ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ (Singer KK) ಅವರು ಮೇ 31 ರಂದು ಕೋಲ್ಕತ್ತಾದಲ್ಲಿ ಕಾರ್ಯಕ್ರಮದಲ್ಲಿ ಹಾಡಿದ ನಂತರ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಧ್ವನಿಯ ಮೋಡಿಗೆ ಮರುಳಾಗದ ಕೇಳುಗರಿಲ್ಲ. ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡಿ, ಜನರ ಪ್ರೀತಿ ಗಳಿಸಿದ್ದ ಅವರ ನಿಧನಕ್ಕೆ ಎಲ್ಲರೂ ಕಂಬನಿ ಮಿಡಿದಿದ್ದರು. ಇದೀಗ ಕೆಕೆ ಅವರ ಗೌರವಾರ್ಥವಾಗಿ ಅವರು ಹಾಡಿದ್ದ ಹಾಡೊಂದನ್ನು ರಿಲೀಸ್ ಮಾಡಲಾಗಿದೆ. ಇದು ಅವರು ಹಾಡಿರುವ ಕೊನೆಯ ಹಾಡೆಂದು ವರದಿಗಳು ಹೇಳಿವೆ. ಇನ್ನಷ್ಟೇ ತೆರೆಕಾಣಬೇಕಿರುವ ಚಿತ್ರವಾದ ‘ಶೆರ್ಡಿಲ್: ದಿ ಪಿಲಿಭಿತ್ ಸಾಗಾ’ದ ಹಾಡನ್ನು ಟಿ-ಸೀರೀಸ್ ಮತ್ತು ರಿಲಯನ್ಸ್ ಟಂಟರ್ಟೈನ್ಮೆಂಟ್ ರಿಲೀಸ್ ಮಾಡಿದೆ. ಪ್ರಸ್ತುತ ರಿಲೀಸ್ ಆಗಿರುವ ‘ಧೂಪ್ ಪಾನಿ ಬಹ್ನೆ ದೇ’ ಹಾಡಿಗೆ ಸಾಹಿತ್ಯ ಬರೆದಿರುವವರು ಗುಲ್ಜಾರ್. ಮತ್ತು ಸಂಗೀತ ನೀಡಿರುವವರು ಶಂತನು ಮೊಯಿತ್ರಾ. ಪ್ರಕೃತಿ ಮಾತೆಯನ್ನು ಉಳಿಸಲು ಮನವಿ ಮಾಡುವ ಸಾಹಿತ್ಯವನ್ನು ಹೊಂದಿರುವ ಅದ್ಭುತ ಹಾಡು ಇದಾಗಿದೆ. ಕೇಳುಗರು ಗುನುಗುವಂತಿರುವ ಈ ಹಾಡು ಇದೀಗ ಕೆಕೆ ಅಭಿಮಾನಿಗಳನ್ನು ಭಾವುಕರಾಗಿಸಿದೆ.
‘ಶೆರ್ಡಿಲ್’ ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ನೀರಜ್ ಕಬಿ, ಸಯಾನಿ ಗುಪ್ತಾ ಮೊದಲಾದವರು ನಟಿಸಿದ್ದಾರೆ. ಹಾಡನ್ನು ಕೇಳಿ ಅಭಿಮಾನಿಗಳು ಭಾವುಕರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ‘ಕೆಕೆ ಅವರ ಸ್ಥಾನ ತುಂಬಲು ಯಾರಿಗೂ ಸಾಧ್ಯವಿಲ್ಲ’ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.
ಅಭಿಮಾನಿಗಳ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ:
No one literally noo one can replace him.
King of MELODY #KK❤?
?? https://t.co/Qd4a0Kbw0J#DhoopPaaniBahneDe pic.twitter.com/VDDUC5F0hm
— अnkit चhoudhary (@itsAnkittt) June 6, 2022
Even the first song was written by Gulzar saab “Chhod aaye hum wo galiyaan” and the last one too “Dhoop pani bahne de”❤️❤️#gulzaarsaab#DhoopPaaniBahneDe #KKforever
— Krishna Sagar (@Krishna29081999) June 6, 2022
ಈ ಹಾಡಿಗೆ ಸಾಹಿತ್ಯ ಬರೆದಿರುವ ಖ್ಯಾತ ಸಾಹಿತಿ ಗುಲ್ಜಾರ್, ಕೆಕೆ ಅವರ ಅಗಲುವಿಕೆಯ ನೋವನ್ನು ತೋಡಿಕೊಂಡಿದ್ದಾರೆ. ‘ಇದು ಕೆಕೆ ಅವರ ಕೊನೆಯ ಹಾಡಾಗಿರುವುದು ಬಹಳ ದುಃಖದ ವಿಚಾರ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:29 am, Tue, 7 June 22