Shilpa Shetty: ಅಭಿಮಾನಿಗಳ ಹೃದಯ ಗೆದ್ದ ಶಿಲ್ಪಾ ಶೆಟ್ಟಿಯ ಇತ್ತೀಚಿಗಿನ ಫ್ಯಾಷನ್​ ಆಯ್ಕೆಗಳು!

| Updated By: shruti hegde

Updated on: Jul 12, 2021 | 12:34 PM

ಶಿಲ್ಪಾ ಶೆಟ್ಟಿ: ಫೊಟೋದಲ್ಲಿ ಹಳದಿ ಬಣ್ಣದ ಶರ್ಟ್​ ಮತ್ತು ಸ್ಕರ್ಟ್​ನೊಂದಿಗೆ ಶಿಲ್ಪಾ ಕಂಗೊಳಿಸುತ್ತಿದ್ದಾರೆ. ಹೊಸ ಡಿಸೈನೊಂದಿಗೆ ತಯಾರಾದ ಡ್ರೆಸ್​ ಯುವತಿಯರಿಗೆ ಸಕತ್​ ಇಷ್ಟವಾಗುವಂತಿದೆ. ಡ್ರೆಸ್​ ಸ್ಲೀವ್​ ಹೊಸ ತೆರೆನಾಗಿದ್ದು ಫ್ರೀ-ಹೇರ್​ ಬಿಟ್ಟು, ಸಿಂಫಲ್​ ನೆಕ್​ಲೆಸ್​ನೊಂದಿಗೆ ಶಿಲ್ಪಾ ಶೆಟ್ಟಿ ಶೈನ್​ಆಗಿ ಕಾಣಿಸ್ತಾ ಇದ್ದಾರೆ.

Shilpa Shetty: ಅಭಿಮಾನಿಗಳ ಹೃದಯ ಗೆದ್ದ ಶಿಲ್ಪಾ ಶೆಟ್ಟಿಯ ಇತ್ತೀಚಿಗಿನ ಫ್ಯಾಷನ್​ ಆಯ್ಕೆಗಳು!
ಶಿಲ್ಪಾ ಶೆಟ್ಟಿ
Follow us on

ಬಾಲಿವುಡ್​​ನಲ್ಲಿ ಹೆಸರು ಗಳಿಸಿದ ನಟಿಮಣಿಯರಲ್ಲಿ ಶಿಲ್ಪಾ ಶೆಟ್ಟಿ( Shilpa Shetty) ಕೂಡಾ ಒಬ್ಬರು. ಅವರ ಫಿಟ್​ನೆಸ್​ ಮತ್ತು ಸೌಂದರ್ಯಕ್ಕೆ ಅಪಾರ ಅಭಿಮಾನಿ ಬಳಗವೇ ಇದೆ. ಸಾಮಾನ್ಯವಾಗಿ ತಮ್ಮ ವರ್ಕೌಟ್​ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ಶಿಲ್ಪಾ ಹಂಚಿಕೊಳ್ಳುತ್ತಿರುತ್ತಾರೆ. ಜತೆಜತೆಗೆ ನ್ಯೂ ಫ್ಯಾಶನ್​ ಡ್ರೆಸ್ (Fashion)​ ತೊಟ್ಟು ಸ್ಟೈಲಿಶ್​ ಫೋಸ್​ನೊಂದಿಗೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ನಟಿ ಶಿಲ್ಪಾರನ್ನು ನೋಡಿ ಅದೆಷ್ಟೋ ಜನ ಹೊಟ್ಟೆಕಿಚ್ಚು ಪಡುವವರೂ ಇದ್ದಾರೆ. ಅವರ ಹೈಟ್​ ಮತ್ತು ಬ್ಯೂಟಿಗೆ ಮರುಳಾದವರೂ ಇದ್ದಾರೆ. ಅವರಷ್ಟು ಅಂದದ ಸೌಂದರ್ಯ ನಮಗಿಲ್ಲವಲ್ಲ! ಎಂದು ಬೇಸರಗೊಂಡವರೂ ಇದ್ದಾರೆ. ಶಿಲ್ಪಾ, ಫಿಟ್ನೆಸ್​ಗಾಗಿ ವರ್ಕೌಟ್​ ಮತ್ತು ಯೋಗಾಭ್ಯಾಸ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಜತೆಗೆ ಹೊಸ ಲುಕ್​, ಸ್ಟೈಲಿಶ್​ ಡ್ರೆಸ್​ನೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋ ಇದೀಗ ನೆಟ್ಟಿಗರಿಗೆ ಇಷ್ಟವಾಗಿದೆ.

