‘ಸ್ತ್ರೀ 2’ ಸಿನಿಮಾ ಸೂಪರ್​ ಹಿಟ್​; ಎರಡೇ ದಿನಕ್ಕೆ 125 ಕೋಟಿ ರೂಪಾಯಿ ಕಲೆಕ್ಷನ್​

ಹಾರರ್​ ಸಿನಿಮಾ ಇಷ್ಟಪಡುವ ಪ್ರೇಕ್ಷಕರಿಗೆ ‘ಸ್ತ್ರೀ 2’ ಸಿನಿಮಾ ಭರ್ಜರಿ ಮನರಂಜನೆ ನೀಡುತ್ತಿದೆ. ಉತ್ತಮ ವಿಮರ್ಶೆ ಪಡೆದಿರುವ ಈ ಚಿತ್ರಕ್ಕೆ ವಿಶ್ವಾದ್ಯಂತ ಸಖತ್​ ಕಲೆಕ್ಷನ್​ ಆಗುತ್ತಿದೆ. ವರದಿಗಳ ಪ್ರಕಾರ ಈ ಸಿನಿಮಾ 2 ದಿನಗಳಲ್ಲಿ 125 ಕೋಟಿ ರೂಪಾಯಿ ಗಳಿಸಿದೆ. ಇದರಿಂದ ಶ್ರದ್ಧಾ ಕಪೂರ್​ ಹಾಗೂ ರಾಜ್​ಕುಮಾರ್​ ರಾವ್​ ಅವರಿಗೆ ಸೂಪರ್ ಸಕ್ಸಸ್​ ಸಿಕ್ಕಿದೆ.

‘ಸ್ತ್ರೀ 2’ ಸಿನಿಮಾ ಸೂಪರ್​ ಹಿಟ್​; ಎರಡೇ ದಿನಕ್ಕೆ 125 ಕೋಟಿ ರೂಪಾಯಿ ಕಲೆಕ್ಷನ್​
‘ಸ್ತ್ರೀ 2’ ಸಿನಿಮಾ ಪೋಸ್ಟರ್​

Updated on: Aug 17, 2024 | 4:00 PM

ಹಿಂದಿ ಚಿತ್ರರಂಗಕ್ಕೆ ಮತ್ತೆ ಹೊಸ ಚೈತನ್ಯ ಬಂದಿದೆ. ಹಾರರ್​ ಕಹಾನಿ ಇರುವ ‘ಸ್ತ್ರೀ 2’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಈ ಸಿನಿಮಾದಲ್ಲಿ ಶ್ರದ್ಧಾ ಕಪೂರ್​, ರಾಜ್​ಕುಮಾರ್​ ರಾವ್​, ಅಭಿಷೇಕ್​ ಬ್ಯಾನರ್ಜಿ, ಪಂಕಜ್​ ತ್ರಿಪಾಠಿ ಮುಂತಾದವರು ನಟಿಸಿದ್ದಾರೆ. ದೆವ್ವದ ಕಥೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಹಾಗಾಗಿ ಈ ಸಿನಿಮಾ ಅನೇಕ ಕಡೆಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಕೇವಲ ಎರಡೇ ದಿನಕ್ಕೆ ವಿಶ್ವಾದ್ಯಂತ ಈ ಸಿನಿಮಾ ಬರೋಬ್ಬರಿ 125 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂಬುದು ವಿಶೇಷ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

