ನಿಂತೇ ಹೋಯ್ತು ಶಿವಾಜಿ ಬಯೋಪಿಕ್; ಕಾರಣ ತಿಳಿಸಿದ ನಿರ್ದೇಶಕ

ಒಂದೆಡೆ ರಿಷಬ್ ಶೆಟ್ಟಿ ಅವರು ಛತ್ರಪತಿ ಶಿವಾಜಿ ಬಯೋಪಿಕ್​ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಇನ್ನೊಂದೆಡೆ ಬಾಲಿವುಡ್ ನಟ ಶಾಹಿದ್ ಕಪೂರ್ ಕೂಡ ಶಿವಾಜಿ ಬಯೋಪಿಕ್ ಮಾಡಬೇಕಿತ್ತು. ಆ ಸಿನಿಮಾಗೆ ಅಮಿತ್ ರೈ ನಿರ್ದೇಶನ ಮಾಡಬೇಕಿತ್ತು. ಆದರೆ ಶಾಹಿದ್ ಕಪೂರ್ ಮಾಡಬೇಕಿದ್ದ ಸಿನಿಮಾ ನಿಂತುಹೋಗಿದೆ.

ನಿಂತೇ ಹೋಯ್ತು ಶಿವಾಜಿ ಬಯೋಪಿಕ್; ಕಾರಣ ತಿಳಿಸಿದ ನಿರ್ದೇಶಕ
Shahid Kapoor

Updated on: Jul 23, 2025 | 6:51 PM

ಛತ್ರಪತಿ ಶಿವಾಜಿ ಮಹಾರಾಜ್ ಕುರಿತು ಸಿನಿಮಾ (Chhatrapati Shivaji Maharaj Biopic) ಮಾಡಲು ಹಲವು ನಿರ್ದೇಶಕರು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಎಲ್ಲರಿಗೂ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಛತ್ರಪತಿ ಸಂಭಾಜಿ ಮಹಾರಾಜ್ ಜೀವನ ಆಧಾರಿತ ‘ಛಾವ’ ಸಿನಿಮಾ ಸೂಪರ್ ಹಿಟ್ ಆಯಿತು. ಅದರ ಬೆನ್ನಲ್ಲೇ ಹಿಂದಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕುರಿತ ಸಿನಿಮಾ ಸೆಟ್ಟೇರಲಿದೆ ಎಂದು ಪ್ರೇಕ್ಷಕರು ಕಾಯುತ್ತಿದ್ದರು. ಆ ಸಿನಿಮಾಗೆ ಶಾಹಿದ್ ಕಪೂರ್ (Shahid Kapoor) ಹೀರೋ ಎಂಬುದು ಕೂಡ ನಿಶ್ಚಯವಾಗಿತ್ತು. ಆದರೆ ಈಗ ಆ ಸಿನಿಮಾ ನಿಂತುಹೋಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಸ್ವತಃ ನಿರ್ದೇಶಕ ಅಮಿತ್ ರೈ (Amit Rai) ಅವರು ಈ ಬಗ್ಗೆ ಮಾತನಾಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮಿತ್ ರೈ ಅವರು ಶಾಕಿಂಗ್ ಸಂಗತಿಗಳನ್ನು ತಿಳಿಸಿದ್ದಾರೆ. ಚಿತ್ರರಂಗದಲ್ಲಿ ಇರುವ ಕ್ರೂರ ವ್ಯವಸ್ಥೆಯಿಂದಾಗಿ ಶಿವಾಜಿ ಮಹಾರಾಜ್ ಬಯೋಪಿಕ್ ನಿಂತುಹೋಯ್ತು ಎಂದು ಅವರು ಹೇಳಿದ್ದಾರೆ. ಈ ಮೊದಲು ಅಮಿತ್ ರೈ ಅವರು ‘ಓಹ್ ಮೈ ಗಾಡ್ 2’ ಸಿನಿಮಾ ಮಾಡಿದ್ದರು. ಶಿವಾಜಿ ಬಯೋಪಿಕ್ ಮಾಡಬೇಕು ಎಂಬ ಅವರ ಕನಸು ಭಗ್ನವಾಗಿದೆ.

