ಬಾಲಿವುಡ್ನಲ್ಲಿ ಸೋನಾಕ್ಷಿ ಸಿನ್ಹಾ (Sonakshi Sinha) ಬೇಡಿಕೆ ಕಳೆದುಕೊಂಡಿದ್ದಾರೆ. ಅವರಿಗೆ ಈಗ ಮೊದಲಿನಷ್ಟು ಬೇಡಿಕೆ ಉಳಿದಿಲ್ಲ. ಈ ವಿಚಾರದ ಬಗ್ಗೆ ಅವರಿಗೆ ಬೇಸರವಿದೆ. ಸ್ಟಾರ್ ಕಿಡ್ ಆದ ಹೊರತಾಗಿಯೂ ಸೋನಾಕ್ಷಿಗೆ ಆಫರ್ಗಳು ಬರುತ್ತಿಲ್ಲ. ಈಗ ಸೋನಾಕ್ಷಿ ಅವರು ಪ್ರೀತಿ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಜಹೀರ್ ಇಕ್ಬಾಲ್ ಜತೆ ಅವರು ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹೀಗಿರುವಾಗಲೇ ಸೋನಾಕ್ಷಿ ಹಾಗೂ ಜಹೀರ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.
ಸೋನಾಕ್ಷಿ ಸಿನ್ಹಾ ಸದ್ಯ, ‘ಡಬಲ್ ಎಕ್ಸ್ಎಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸೋನಾಕ್ಷಿ ನಾಯಕಿ ಆದರೆ, ಜಹೀರ್ ಹೀರೋ. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಇದನ್ನು ಸೋನಾಕ್ಷಿ ಬಹಿರಂಗಪಡಿಸಿಲ್ಲ. ಸೋನಾಕ್ಷಿ ಹಾಗೂ ಜಹೀರ್ ಒಟ್ಟಾಗಿ ನಿಂತಿದ್ದಾರೆ. ಈ ಫೋಟೋವನ್ನು ಸೋನಾಕ್ಷಿ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಅಭಿಮಾನಿ ವಲಯದಲ್ಲೂ ಸಾಕಷ್ಟು ವೈರಲ್ ಆಗುತ್ತಿದೆ. ಈ ಜೋಡಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಇತ್ತೀಚೆಗೆ ಜಹೀರ್ ಜನ್ಮದಿನ ಆಚರಿಸಿಕೊಂಡಿದ್ದರು. ಈ ವೇಳೆ ಸೋನಾಕ್ಷಿ ಉದ್ದನೆಯ ಸಾಲುಗಳನ್ನು ಬರೆದು ಬರ್ತ್ಡೇ ವಿಶ್ ಮಾಡಿದ್ದರು. ಅಲ್ಲದೆ, ಬೆಸ್ಟ್ ಫ್ರೆಂಡ್ ಎನ್ನುವ ವಿಚಾರವನ್ನು ಒತ್ತಿ ಹೇಳಿದ್ದರು. ಇದಕ್ಕೆ ಕಮೆಂಟ್ ಮಾಡಿದ್ದ ಜಹೀರ್, ‘ನಿಮ್ಮನ್ನು ನನ್ನ ನಾಯಕಿ ಎಂದು ಅಧಿಕೃತವಾಗಿ ಕರೆಯಬಹುದೇ’ ಎಂದಿದ್ದರು.
ನಟ ಶತ್ರುಘ್ನ ಸಿನ್ಹಾ ಹಾಗೂ ಪೂನಮ್ ಸಿನ್ಹಾ ಮಗಳು ಸೋನಾಕ್ಷಿ. ಸಲ್ಮಾನ್ ಖಾನ್ ನಟನೆಯ ‘ದಬಾಂಗ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರಿಗೆ ಸಾಲುಸಾಲು ಚಿತ್ರಗಳು ಸಿಕ್ಕವು. ಆದರೆ, ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಹೀಗಾಗಿ, ನಿರ್ಮಾಪಕರು ಅವರ ಮನೆಯ ಕದ ತಟ್ಟುತ್ತಿಲ್ಲ. ಇತ್ತೀಚೆಗೆ ತೆರೆಕಂಡ ಅವರ ನಟನೆಯ, ‘ಭುಜ್: ದಿ ಪ್ರೈಡ್ ಆಫ್ ಇಂಡಿಯಾ’ ಸಿನಿಮಾ ವಿಮರ್ಶೆಯಲ್ಲಿ ಸೋತಿದೆ. ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಸಾಲುಸಾಲು ಸಿನಿಮಾಗಳು ಫ್ಲಾಪ್ ಆಗುತ್ತಿರುವುದಕ್ಕೆ ವೃತ್ತಿ ಜೀವನಕ್ಕೆ ಹಿನ್ನಡೆ ಆಗುತ್ತಿದೆ.
ಇದನ್ನೂ ಓದಿ: Samantha: ಗರ್ಲ್ಸ್ ಗ್ಯಾಂಗ್ ಜತೆ ಸಮಂತಾ ಗೋವಾ ಟ್ರಿಪ್; ವೈರಲ್ ಆಯ್ತು ಫೋಟೋ
Published On - 3:51 pm, Tue, 28 December 21