BREAKING: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ

ಬಾಲಿವುಡ್​​ನ ಯುವ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿದೆ. ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ವಾಹನದಲ್ಲಿ ಹೋಗುವ ಸಂದರ್ಭದಲ್ಲಿ ಅಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ. ಅವರ ಚಾಲಕ ಹಾಗೂ ಇನ್ನೊಬ್ಬ ಸಿಬ್ಬಂದಿಗೆ ಗಾಯವಾಗಿದೆ. ಇದೇ ಘಟನೆಯಲ್ಲಿ ಆಟೋ ಚಾಲಕರೊಬ್ಬರಿಗೂ ಸಹ ಗಾಯಗಳಾಗಿವೆ. ನಟ ಟೈಗರ್ ಶ್ರಾಫ್ ಅವರು ದಾಳಿಯಿಂದ ಪಾರಾಗಿದ್ದಾರೆ. ಅವರಿಗೆ ಯಾವುದೇ ಗಾಯಗಳಾಗಿಲ್ಲ ಎನ್ನಲಾಗುತ್ತಿದೆ.

BREAKING: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ
Tiger Shroff1

Updated on: Oct 18, 2026 | 8:28 PM

ಮುಖ್ಯಾಂಶಗಳು

  • ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿದೆ.
  • ದಾಳಿಯಲ್ಲಿ ಟೈಗರ್ ಶ್ರಾಫ್ ಅವರಿಗೆ ಯಾವುದೇ ಹಾನಿ ಆಗಿಲ್ಲ
  • ದಾಳಿಯ ಹೊಣೆಯನ್ನು ಬಿಷ್ಣೋಯಿ ಗ್ಯಾಂಗ್ ಹೊತ್ತಿದೆ

ಬಾಲಿವುಡ್​​ನ ಯುವ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿದೆ. ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ವಾಹನದಲ್ಲಿ ಹೋಗುವ ಸಂದರ್ಭದಲ್ಲಿ ಅಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ. ಅವರ ಚಾಲಕ ಹಾಗೂ ಇನ್ನೊಬ್ಬ ಸಿಬ್ಬಂದಿಗೆ ಗಾಯವಾಗಿದೆ. ಇದೇ ಘಟನೆಯಲ್ಲಿ ಆಟೋ ಚಾಲಕರೊಬ್ಬರಿಗೂ ಸಹ ಗಾಯಗಳಾಗಿವೆ. ನಟ ಟೈಗರ್ ಶ್ರಾಫ್ ಅವರು ದಾಳಿಯಿಂದ ಪಾರಾಗಿದ್ದಾರೆ. ಅವರಿಗೆ ಯಾವುದೇ ಗಾಯಗಳಾಗಿಲ್ಲ ಎನ್ನಲಾಗುತ್ತಿದೆ.

ಮುಂಬೈನ ಜುಹು ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಟೈಗರ್ ಶ್ರಾಫ್ ಅವರು ಫುಟ್​​ಬಾಲ್ ಆಡಿ, ತಮ್ಮ ಬಿಎಂಡಬ್ಲು ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ. ಬೈಕುಗಳಲ್ಲಿ ಬಂದ ಮೂವರು ಅಗಂತುಕರು ಟೈಗರ್ ಶ್ರಾಫ್ ಇದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸುಮಾರು 11 ಸುತ್ತು ಗುಂಡು ಹಾರಿಸಲಾಗಿದ್ದು, ದಾಳಿಯ ವೇಳೆ ಟೈಗರ್ ಶ್ರಾಫ್ ಅವರಿಗೆ ಯಾವುದೇ ಗಾಯಗಳಾಗಿಲ್ಲ ಆದರೆ ಅವರ ಇಬ್ಬರು ಸಿಬ್ಬಂದಿ ಮತ್ತು ಒಬ್ಬ ಆಟೋ ಚಾಲಕ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Loading...

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಮೋಹಿತ್ ಕುಮಾರ್, ‘ಟೈಗರ್ ಶ್ರಾಫ್ ಅವರಿಗೆ ಈ ದಾಳಿಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು 12 ತಂಡಗಳನ್ನು ರಚಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಬಾಲಿವುಡ್​​ಗೆ ಹಾರಲಿರುವ ಮಂಗಳೂರು ಮೂಲದ ನಟಿ ಕೃತಿ ಶೆಟ್ಟಿ

ದಾಳಿ ನಡೆದ ಕೆಲವೇ ಸಮಯಕ್ಕೆ ಅನಿಲ್ ಪಂಡಿತ್, ಅನ್ಮೋಲ್ ಬಿಷ್ಣೋಯಿ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಈ ದಾಳಿಯನ್ನು ಬಿಷ್ಣೋಯಿ ಗ್ಯಾಂಗಿನ ಸದಸ್ಯರು ಮಾಡಿರುವುದಾಗಿ ಹೇಳಿದ್ದಾರೆ. ‘ಇಂದು ಟೈಗರ್ ಶ್ರಾಫ್‌ಗೆ ಆಗಿರುವ ಕೃತ್ಯದ ಹೊಣೆಯನ್ನು ಅನಿಲ್ ಪಂಡಿತ್ ಮತ್ತು ಹರ್ಮನ್ ಸಂಧು ಆದ ನಾವು ಹೊರುತ್ತೇವೆ. ನಾವು ಅವನಿಗೆ ಕರೆ ಮಾಡಿ ಹೇಳಿ ಅರ್ಥಮಾಡಿಸಿದ್ದೆವು, ಆದರೆ ಅವನಿಗೆ ಅರ್ಥವಾಗಲಿಲ್ಲ. ಆದ್ದರಿಂದ ಇಂದು ಅವನಿಗೆ ಚೆನ್ನಾಗಿ ಪಾಠ ಕಲಿಸಿದ್ದೇವೆ. ಮುಂಬೈ ಚಲನಚಿತ್ರ ಉದ್ಯಮದಲ್ಲಿ ಯಾರು ನಮ್ಮ ಮಾತು ಕೇಳುವುದಿಲ್ಲವೋ ಅಥವಾ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಾರೋ, ಮುಂದಿನ ಸರದಿ ಅವರದೇ. ಕಾದು ನೋಡಿ. ಸೂಚನೆ: ಮತ್ತು ಬೇರೆ ಗುಂಪಿನ ಕೆಲವು ನಾಯಿಗಳು ನಮ್ಮ ಹೆಸರಿನಿಂದ ಖ್ಯಾತಿ ಪಡೆಯಲು ಯೋಚಿಸುತ್ತಿವೆ. ಅವರನ್ನು ಶೀಘ್ರದಲ್ಲೇ ಕೊಂದು ಪ್ರಸಿದ್ಧರನ್ನಾಗಿ ಮಾಡುತ್ತೇವೆ’ ಎಂದು ಟ್ವೀಟ್​​ನಲ್ಲಿ ಬರೆಯಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:06 pm, Sun, 18 October 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us