ಬಣ್ಣದ ಲೋಕದಲ್ಲಿ ಲವ್ ಮತ್ತು ಬ್ರೇಕಪ್ಗಳಿಗೆ ಬರವಿಲ್ಲ. ಪ್ರತಿದಿನ ಸೆಲೆಬ್ರಿಟಿಗಳ ಹೊಸಹೊಸ ಕಥೆಗಳು ಹುಟ್ಟಿಕೊಳ್ಳುತ್ತವೆ. ಒಂದಷ್ಟು ದಿನ ಪ್ರೀತಿಯ ಹೆಸರಲ್ಲಿ ಜೊತೆಜೊತೆಗೆ ಸುತ್ತಾಡಿ, ನಂತರ ಬ್ರೇಕಪ್ ಮಾಡಿಕೊಳ್ಳುವುದು ಒಂಥರಾ ಟ್ರೆಂಡ್ ಆಗಿದೆ. ಶಿಲ್ಪಾ ಶೆಟ್ಟಿ (Shilpa Shetty) ತಂಗಿ ಶಮಿತಾ ಶೆಟ್ಟಿ ಕೂಡ ಹಾಗೇ ಮಾಡಿದ್ರಾ ಎಂಬ ಪ್ರಶ್ನೆ ಈಗ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿದೆ. ‘ಬಿಗ್ ಬಾಸ್ ಒಟಿಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಮಿತಾ ಶೆಟ್ಟಿ (Shamita Shetty) ಅವರಿಗೆ ನಟ ರಾಕೇಶ್ ಬಾಪಟ್ ಜೊತೆಗೆ ಸ್ನೇಹ ಚಿಗುರಿತ್ತು. ನಂತರ ಅದೇ ಸ್ನೇಹವು ಪ್ರೀತಿಗೆ ತಿರುಗಿತು. ‘ಬಿಗ್ ಬಾಸ್ ಒಟಿಟಿ’ ಮುಗಿದ ಬಳಿಕವೂ ಇಬ್ಬರ ಸಂಬಂಧ ಮುಂದುವರಿದಿತ್ತು. ಅನೇಕ ಸಂದರ್ಭಗಳಲ್ಲಿ ಈ ಪ್ರೇಮಪಕ್ಷಿಗಳು ಒಟ್ಟಾಗಿ ಕಾಣಿಸಿಕೊಂಡಿದ್ದವು. ಆದರೆ ಈಗ ಬೇರೆ ನ್ಯೂಸ್ ಕೇಳಿಬಂದಿದೆ. ಈ ಜೋಡಿ ಬ್ರೇಕಪ್ ಮಾಡಿಕೊಂಡಿದೆ ಎನ್ನಲಾಗಿದೆ. ಆ ಕುರಿತು ಶಮಿತಾ ಶೆಟ್ಟಿ ಅವರಾಗಲೀ ಅಥವಾ ರಾಕೇಶ್ ಬಾಪಟ್ (Raqesh Bapat) ಆಗಲಿ ಅಧಿಕೃತವಾಗಿ ಹೇಳಿಕೆ ನೀಡುವುದೊಂದೇ ಬಾಕಿ.
ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಅವರು ಬ್ರೇಕಪ್ ಮಾಡಿಕೊಳ್ಳಲಿದ್ದಾರೆ ಎಂಬ ಗುಸುಗುಸು ಹಲವು ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಈವರೆಗೂ ಅದರ ಬಗ್ಗೆ ಅವರ ಕುಟುಂಬದವರು ಅಥವಾ ಆಪ್ತರು ಏನನ್ನೂ ಬಾಯಿ ಬಿಟ್ಟಿಲ್ಲ. ಇವರಿಬ್ಬರು ಬ್ರೇಕಪ್ ಮಾಡಿಕೊಂಡು ಕೆಲವು ತಿಂಗಳು ಕಳೆದಿದೆ ಎಂದು ‘ಬಾಲಿವುಡ್ ಲೈಫ್’ ವರದಿ ಮಾಡಿದೆ. ಆದರೆ ಈ ಸಂಬಂಧದಲ್ಲಿ ಒಂದು ಟ್ವಿಸ್ಟ್ ಇದೆ. ಪ್ರೇಮಕ್ಕೆ ಅಂತ್ಯ ಹಾಡಿದ್ದರೂ ಕೂಡ ಫ್ರೆಂಡ್ಸ್ ಆಗಿ ಮುಂದುವರಿಯಲು ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ನಿರ್ಧರಿಸಿದ್ದಾರೆ ಎಂದು ವರದಿ ಪ್ರಕಟ ಆಗಿದೆ!
ಇದನ್ನೂ ಓದಿ: ಕಷ್ಟದ ಸಮಯದಲ್ಲಿ ಅಕ್ಕ-ಭಾವನನ್ನು ಬಿಟ್ಟು ಶಮಿತಾ ಶೆಟ್ಟಿ ಬಿಗ್ ಬಾಸ್ಗೆ ಹೋಗಿದ್ದು ಏಕೆ? ಕಾರಣ ತಿಳಿಸಿದ ನಟಿ
ಆರಂಭದ ದಿನಗಳಿಂದಲೂ ತಮ್ಮ ಖಾಸಗಿ ಬದುಕಿನ ವಿವರಗಳನ್ನು ಆದಷ್ಟು ಗೌಪ್ಯವಾಗಿಡಲು ಶಮಿತಾ ಮತ್ತು ರಾಕೇಶ್ ಬಾಪಟ್ ಪ್ರಯತ್ನಿಸುತ್ತಿದ್ದರು. ಆ ಕಾರಣದಿಂದಲೇ ಅವರು ಈಗ ಬ್ರೇಕಪ್ ವಿಚಾರವನ್ನು ಕೂಡ ಗುಟ್ಟಾಗಿ ಇರಿಸಿದ್ದಾರೆ ಎನ್ನಲಾಗಿದೆ. ಬಾಲಿವುಡ್ನಲ್ಲಿ ಕೆಲವು ಸಿನಿಮಾಗಳನ್ನು ಮಾಡಿದರೂ ಕೂಡ ಶಮಿತಾ ಶೆಟ್ಟಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ವಯಸ್ಸು 43 ಆಗಿದ್ದರೂ ಅವರು ಮದುವೆ ಆಗಿಲ್ಲ. ರಾಕೇಶ್ ಬಾಪಟ್ ಜೊತೆ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎಂದು ಫ್ಯಾನ್ಸ್ ಊಹಿಸಿದ್ದರು. ಆದರೆ ಈಗ ಬ್ರೇಕಪ್ ಸುದ್ದಿ ಕೇಳಿ ಅಭಿಮಾನಿಗಳಿಗೆ ಬೇಸರ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.