ಹಿಂದಿ ಚಿತ್ರರಂಗದಲ್ಲಿ ಶಾರುಖ್ ಖಾನ್ (Shah Rukh Khan) ಅವರಿಗೆ ಇರುವ ಅನುಭವ ಅಪಾರ. ಕಿರುತೆರೆಯಿಂದ ಬಂದು ಸಿನಿಮಾದಲ್ಲಿ ಹೀರೋ ಆದ ಅವರು 30 ವರ್ಷಗಳ ಕಾಲ ಬಣ್ಣದ ಲೋಕದಲ್ಲಿ ಆಳ್ವಿಕೆ ನಡೆಸಿದ್ದಾರೆ. ಒಂದಷ್ಟು ವರ್ಷಗಳು ಅವರ ಟೈಮ್ ಚೆನ್ನಾಗಿರಲಿಲ್ಲ. ಮಾಡಿದ ಚಿತ್ರಗಳೆಲ್ಲವೂ ಸೋಲುತ್ತಿದ್ದವು. ಆದರೆ ಆ ಸೋಲಿನ ಸುಳಿಯಿಂದ ಶಾರುಖ್ ಖಾನ್ ಈಗ ಹೊರಬಂದಿದ್ದಾರೆ. ಅವರ ಹೊಸ ಸಿನಿಮಾ ‘ಪಠಾಣ್’ (Pathaan Movie) ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಮೋಡಿ ಮಾಡಿದೆ. ಮೊದಲ ದಿನ 55 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಚಿತ್ರದ ಬಳಿಕ ಶಾರುಖ್ ಖಾನ್ ಕೈಯಲ್ಲಿ ಇರುವ ಹೊಸ ಸಿನಿಮಾಗಳ (Shah Rukh Khan Upcoming Movies) ಬಗ್ಗೆ ಅಭಿಮಾನಿಗಳ ಕೌತುಕ ಹೆಚ್ಚಾಗಿದೆ.
2018ರಲ್ಲಿ ‘ಜೀರೋ’ ಸಿನಿಮಾ ಸೋತ ಬಳಿಕ ಶಾರುಖ್ ಖಾನ್ ಅವರು ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು. ಪ್ರತಿ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುನ್ನ ಅವರು ತುಂಬ ಆಲೋಚನೆ ಮಾಡಿದ್ದಾರೆ. ‘ಪಠಾಣ್’ ಚಿತ್ರದ ವಿಚಾರದಲ್ಲಿ ಅವರ ಆಯ್ಕೆ ಸರಿಯಾಗಿದೆ. ಅದರ ಜೊತೆಗೆ ಅವರು ಒಪ್ಪಿಕೊಂಡ ಇನ್ನೆರಡು ಚಿತ್ರಗಳೆಂದರೆ ‘ಜವಾನ್’ ಮತ್ತು ‘ಡಂಕಿ’. ಈ ಸಿನಿಮಾಗಳಿಗೆ ಘಟಾನುಘಟಿ ನಿರ್ದೇಶಕರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಇದನ್ನೂ ಓದಿ: Pathaan Beats KGF 2: ಮೊದಲ ದಿನ ‘ಕೆಜಿಎಫ್ 2’ ದಾಖಲೆ ಮುರಿದ ‘ಪಠಾಣ್’; ಶಾರುಖ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ
ಕಾಲಿವುಡ್ನ ಖ್ಯಾತ ನಿರ್ದೇಶಕ ಅಟ್ಲಿ ಜೊತೆ ಶಾರುಖ್ ಖಾನ್ ಕೈ ಜೋಡಿಸಿದ್ದಾರೆ. ಅವರಿಬ್ಬರ ಕಾಂಬಿನೇಷನ್ನಲ್ಲಿ ‘ಜವಾನ್’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ‘ಜವಾನ್’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆದಿದೆ. ಈ ಚಿತ್ರ ಜೂನ್ 2ರಂದು ಬಿಡುಗಡೆ ಆಗಲಿದೆ.
ಇದನ್ನೂ ಓದಿ: Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್’; ಶಾರುಖ್ ಫ್ಯಾನ್ಸ್ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
ವಿಶೇಷ ಕಥಾಹಂದರದ ಸಿನಿಮಾಗಳ ಮೂಲಕ ರಾಜ್ಕುಮಾರ್ ಹಿರಾನಿ ಅವರು ಗುರುತಿಸಿಕೊಂಡಿದ್ದಾರೆ. ‘ಪಿಕೆ’, ‘ಸಂಜು’, ‘ಮುನ್ನಾಭಾಯ್ ಎಂಬಿಬಿಎಸ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತಿ ಅವರಿಗೆ ಸಲ್ಲುತ್ತದೆ. ಶಾರುಖ್ ಖಾನ್ ನಟನೆಯ ‘ಡಂಕಿ’ ಚಿತ್ರಕ್ಕೂ ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಬಗ್ಗೆ ಸಿನಿಪ್ರಿಯರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ.
ಇದನ್ನೂ ಓದಿ: Kangana Ranaut: ‘ಪಠಾಣ್’ ಸೂಪರ್ ಹಿಟ್; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
ಶಾರುಖ್ ಖಾನ್ ಪಾಲಿಗೆ 2023ರ ವರ್ಷ ಆಶಾದಾಯಶವಾಗಿ ಇರಲಿದೆ. ವರ್ಷದ ಆರಂಭದಲ್ಲಿಯೇ ಅವರು ‘ಪಠಾಣ್’ ಚಿತ್ರದ ಮೂಲಕ ದೊಡ್ಡ ಗೆಲುವು ಪಡೆದಿದ್ದಾರೆ. ಅವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಈ ವರ್ಷ ಬಿಡುಗಡೆ ಆಗಲಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.