್ ಆದಾಗ ನಿರ್ಮಾಪಕರಿಗೆ ನಷ್ಟ, ರೀ-ರಿಲೀಸ್ ಮೂಲಕ ಲಾಭ; ಕಮಾಲ್ ಮಾಡಿದ ‘ಸನಮ್ ತೇರಿ ಕಸಮ್’ ಚಿತ್ರ

ಸನಮ್ ತೇರಿ ಕಸಮ್ ಚಿತ್ರ, 9 ವರ್ಷಗಳ ಹಿಂದೆ ಬಾಕ್ಸ್ ಆಫೀಸ್‌ನಲ್ಲಿ ನಿರಾಶಾದಾಯಕ ಫಲಿತಾಂಶ ಪಡೆದಿತ್ತು. ಆದರೆ, ಈಗ ರಿಲೀಸ್ ಆಗಿ ಅದ್ಭುತ ಯಶಸ್ಸು ಕಂಡಿದೆ. ಮೊದಲ ಮೂರು ದಿನಗಳಲ್ಲಿ ಚಿತ್ರ ದೊಡ್ಡ ಗಳಿಕೆ ಮಾಡಿದೆ. ಪ್ರೇಮಿಗಳ ದಿನ ಮತ್ತು ವಾರಾಂತ್ಯದಲ್ಲಿ ಮತ್ತಷ್ಟು ಗಳಿಕೆಯ ನಿರೀಕ್ಷೆ ಇದೆ.

ರಿಲೀಸ್ ಆದಾಗ ನಿರ್ಮಾಪಕರಿಗೆ ನಷ್ಟ, ರೀ-ರಿಲೀಸ್ ಮೂಲಕ ಲಾಭ; ಕಮಾಲ್ ಮಾಡಿದ ‘ಸನಮ್ ತೇರಿ ಕಸಮ್’ ಚಿತ್ರ
ಸನಮ್ ತೆರಿ ಕಸಮ್
ರಾಜೇಶ್ ದುಗ್ಗುಮನೆ
|

Updated on: Feb 10, 2025 | 7:03 AM

Share

ಸುಮಾರು 9 ವರ್ಷಗಳ ಹಿಂದೆ ರಿಲೀಸ್ ಆದ ಲವ್​ ಸ್ಟೋರಿ ಚಿತ್ರ ‘ಸನಮ್ ತೇರಿ ಕಸಮ್’ ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಹಿಟ್ ಎನಿಸಿಕೊಂಡಿತ್ತು. 25 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಚಿತ್ರ ಆಗಿನ ಕಾಲದಲ್ಲಿ ಬಾಚಿಕೊಂಡಿದ್ದು, 16 ಕೋಟಿ ರೂಪಾಯಿ ಮಾತ್ರ. ಅಂದರೆ ಇದು ನಿರ್ಮಾಪಕರಿಗೆ ನಷ್ಟವನ್ನೇ ಉಂಟು ಮಾಡಿತ್ತು. ಆದರೆ, ಈಗ ಚಿತ್ರ ರೀ-ರಿಲೀಸ್ ಆಗಿ ಯಶಸ್ಸು ಕಾಣುವ ಸೂಚನೆಯನ್ನು ಕೊಟ್ಟಿದೆ.

9 ವರ್ಷಗಳ ಹಿಂದೆ ‘ಸನಮ್ ತೇರಿ ಕಸಮ್’ ಚಿತ್ರವನ್ನು ಜನರು ಅಷ್ಟಾಗಿ ಇಷ್ಟಪಟ್ಟಿರಲಿಲ್ಲ. ರೊಮ್ಯಾಂಟಿಕ್ ಡ್ರಾಮಾ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಅಲ್ಲಿಗಲ್ಲಿಗೆ ಆಗಿತ್ತು. ಹರ್ಷವರ್ಧನ್ ರಾಣೆ ಹಾಗೂ ಪಾಕ್ ನಟಿ ಮರ್ವಾ ಹೊಕಾನೆ ಈ ಚಿತ್ರದಲ್ಲಿ ನಟಿಸಿದ್ದರು. ಇದು ವರ್ಮಾ ಅವರ ಮೊದಲ ಹಿಂದಿ ಸಿನಿಮಾ ಆಗಿತ್ತು. ಆ ಬಳಿಕ ಚಿತ್ರವನ್ನು ಯೂಟ್ಯೂಬ್ ಹಾಗೂ ಒಟಿಟಿಯಲ್ಲಿ ನೋಡಿ ಜನರು ಇಷ್ಟಪಟ್ಟರು. ಈಗ ಪ್ರೇಮಿಗಳ ದಿನಕ್ಕೆ ಒಂದು ವಾರ ಇರುವಾಗ ಸಿನಿಮಾ (ಫೆಬ್ರವರಿ 7) ರೀ ರಿಲೀಸ್ ಕಂಡಿದೆ.

ರಾಧಿಕಾ ರಾವ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರೀ ರಿಲೀಸ್ ಆದ ಮೊದಲ ದಿನ ಈ ಚಿತ್ರ 5 ಕೋಟಿ ರೂಪಾಯಿ ಬಾಚಿಕೊಂಡಿತು. ಎರಡನೇ ದಿನ 9 ಕೋಟಿ ರೂಪಾಯಿ ಗಳಿಸಿದೆ. ಬಾನುವಾರ ಈ ಚಿತ್ರ 5.75 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ. ಈ ಮೂಲಕ ಮೂರೇ ದಿನಕ್ಕೆ 15 ಕೋಟಿ ರೂಪಾಯಿಯಷ್ಟು ಚಿತ್ರ ಗಳಿಸಿ ಸಾಧನೆ ಮಾಡಿದೆ.

ಸದ್ಯ ಹೀಗೆಯೇ ಮುಂದುವರಿದರೆ ಚಿತ್ರದ ಮೂಲ ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಲಿದೆ. ಪ್ರೇಮಿಗಳ ದಿನ ಹಾಗೂ ಈ ವಾರಂತ್ಯದಲ್ಲಿ ಚಿತ್ರ ಮತ್ತಷ್ಟು ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಈ ಮೂಲಕ ಒಟ್ಟಾರೆ ಗಳಿಕೆ ಎಲ್ಲಾ ದಾಖಲೆಗಳನನು ಮುರಿದು ಸಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ತಾಯಿ ಜೊತೆ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ವಿಜಯ್ ದೇವರಕೊಂಡ

‘ಸನಮ್​ ತೇರಿ ಕಸಮ್’ ಚಿತ್ರದ ನಾಯಕಿ ಪಕ್ಕಾ ಸಂಪ್ರದಾಯಸ್ತ ಕುಟುಂಬದಿಂದ ಬಂದವಳು. ತಂದೆ ಮಗಳನ್ನು ತುಂಬಾನೇ ಸ್ಟ್ರಿಕ್ಟ್ ಆಗಿ ಬೆಳೆಸಿರುತ್ತಾನೆ. ಇದೇ ಕಟ್ಟಡದಲ್ಲಿ ಕಥಾ ನಾಯಕ ಕೂಡ ಇರುತ್ತಾನೆ. ಆತ ಚಿಲ್ ಆಗಿರೋ ವ್ಯಕ್ತಿ. ಇಬ್ಬರ ಮಧ್ಯೆ ಪ್ರೀತಿ ಬೆಳೆಯುತ್ತದೆ. ಅದು ಹೇಗೆ? ಮುಂದೇನಾಗುತ್ತದೆ ಎಂಬುದು ಚಿತ್ರದ ಕಥೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.