ಶಾರುಖ್ ಖಾನ್ (Shah Rukh Khan) ಅವರನ್ನು ಬಾಲಿವುಡ್‌ನ ಕಿಂಗ್ ಎಂದು ಕರೆಯುತ್ತಾರೆ. ಕಳೆದ ಹಲವು ವರ್ಷಗಳಿಂದ ಬಾಲಿವುಡ್ ಬಾಕ್ಸ್ ಆಫೀಸ್ನ ಅವರು ಆಳುತ್ತಿದ್ದಾರೆ. ಶಾರುಖ್ ಅವರು ಭರ್ಜರಿ ಆದಾಯ ಹೊಂದಿದ್ದಾರೆ. ವರದಿಗಳ ಪ್ರಕಾರ ಶಾರುಖ್ ಅವರ ನಿವ್ವಳ ಆಸ್ತಿ ಮೌಲ್ಯ 6,000 ಸಾವಿರ ಕೋಟಿ ರೂಪಾಯಿಗೂ ಅಧಿಕವಾಗಿದೆ. ಶಾರುಖ್ ಅವರು ಗೌರಿ ಖಾನ್ ಅವರನ್ನು ಪ್ರೀತಿಸಿ 1991ರಲ್ಲಿ ಮದುವೆ ಆದರು. ಅವರ ಹಿರಿಯ ಮಗ ಆರ್ಯನ್ 1997ರಲ್ಲಿ ಹಾಗೂ ಸುಹಾನಾ 2000ರಲ್ಲಿ ಜನಿಸಿದರು. 2013ರಲ್ಲಿ ಶಾರುಖ್ ಖಾನ್ ಮತ್ತು ಗೌರಿ ಮತ್ತೆ ಪೋಷಕರಾದರು. ಬಾಡಿಗೆ ತಾಯ್ತನದ ಮೂಲಕ ಅಬ್ರಾಂನ ದಂಪತಿ ಸ್ವಾಗತಿಸಿದರು. ಈಗ ಅಬ್ರಾಂನ ಶಾಲಾ ಶುಲ್ಕ ಎಲ್ಲರಿಗೂ ಶಾಕಿಂಗ್ ಎನಿಸಿದೆ.
ಅನೇಕ ಉದ್ಯಮಿಗಳ ಮಕ್ಕಳು ಹಾಗೂ ಬಾಲಿವುಡ್ ಸೆಲೆಬ್ರಿಟಿ ಮಕ್ಕಳಂತೆ ಶಾರುಖ್ ಖಾನ್ ಅವರ ಕಿರಿಯ ಮಗ ಅಬ್ರಾಂ ಕೂಡ ಭಾರತದ ಅತ್ಯಂತ ದುಬಾರಿ ಶಾಲೆಗಳಲ್ಲಿ ಓದುತ್ತಾ ಇದ್ದಾರೆ. ಅಬ್ರಾಂ ಮುಂಬೈನ ಅತ್ಯಂತ ಪ್ರಸಿದ್ಧ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿ. ಇಲ್ಲಿಯವರೆಗೆ ಅವರು ಶಾಲೆಯ ವಿವಿಧ ಸ್ಪರ್ಧೆಗಳು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಅಬ್ರಾಂ ತನ್ನ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇವರ ಜೊತೆಗೆ ಹಲವಾರು ಸೆಲೆಬ್ರಿಟಿ ಮಕ್ಕಳು ಕೂಡ ಈ ಶಾಲೆಯಲ್ಲಿ ಓದುತ್ತಿದ್ದಾರೆ. ಈ ಶಾಲೆಯ ಶುಲ್ಕ ಕೇಳಿದರೆ ಎಲ್ಲರಿಗೂ ಅಚ್ಚರಿ ಗ್ಯಾರಂಟಿ.
ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲಾ ಶುಲ್ಕ ಪ್ರತಿ ತರಗತಿಗೆ ಬೇರೆ ಬೇರೆ ಇದೆ. ವರದಿಗಳ ಪ್ರಕಾರ ಎಲ್ಕೆಜಿಯಿಂದ 7ನೇ ತರಗತಿವರೆಗೆ ಮಾಸಿಕ ಶುಲ್ಕ ಸುಮಾರು 1.70 ಲಕ್ಷ ರೂಪಾಯಿ ಇದೆ. 8ರಿಂದ 10ರವರೆಗೆ ತಿಂಗಳ ಶುಲ್ಕ 4.48 ಲಕ್ಷ ರೂಪಾಯಿ. 11 ಮತ್ತು 12ನೇ ತರಗತಿಗೆ ಸುಮಾರು 9.65 ಲಕ್ಷ ರೂಪಾಯಿ ಶುಲ್ಕ ಇದೆ. ಇದರ ಪ್ರಕಾರ ಅಬ್ರಾಮ್ ಅವರ ವಾರ್ಷಿಕ ಶುಲ್ಕ ಸುಮಾರು 20.40 ಲಕ್ಷ ರೂಪಾಯಿ ಆಗಿದೆ.
ಇದನ್ನೂ ಓದಿ: ಅಪ್ಪನಂತೆ ನಟಿಸಿದ ಶಾರುಖ್ ಪುತ್ರ ಅಬ್ರಾಮ್, ವಿಡಿಯೋ ಸಖತ್ ವೈರಲ್
ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ಅನ್ನು ಭಾರತದ ಉನ್ನತ ಶಾಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದನ್ನು 2003ರಲ್ಲಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಸ್ಥಾಪಿಸಿದರು. 1,30,000 ಚದರ ಅಡಿಗಳಲ್ಲಿ ಹರಡಿರುವ ಈ ಶಾಲೆಯು ಆಧುನಿಕ ಸೌಲಭ್ಯಗಳು ಮತ್ತು ಸಮಗ್ರ ಶಿಕ್ಷಣ ಸೌಲಭ್ಯಗಳನ್ನು ಹೊಂದಿದೆ. ಶಾಲಾ ಕಟ್ಟಡವು 7 ಮಹಡಿಗಳನ್ನು ಹೊಂದಿದ್ದು, ಅನೇಕ ತರಗತಿ ಕೊಠಡಿಗಳು, ಸುಂದರವಾದ ಆಟದ ಮೈದಾನ, ಇಂಟರ್ನೆಟ್ ಸೌಲಭ್ಯ, ಉದ್ಯಾನ, ಟೆನ್ನಿಸ್ ಅಂಕಣ ಮೊದಲಾದ ವ್ಯವಸ್ಥೆಯನ್ನು ಹೊಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