‘ಇಲ್ಲಿನ ವ್ಯವಸ್ಥೆ ಕ್ರೂರವಾಗಿದೆ. ಈ ಮೊದಲಿನ ಸಿನಿಮಾ ಸಕ್ಸಸ್ ಆಗಿದ್ದರೂ ಕೂಡ ಇಲ್ಲಿನವರಿಗೆ ಅದು ಸಾಕಾಗುವುದಿಲ್ಲ. ಹಾಗಾದ್ರೆ ಒಬ್ಬ ನಿರ್ದೇಶಕ ಹೇಗೆ ಕೆಲಸ ಮಾಡಬೇಕು? ನೀವು ಒಂದು ಕಥೆಯ ಜೊತೆ 5 ವರ್ಷ ಜೀವಿಸಿರುತ್ತೀರಿ. ಆದರೆ ಯಾರೋ ಬಂದು ಕೆಲವೇ ನಿಮಿಷಗಳಲ್ಲಿ ಇದು ಸರಿ ಇಲ್ಲ, ಅದು ಸರಿಯಿಲ್ಲ ಎನ್ನುತ್ತಾರೆ’ ಎಂದು ಅಮಿತ್ ರೈ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

‘ಬಾಕ್ಸ್ ಆಫೀಸ್​ನಲ್ಲಿ ಯಾವುದು ಗೆಲ್ಲುತ್ತಿದೆ ಎಂಬುದರ ಮೇಲೆ ಮಾತ್ರ ನಟರು ಕೆಲಸ ಮಾಡುತ್ತಾರೆ. ಕೆಲವು ನಟರು ಮಾತ್ರ ನನ್ನ ಜೊತೆ ಪ್ರಾಮಾಣಿಕವಾಗಿ ಇದ್ದಾರೆ. ಸಮಾಜದ ಬಗ್ಗೆ ಮಾತನಾಡುವ ಸಿನಿಮಾಗಳಲ್ಲಿ ನಟಿಸಲು ಕಲಾವಿದರಿಗೆ ಆಸಕ್ತಿ ಇಲ್ಲ. ಅದರ ಬದಲು ಲವ್ ಸ್ಟೋರಿ ಮಾಡಬೇಕು ಎನ್ನುತ್ತಾರೆ. ನಾನು ಲವ್ ಸ್ಟೋರಿ ತೆಗೆದುಕೊಂಡು ಹೋದಾಗ ಇದು ದುಬಾರಿ ಆಯ್ತು ಎನ್ನುತ್ತಾರೆ. ಅವರ ಮಾನದಂಡ ಬದಲಾಗುತ್ತಲೇ ಇರುತ್ತದೆ. ನೀವು ಅವರ ಸರ್ಕಲ್​ನಲ್ಲಿ ಇದ್ದರೆ ಮಾತ್ರ ನೀವು ಹೇಳಿದ್ದನ್ನು ಒಪ್ಪಿಕೊಳ್ಳುತ್ತಾರೆ’ ಎಂದು ಅಮಿತ್ ರೈ ಹೇಳಿದ್ದಾರೆ.

ಇದನ್ನೂ ಓದಿ: ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ನಾಗರಾಜ್ ವಾರ್ನಿಂಗ್

ತಾವು ಅಂದುಕೊಂಡ ರೀತಿಯಲ್ಲಿ ಸಿನಿಮಾ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರ ಅಮಿತ್ ರೈ ಅವರಿಗೆ ಇದೆ. ಹಾಗಾಗಿ, ತಮ್ಮ ಮುಂದಿನ ಸಿನಿಮಾವನ್ನು ತಾವೇ ನಿರ್ಮಾಣ ಮಾಡಬೇಕು ಎಂದು ಅವರು ನಿರ್ಧರಿಸಿದ್ದಾರೆ. ಅವರಿಗೆ ಸ್ನೇಹಿತರು ಸಾಥ್ ನೀಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.