‘ಸಿಕಂದರ್’ ಗಳಿಕೆಯಲ್ಲಿ ಏರಿಕೆ; ಆದರೂ ನಿಂತಿಲ್ಲ ಸಲ್ಮಾನ್ ಖಾನ್ ಸಿನಿಮಾದ ಪರದಾಟ

ಸಲ್ಮಾನ್ ಖಾನ್ ಅವರ 'ಸಿಕಂದರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ಎರಡನೇ ದಿನದ ಗಳಿಕೆಯಲ್ಲಿ ಏರಿಕೆ ಕಂಡಿದೆ. ಕಳಪೆ ವಿಮರ್ಶೆಗಳ ಮಧ್ಯೆಯೂ ಸಿನಿಮಾ ಗಳಿಕೆಯಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ. ಆದರೆ, ಭವಿಷ್ಯದಲ್ಲಿ ಈ ಚಿತ್ರ ಯಶಸ್ವಿಯಾಗುತ್ತದೆಯೇ ಎಂಬುದು ಪ್ರಶ್ನಾರ್ಹವಾಗಿದೆ.

‘ಸಿಕಂದರ್’ ಗಳಿಕೆಯಲ್ಲಿ ಏರಿಕೆ; ಆದರೂ ನಿಂತಿಲ್ಲ ಸಲ್ಮಾನ್ ಖಾನ್ ಸಿನಿಮಾದ ಪರದಾಟ
ಸಲ್ಮಾನ್ ಖಾನ್

Updated on: Apr 01, 2025 | 7:27 AM

ಸಲ್ಮಾನ್ ಖಾನ್​ಗೂ (Salman Khan) ಈದ್​ಗೂ ಎಲ್ಲಿಲ್ಲದ ನಂಟು. ಅವರು ತಮ್ಮ ಸಿನಿಮಾಗಳನ್ನು ಈ ಸಂದರ್ಭದಲ್ಲಿ ರಿಲೀಸ್ ಮಾಡೋಕೆ ಆದ್ಯತೆ ನೀಡುತ್ತಾರೆ. ಈ ಮೊದಲು ಈದ್​ಗೆ ರಿಲೀಸ್ ಆದ ಸಿನಿಮಾಗಳು ಭರ್ಜರಿ ಗೆಲುವು ಕಂಡಿದ್ದವು. ಆದರೆ, ಇತ್ತೀಚೆಗೆ ಅವರಿಗೆ ಅದೃಷ್ಟ ಕೈ ಕೊಟ್ಟಿದೆ. ಬಾಲಿವುಡ್ ಬಳಿಕ ಅವರು ದಕ್ಷಿಣದ ನಿರ್ದೇಶಕರ ಜೊತೆ ಸಿನಿಮಾ ಮಾಡಲು ಪ್ರಯತ್ನಿಸಿದರೂ ಯಶಸ್ಸು ಮಾತ್ರ ಸಿಕ್ಕಿಲ್ಲ. ತಮಿಳಿನ ಎಆರ್ ಮುರುಗದಾಸ್ ಜೊತೆ ‘ಸಿಕಂದರ್’ ಸಿನಿಮಾ ಮಾಡಿದ್ದಾರೆ. ಈ ಚಿತ್ರ ಅಂದುಕೊಡ ಮಟ್ಟಿಗೆ ಗೆಲುವು ಕಂಡಿಲ್ಲ.

‘ಸಿಕಂದರ್’ ಸಿನಿಮಾ ಮಾರ್ಚ್ 30ರಂದು ರಿಲೀಸ್ ಆಯಿತು. ಸಿನಿಮಾಗಳು ಸಾಮಾನ್ಯವಾಗಿ ಶುಕ್ರವಾರ ರಿಲೀಸ್ ಮಾಡೋದು ವಾಡಿಕೆ. ಆದರೆ ಸಲ್ಲು ಸಿನಿಮಾ ಭಾನುವಾರ ಬಿಡುಗಡೆ ಕಂಡಿತು. ಈ ಚಿತ್ರಕ್ಕೆ ಮೊದಲ ದಿನವೇ ಕೆಟ್ಟ ವಿಮರ್ಶೆಗಳು ಸಿಕ್ಕವು. ಈ ಕಾರಣದಿಂದ ಸಿನಿಮಾಗೆ ಬುಕ್ ಮೈ ಶೋನಲ್ಲಿ ಕೇವಲ 6.2 ರೇಟಿಂಗ್ ಸಿಕ್ಕಿದೆ. ಇನ್ನು, ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು 26 ಕೋಟಿ ರೂಪಾಯಿ ಮಾತ್ರ.

