ವೃದ್ಧಾಶ್ರಮಕ್ಕೆ ಹೊಸ ಸಿನಿಮಾದ ಕಲೆಕ್ಷನ್ ಹಣ ನೀಡಲಿರುವ ಸೋನು ಸೂದ್
ಸೋನು ಸೂದ್ ಅವರು ‘ಫತೇಹ್’ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರ ಪತ್ನಿ ಸೋನಾಲಿ ಈ ಚಿತ್ರದ ನಿರ್ಮಾಪಕಿ. ಜಾಕ್ವೆಲಿನ್ ಫರ್ನಾಂಡಿಸ್, ನಸೀರುದ್ಧೀನ್ ಶಾ, ವಿಜಯ್ ರಾಝ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಜ.10ರಂದು ಈ ಸಿನಿಮಾ ತೆರೆಕಾಣಲಿದೆ. ಸೈಬರ್ ಕ್ರೈಮ್ ಕುರಿತ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ.
ನಟ ಸೋನು ಸೂದ್ ಅವರು ಈಗಾಗಲೇ ಅನೇಕ ಜನಪರ ಕಾರ್ಯಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ. ಕೊವಿಡ್ ಕಾಲದಿಂದ ಶುರುವಾದ ಅವರ ಸಮಾಜಸೇವೆ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಹಾಗಾಗಿ ಜನರು ಅವರನ್ನು ರಿಯಲ್ ಹೀರೋ ಎನ್ನುತ್ತಾರೆ. ಈಗ ಸೋನು ಸೂದ್ ಅವರು ಇನ್ನೊಂದು ಪುಣ್ಯದ ಕಾರ್ಯ ಮಾಡಲು ಮುಂದಾಗಿದ್ದಾರೆ. ತಮ್ಮ ಹೊಸ ಸಿನಿಮಾದಿಂದ ಬರುವ ಬಾಕ್ಸ್ ಆಫೀಸ್ ಕಲೆಕ್ಷನ್ ಮೊತ್ತವನ್ನು ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ನೀಡುವುದಾಗಿ ಅವರು ಹೇಳಿದ್ದಾರೆ.
ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಸೋನು ಸೂದ್ ಅವರು ನಟಿಸಿ ಫೇಮಸ್ ಆಗಿದ್ದಾರೆ. ಅವರು ತೆರೆ ಮೇಲೆ ವಿಲನ್ ಪಾತ್ರ ಮಾಡಿದರೂ ರಿಯಲ್ ಲೈಫ್ನಲ್ಲಿ ನಿಜವಾದ ಹೀರೋ ಆಗಿದ್ದಾರೆ. ಎಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಬಡವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ. ಈಗ ಅವರು ‘ಫತೇಹ್’ ಚಿತ್ರದ ಕಲೆಕ್ಷನ್ ಹಣವನ್ನು ಕೂಡ ಬಿಟ್ಟುಕೊಡಲು ಸಿದ್ಧರಾಗಿದ್ದಾರೆ.
‘ಫತೇಹ್’ ಸಿನಿಮಾಗೆ ಸ್ವತಃ ಸೋನು ಸೂದ್ ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಸೈಬರ್ ಕ್ರೈಂ ಕುರಿತಾದ ಕಹಾನಿ ಈ ಸಿನಿಮಾದಲ್ಲಿ ಇದೆ. ಈ ಚಿತ್ರದ ಮೂಲಕ ಜನರಿಗೆ ಸೈಬರ್ ಸುರಕ್ಷತೆ ಬಗ್ಗೆ ಸಂದೇಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಕೊವಿಡ್ ಸಂದರ್ಭದಲ್ಲಿ ನಡೆದ ಸೈಬರ್ ವಂಚನೆಗಳನ್ನು ಆಧರಿಸಿ ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ.
ಇದನ್ನೂ ಓದಿ: ಮಹಾಕಾಳೇಶ್ವರ ದರ್ಶನ ಪಡೆದ ಬಹುಭಾಷಾ ನಟ ಸೋನು ಸೂದ್
ಸೋನು ಸೂದ್ ಅವರ ಜೊತೆ ಜಾಕ್ವೆಲಿನ್ ಫರ್ನಾಂಡಿಸ್, ವಿಜಯ್ ರಾಝ್, ನಸೀರುದ್ಧೀನ್ ಶಾ ಕೂಡ ‘ಫತೇಹ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜನವರಿ 10ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸೋನು ಸೂದ್ ಅವರ ಪತ್ನಿ ಸೊನಾಲಿ ಸೂದ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ದೇಶದ ಜನರಿಗಾಗಿ ನಾವು ಈ ಸಿನಿಮಾವನ್ನು ಮಾಡಿದ್ದೇವೆ. ಈ ಚಿತ್ರದ ಕಲೆಕ್ಷನ್ ಹಣವನ್ನು ನಾವು ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ಕಳಿಸಿ ಕೊಡಲು ಪ್ರಯತ್ನಿಸುತ್ತೇವೆ’ ಎಂದು ಸೋನು ಸೂದ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.