ಅಕ್ಷಯ್ ಕುಮಾರ್ ನಟನೆಯ ‘ಸೆಲ್ಫೀ’ ಚಿತ್ರದ ಮೊದಲ ದಿನದ ಗಳಿಕೆ ಕೇವಲ 10 ಲಕ್ಷ ರೂಪಾಯಿ?
Selfiee Movie Collection: ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಯಾವ ಭಾಷೆಯ ಚಿತ್ರಗಳನ್ನು ಬೇಕಿದ್ದರೂ ನೋಡಬಹುದು. ಈ ಕಾಲದಲ್ಲೂ ಅಕ್ಷಯ್ ಕುಮಾರ್ ಅವರು ಬಿಟ್ಟೂ ಬಿಡದೆ ರಿಮೇಕ್ ತಂತ್ರದ ಮೊರೆ ಹೋಗುತ್ತಿದ್ದಾರೆ.
ನಟ ಅಕ್ಷಯ್ ಕುಮಾರ್ (Akshay Kumar) ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದ್ದ ಕಾಲ ಒಂದಿತ್ತು. ಆದರೆ, ಈಗ ಕಾಲ ಬಲಾಗಿದೆ. ಅವರು ಹೋದಲ್ಲೆಲ್ಲ ಸೋಲು ಕಾಣುತ್ತಿದ್ದಾರೆ. ಸಾಲು ಸಾಲು ರಿಮೇಕ್ ಮಾಡಿ ಫ್ಲಾಪ್ ಹೊಡಿಸಿಕೊಳ್ಳುತ್ತಿದ್ದಾರೆ. ಅವರ ನಟನೆಯ ‘ಸೆಲ್ಫೀ’ ಚಿತ್ರ (Selfiee Movie) ಸೋಲಿನ ರುಚಿ ಕಂಡಿದೆ. ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಕೇವಲ 10 ಲಕ್ಷ ರೂಪಾಯಿ ಎಂದು ಕಂಗನಾ ರಣಾವತ್ ಲೆಕ್ಕ ನೀಡಿದ್ದಾರೆ. ಈ ಸಿನಿಮಾದ ಮೊದಲ ದಿನದ ಅಸಲಿ ಕಲೆಕ್ಷನ್ 3 ಕೋಟಿ ರೂಪಾಯಿ ಎಂದು ಟ್ರೇಡ್ ವಿಶ್ಲೇಷಕರು ಲೆಕ್ಕ ನೀಡಿದ್ದಾರೆ. ಅದೇನೇ ಇದ್ದರೂ ಅಕ್ಷಯ್ ತಮ್ಮ ವೃತ್ತಿ ಜೀವನದಲ್ಲಿ ಕಂಡ ಹೀನಾಯ ಸೋಲು ಇದಾಗಿದೆ.
ಇದು ಒಟಿಟಿ ಯುಗ. ಎಲ್ಲ ಭಾಷೆಗಳ ಸಿನಿಮಾಗಳು ಒಟಿಟಿಯಲ್ಲಿ ಸಿಗುತ್ತವೆ. ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಯಾವ ಭಾಷೆಯ ಚಿತ್ರಗಳನ್ನು ಬೇಕಿದ್ದರೂ ನೋಡಬಹುದು. ಈ ಕಾಲದಲ್ಲೂ ಅಕ್ಷಯ್ ಕುಮಾರ್ ಅವರು ಬಿಟ್ಟೂ ಬಿಡದೆ ರಿಮೇಕ್ ತಂತ್ರದ ಮೊರೆ ಹೋಗುತ್ತಿದ್ದಾರೆ. ಮಲಯಾಳಂನ ‘ಡ್ರೈವಿಂಗ್ ಲೈಸೆನ್ಸ್’ ಚಿತ್ರವನ್ನು ಹಿಂದಿಗೆ ‘ಸೆಲ್ಫೀ’ ಆಗಿ ರಿಮೇಕ್ ಮಾಡಲಾಗಿದೆ. ಅದ್ದೂರಿ ಬಜೆಟ್ನ ಈ ಚಿತ್ರ ಮೊದಲ ದಿನದ ಕಲೆಕ್ಷನ್ ಕೇವಲ 3 ಕೋಟಿ ರೂಪಾಯಿ. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್ ಕುಮಾರ್ ಕಂಡ ದೊಡ್ಡ ಸೋಲು ಇದಾಗಿದೆ.
‘ಸೆಲ್ಫೀ’ ಚಿತ್ರಕ್ಕೆ ಕರಣ್ ಜೋಹರ್ ಕೂಡ ಬಂಡವಾಳ ಹೂಡಿದ್ದಾರೆ. ದೊಡ್ಡ ಬಜೆಟ್ನಲ್ಲಿ ಸಿದ್ಧವಾದ ಈ ಚಿತ್ರದ ಕಲೆಕ್ಷನ್ ಯಾವ ಮೂಲೆಗೂ ಸಾಲುತ್ತಿಲ್ಲ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹೀನಾಯ ಎನಿಸಿಕೊಳ್ಳಲಿದೆ. ಈ ಚಿತ್ರದಿಂದ ಅಕ್ಷಯ್ ಕುಮಾರ್ ವೃತ್ತಿ ಜೀವನಕ್ಕೆ ಹಿನ್ನಡೆ ಆಗಿದೆ.
ಕಂಗನಾ ಆರೋಪ
ಕಂಗನಾ ಅವರು ಹಲವು ಬಾಲಿವುಡ್ ಮಂದಿಯ ದ್ವೇಷ ಕಟ್ಟಿಕೊಂಡಿದ್ದಾರೆ. ಅವರು ಅನೇಕರ ವಿರುದ್ಧ ಕಿಡಿಕಾರುತ್ತಾರೆ. ಈಗ ‘ಸೆಲ್ಫೀ’ ಚಿತ್ರದ ಕಲೆಕ್ಷನ್ ಬಗ್ಗೆ ಅವರು ಕೆಂಡಕಾರಿದ್ದಾರೆ. ಸಿನಿಮಾದ ಕಲೆಕ್ಷನ್ ಕೇವಲ 10 ಲಕ್ಷ ರೂಪಾಯಿ ಎಂದು ಅಪಹಾಸ್ಯ ಮಾಡಿದ್ದಾರೆ. ‘ಕರಣ್ ಜೋಹರ್ ನಿರ್ಮಾಣದ ಸೆಲ್ಫೀ ಸಿನಿಮಾ ಮೊದಲ ದಿನ ಹೆಚ್ಚೆಂದರೆ 10 ಲಕ್ಷ ರೂಪಾಯಿ ಗಳಿಕೆ ಮಾಡಿರಬಹುದು. ನನಗೆ ಬೆದರಿಕೆ ಹಾಕಿದಂತೆ, ಅಪಹಾಸ್ಯ ಮಾಡಿದಂತೆ ಅವರಿಗೆ ಮಾಡುವುದು ಹಾಗಿರಲಿ, ಯಾರೊಬ್ಬರೂ ಈ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಕಂಗನಾ ಹೇಳಿದ್ದಾರೆ. ಕಂಗನಾ ನಟನೆಯ ‘ಧಾಕಡ್’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಕೆಲವೇ ಲಕ್ಷ ರೂಪಾಯಿ ಗಳಿಕೆ ಮಾಡಿತ್ತು. ಇದನ್ನು ಅನೇಕರು ಟೀಕೆ ಮಾಡಿದ್ದರು. ಈ ದ್ವೇಷವನ್ನು ಕಂಗನಾ ಮರೆತಂತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