ಫೊಟೋದಲ್ಲಿ ಹಳದಿ ಬಣ್ಣದ ಶರ್ಟ್​ ಮತ್ತು ಸ್ಕರ್ಟ್​ನೊಂದಿಗೆ ಶಿಲ್ಪಾ ಕಂಗೊಳಿಸುತ್ತಿದ್ದಾರೆ. ಹೊಸ ಡಿಸೈನೊಂದಿಗೆ ತಯಾರಾದ ಡ್ರೆಸ್​ ಯುವತಿಯರಿಗೆ ಸಕತ್​ ಇಷ್ಟವಾಗುವಂತಿದೆ. ಡ್ರೆಸ್​ ಸ್ಲೀವ್​ ಹೊಸ ತೆರೆನಾಗಿದ್ದು ಫ್ರೀ-ಹೇರ್​ ಬಿಟ್ಟು, ಸಿಂಫಲ್​ ನೆಕ್​ಲೆಸ್​ನೊಂದಿಗೆ ಶಿಲ್ಪಾ ಶೆಟ್ಟಿ ಶೈನ್​ಆಗಿ ಕಾಣಿಸ್ತಾ ಇದ್ದಾರೆ.

ಇವರ ಫಿಟ್​ನೆಸ್​ಗೆ ಮನಸೋತವರೇ ಹೆಚ್ಚು ಮಂದಿ. ಜೆತೆಗೆ ನಟಿಮಣಿಯರು ಧರಿಸುವ ಉಡುಗೆ ತೊಡುಗೆಗಳು ಟ್ರೆಂಡ್​ ಆಗಿ ಬಿಡುತ್ತವೆ. ಇದೀಗ ಸ್ಟೈಲಿಶ್​ ಡ್ರೆಸ್​ ಡಿಸೈನ್​​ನೊಂದಿಗೆ ಶಿಲ್ಪಾ ನಿಂತಿರುವುದು ಯುವಜನತೆಗೆ ಇಷ್ಟವಾಗುವಂತಿದೆ.

ಇನ್ನೊಂದು ಡ್ರೆಸ್​ನಲ್ಲಿ ಕಪ್ಪು ಬಣ್ಣದ ಶಾರ್ಟ್​ ಶರ್ಟ್​ನೊಂದಿಗೆ ನಿಂತಿದ್ದಾರೆ. ಅದಕ್ಕೆ ಸೂಟ್​ ಆಗುವ ಶೈನಿಂಗ್​​ ಪ್ಯಾಂಟ್​ ಧರಿಸಿದ್ದಾರೆ.

ಇದನ್ನೂ ಓದಿ:

ದೇಹದ ಒತ್ತಡ, ಆತಂಕವನ್ನು ನಿವಾರಿಸಲು ಶಿಲ್ಪಾ ಶೆಟ್ಟಿ ಮಾಡುವ ಯೋಗ ಭಂಗಿ ಯಾವುದು ಗೊತ್ತಾ?

Shilpa Shetty Birthday: ವಿವಾಹಿತ ಪುರುಷ ರಾಜ್​ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಮದುವೆ ಆಗಲು ಒಪ್ಪಿದ್ದೇಕೆ?

Published On - 12:08 pm, Mon, 12 July 21