ಈಗ ಎರಡನೇ ದಿನದ ಗಳಿಕೆಯಲ್ಲಿ ಏರಿಕೆ ಕಂಡಿದೆ. ಸೋಮವಾರ (ಮಾರ್ಚ್ 31) ಈ ಚಿತ್ರ 29 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಂದರೆ ಮೊದಲ ದಿನಕ್ಕಿಂತ ಎರಡನೇ ದಿನ ಸಿನಿಮಾ ಹೆಚ್ಚುವರಿಯಾಗಿ 3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಂದು (ಏಪ್ರಿಲ್ 1) ಈದ್ ಹಬ್ಬದ ಮರುದಿನ ಎಂಬ ಕಾರಣಕ್ಕೆ ಸಿನಿಮಾ ಕೊಂಚ ಗಳಿಕೆ ಮಾಡೋ ಸಾಧ್ಯತೆ ಇದೆ. ಆದರೆ ಮುಂದಿನ ದಿನಗಳಲ್ಲಿ ಪರದಾಟ ಇದ್ದಿದ್ದೇ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ
ಸಿತಾರಾ ಘಟ್ಟಮನೇನಿ ಸಿನಿಮಾ ರಂಗಕ್ಕೆ ಕಾಲಿಡೋದು ಯಾವಾಗ? ಉತ್ತರಿಸಿದ ತಾಯಿ
ತೆಲುಗು ಚಿತ್ರರಂಗದಲ್ಲಿ ನೆಪೋಟಿಸಂ ಇಲ್ಲವೇ ಇಲ್ಲ ಎಂದ ಖ್ಯಾತ ನಿರ್ಮಾಪಕ
ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಅಜಯ್ ರಾವ್; ಎದುರಿಸುವ ಸಮಸ್ಯೆಗಳೇನು?
ಗಳಿಕೆಯಲ್ಲಿ ಮೊದಲ ದಿನವೇ ಮಕಾಡೆ ಮಲಗಿದ ‘ಸಿಕಂದರ್’

ಇದನ್ನೂ ಓದಿ: ‘ಸಿಕಂದರ್’ ಫ್ಲಾಪ್ ಆಗಿದ್ದಕ್ಕೆ ಬೇಸರದ ಮುಖ ಮಾಡಿಕೊಂಡ ರಶ್ಮಿಕಾ ಮಂದಣ್ಣ

‘ಸಿಕಂದರ್’ ಸಿನಿಮಾ ಎರಡು ದಿನ ಸೇರಿ 54 ಕೋಟಿ ರೂಪಾಯಿ ಗಳಿಸಿದೆ. ಸಲ್ಮಾನ್ ಖಾನ್ ಸಿನಿಮಾಗಳಿಗೆ ಮೊದಲ ದಿನವೇ 50 ಕೋಟಿ ರೂಪಾಯಿ ಗಳಿಸುವಷ್ಟು ತಾಕತ್ತು ಇದೆ. ಆದರೆ, ಕಳಪೆ ವಿಮರ್ಶೆಗಳ ಕಾರಣಕ್ಕೆ ‘ಸಿಕಂದರ್’ ಕಲೆಕ್ಷನ್ ಮಾಡಲು ಪರದಾಡುತ್ತಿದೆ. ಮುಂದಿನ ದಿನಗಳಲ್ಲಿ ಸಲ್ಮಾನ್ ಸಿನಿಮಾ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:55 am, Tue, 1 April 25