ಆಗಸ್ಟ್​ 15ರಂದು ಸ್ವಾತಂತ್ರ ದಿನಾಚರಣೆ ಪ್ರಯುಕ್ತ ‘ಸ್ತ್ರೀ 2’ ಸಿನಿಮಾ ಬಿಡುಗಡೆ ಆಯಿತು. ರಜೆ ದಿನ ಆದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬಂದು ಸಿನಿಮಾ ನೋಡಿದರು. ಅಲ್ಲದೇ ಮರುದಿನ (ಆಗಸ್ಟ್​ 16) ವರಮಹಾಲಕ್ಷ್ಮಿ ಹಬ್ಬ ಕೂಡ ಇದ್ದರಿಂದ ಅದು ಸಹ ಸಿನಿಮಾಗೆ ಜನಸಾಗರ ಹರಿದುಬಂದಿದೆ. ಇದರಿಂದಾಗಿ ಸಿನಿಮಾದ ಕಲೆಕ್ಷನ್​ ಚೆನ್ನಾಗಿ ಆಗಿದೆ. ವೀಕೆಂಡ್​ನಲ್ಲಿ ಸಹ ಈ ಚಿತ್ರಕ್ಕೆ ಹೆಚ್ಚಿನ ಕಲೆಕ್ಷನ್ ಆಗುವ ನಿರೀಕ್ಷೆ ಇದೆ.

‘ಸ್ತ್ರೀ 2’ ಸಿನಿಮಾಗೆ ಅಮರ್​ ಕೌಶಿಕ್​ ಅವರು ನಿರ್ದೇಶನ ಮಾಡಿದ್ದಾರೆ. ತಮನ್ನಾ ಭಾಟಿಯಾ, ವರುಣ್​ ಧವನ್​ ಅವರು ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಬಂದಿದ್ದ ‘ಸ್ತ್ರೀ’ ಸಿನಿಮಾದ ಮುಂದುವರಿದ ಕಥೆ ‘ಸ್ತ್ರೀ 2’ ಚಿತ್ರದಲ್ಲಿ ಇದೆ. ‘ಸ್ತ್ರೀ’ ನೋಡಿ ಮೆಚ್ಚಿಕೊಂಡಿದ್ದ ಪ್ರೇಕ್ಷಕರು ಈಗ ಸೀಕ್ವೆಲ್​ ನೋಡಲು ಆಸಕ್ತಿ ತೋರಿಸುತ್ತಿದ್ದಾರೆ. ಈ ಸಿನಿಮಾದಿಂದ ರಾಜ್​ಕುಮಾರ್, ಶ್ರದ್ಧಾ ಕಪೂರ್​ ಅವರಿಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ.

ಇದನ್ನೂ ಓದಿ: ಪೋಸ್ಟರ್​ ಕಾಪಿ ಮಾಡಿ ಸಿಕ್ಕಿಬಿದ್ದ ‘ಸ್ತ್ರೀ 2’ ಸಿನಿಮಾ; ಬಿಡುಗಡೆಗೂ ಮೊದಲೇ ನೆಗೆಟಿವ್​?

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಾಲಿವುಡ್​ನಲ್ಲಿ ಮೂರು ಸಿನಿಮಾಗಳು ಬಿಡುಗಡೆ ಆದವು. ಅಕ್ಷಯ್​ ಕುಮಾರ್​ ನಟನೆ ‘ಖೇಲ್​ ಖೇಲ್​ ಮೇ’, ಜಾನ್​ ಅಬ್ರಾಹಂ ನಟನೆಯ ‘ವೇದಾ’ ಸಿನಿಮಾಗಳ ಕೂಡ ತೆರೆಕಂಡವು. ಆ ಚಿತ್ರಗಳ ಜೊತೆಗೆ ‘ಸ್ತ್ರೀ 2’ ಸಿನಿಮಾ ಪೈಪೋಟಿ ನೀಡುತ್ತಿದೆ. ಅಂತಿಮವಾಗಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಎಲ್ಲ ಕಡೆಗಳಲ್ಲಿ ಈ ಸಿನಿಮಾಗೆ ಉತ್ತಮ ವಿಮರ್ಶೆ ಸಿಗುತ್ತಿದೆ. ನಟಿ ಕಂಗನಾ ರಣಾವತ್​ ಕೂಡ ಈ ಸಿನಿಮಾದ ಕಲೆಕ್ಷನ್​ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದರಿಂದಾಗಿ ಸಿನಿಮಾಗೆ ಇನ್ನಷ್ಟು ಬಲ ಸಿಕ್ಕಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us