‘ಶೆಫಾಲಿ ಸಾಯುವುದಕ್ಕೂ ಮೊದಲು ಆ ಕೆಲಸ ಮಾಡಿದ್ದಳು’; ವಿವರಿಸಿದ ಗೆಳತಿ
ನಟಿ ಶೆಫಾಲಿ ಜರಿವಾಲಾ ಅವರ ಅಕಾಲಿಕ ಮರಣದ ಬಗ್ಗೆ ಅವರ ಆಪ್ತ ಸ್ನೇಹಿತೆ ಪೂಜಾ ಘಾಯ್ ಮಾಹಿತಿ ನೀಡಿದ್ದಾರೆ. ಶೆಫಾಲಿ ಅವರ ಕೊನೆಯ ದಿನದ ಘಟನೆಗಳನ್ನು ಪೂಜಾ ವಿವರಿಸಿದ್ದಾರೆ. ಮನೆಯಲ್ಲಿ ನಡೆದ ಪೂಜೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲು ಅವರ ಸ್ಥಿತಿ ಹಾಗೂ ಅವರು ತೆಗೆದುಕೊಳ್ಳುತ್ತಿದ್ದ ವಿಟಮಿನ್ ಸಿ ಡ್ರಿಪ್ಸ್ ಬಗ್ಗೆ ಮಾಹಿತಿ ನೀಡಿದ್ದಾರೆ.

ನಟಿ ಶೆಫಾಲಿ ಜರಿವಾಲಾ (Shefali Jariwala) ಅವರ ಸಾವು ಎಲ್ಲರಿಗೂ ದೊಡ್ಡ ಆಘಾತವನ್ನುಂಟು ಮಾಡಿದೆ. ಅವರು 42ನೇ ವಯಸ್ಸಿಗೆ ನಿಧನರಾದರು. ಜೂನ್ 27ರಂದು ಅವರು ಕೊನೆಯುಸಿರೆಳೆದರು. ಈಗ, ಅವರ ಆಪ್ತ ಸ್ನೇಹಿತೆ ಪೂಜಾ ಘಾಯ್ ಅವರು ಶೆಫಾಲಿ ಸಾವಿಗೂ ಮೊದಲು ಏನಾಗಿತ್ತು ಎಂಬುದನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಆ ದಿನ ಏನಾಯಿತು ಎಂಬುದನ್ನು ಶೆಫಾಲಿ ಪತಿ ಪರಾಗ್ ತ್ಯಾಗಿ ಅವರು ಪೂಜಾ ಬಳಿ ಹೇಳಿದ್ದರಂತೆ.
‘ಶೆಫಾಲಿಗೆ ಏನಾಗಿತ್ತು ಎಂಬುದು ಮರಣೋತ್ತರ ಪರೀಕ್ಷೆ ಬಳಿಕವೇ ಗೊತ್ತಾಗಬೇಕಿದೆ. ಆದರೆ, ಪರಾಗ್ ಹಾಗೂ ಅವರ ಕುಟುಂಬದಿಂದ ಕೆಲವು ವಿಚಾರ ತಿಳಿದಿದೆ. ಅಂದು ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇತ್ತು. ಮನೆಯನ್ನು ಬೆಳಕಿನಿಂದ ಅಲಂಕರಿಸಲಾಗಿತ್ತು. ಅವರನ್ನು ಆಸ್ಪತ್ರೆಗೆ ತರುವಾಗ ಮನೆ ಹಾಗೆಯೇ ಅಲಂಕಾರಗೊಂಡಿತ್ತು. ಸಾಯುವ ಮೊದಲು ಶೆಫಾಲಿ ಸಾಮಾನ್ಯ ಊಟವನ್ನೇ ಮಾಡಿದ್ದರು. ಪರಾಗ್ ಬಳಿ ನಾಯಿಯನ್ನು ವಾಕ್ ಕರೆದುಕೊಂಡು ಹೊಗುವಂತೆ ಅವಳು ಕೇಳಿದಳು. ಅವನು ಕೆಳಗೆ ಹೋಗುತ್ತಿದ್ದಂತೆ ಶೆಫಾಲಿ ಅಸ್ವಸ್ಥಳಾದಳು’ ಎಂದು ಪೂಜಾ ವಿವರಿಸಿದ್ದಾರೆ.
‘ಮನೆ ಕೆಲಸದವರು ಪರಾಗ್ ಬಳಿ ಈ ವಿಚಾರ ಹೇಳಿದರು. ಆ ಕೂಡಲೇ ಪರಾಗ್ ಮೇಲೆ ಬಂದ. ಆಗ ಶೆಫಾಲಿಗೆ ಜೀವ ಇತ್ತು. ನಾಡಿ ಮಿಡಿಯುತ್ತಿತ್ತು. ಆದರೆ, ಕಣ್ಣುಗಳು ಓಪನ್ ಆಗುತ್ತಿರಲಿಲ್ಲ. ದೇಹ ಭಾರ ಎನಿಸುತ್ತಿತ್ತು. ಆ ಕ್ಷಣ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆ ತಲುಪುವಾಗ ಅವಳು ಮೃತಪಟ್ಟಿದ್ದಳು’ ಎಂದು ಪೂಜಾ ಹೇಳಿದ್ದಾರೆ.
ಇದನ್ನೂ ಓದಿ: ಹೃದಯಾಘಾತ, ಇಂಜಂಕ್ಷನ್ ಎರಡೂ ಅಲ್ಲ; ಶೆಫಾಲಿ ಸಾವಿನ ಹಿಂದಿನ ರಹಸ್ಯ ತಿಳಿಸಿದ ವೈದ್ಯರು
ವಿಟಾಮಿನ್ ಸಿ IV ಡ್ರಿಪ್ಸ್ನ ಶೆಫಾಲಿ ತೆಗೆದುಕೊಳ್ಳುತ್ತಿದ್ದರು ಎಂಬುದನ್ನು ಅವರು ಖಚಿತಪಡಿಸಿದ್ದಾರೆ. ಸಾಯುವ ದಿನವೂ ಅವರು ಡ್ರಿಪ್ಸ್ ಹಾಕಿಕೊಂಡಿದ್ದರಂತೆ. ‘ಶೆಫಾಲಿ ಆ ದಿನ ಡ್ರಿಪ್ಸ್ ಹಾಕಿಕೊಂಡಿದ್ದು ನಿಜ. ಇದು ಸುರಕ್ಷಿತವಲ್ಲ. ಆದರೆ, ದುಬೈನಲ್ಲಿ ಇದು ಕಾಮನ್’ ಎಂದು ವಿವರಿಸಿದ್ದಾರೆ. ಸದ್ಯ ಶೆಫಾಲಿ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿಯಲ್ಲಿ ಏನಿದೆ ಎಂಬ ವಿಚಾರ ಇನ್ನೂ ರಿವೀಲ್ ಆಗಿಲ್ಲ. ಶೀಘ್ರವೇ ಈ ಬಗ್ಗೆ ಮಾಹಿತಿ ಹೊರ ಬೀಳೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








