ಪ್ರೇಯಸಿ ಜತೆ ಗಣಪತಿ ದರ್ಶನಕ್ಕೆ ಬಂದ ಗೋವಿಂದ: ಪತ್ನಿ ಸುನೀತಾ ಪ್ರತಿಕ್ರಿಯೆ

ಪತ್ನಿಯ ಜೊತೆ ಬಂದು ಗಣೇಶನ ದರ್ಶನ ಪಡೆಯಬೇಕಿದ್ದ ನಟ ಗೋವಿಂದ ಅವರು ನಟಿ ಕೋಮಲ್ ರಾಣಿ ಜೊತೆ ಆಗಮಿಸಿರುವುದು ಚರ್ಚೆಗೆ ಕಾರಣ ಆಗಿದೆ. ಕೋಮಲ್ ರಾಣಿ ಮತ್ತು ಗೋವಿಂದ ಒಟ್ಟಿಗೆ ಆಗಮಿಸಿದ ವಿಡಿಯೋ ವೈರಲ್ ಆದ ಬಳಿಕ ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರೇಯಸಿ ಜತೆ ಗಣಪತಿ ದರ್ಶನಕ್ಕೆ ಬಂದ ಗೋವಿಂದ: ಪತ್ನಿ ಸುನೀತಾ ಪ್ರತಿಕ್ರಿಯೆ
Sunita Ahuja, Govinda, Komal Rani

Updated on: Sep 23, 2026 | 7:38 PM

ಬಾಲಿವುಡ್ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ ಅವರ ವೈಯಕ್ತಿಕ ಜೀವನದ ಶೀತಲ ಸಮರ ಮತ್ತೆ ಸುದ್ದಿಯಲ್ಲಿದೆ. ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಗಣಪತಿಯ ದರ್ಶನಕ್ಕೆ ಈ ದಂಪತಿ ಪ್ರತ್ಯೇಕವಾಗಿ ಆಗಮಿಸಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಂಗಳವಾರ (ಸೆಪ್ಟೆಂಬರ್ 22) ಬೆಳಿಗ್ಗೆ ಸುನೀತಾ ಅಹುಜಾ ಅವರು ಏಕಾಂಗಿಯಾಗಿ ಬಂದು ಗಣೇಶನ ದರ್ಶನ ಪಡೆದಿದ್ದರೆ, ಅದೇ ದಿನ ಸಂಜೆ ನಟ ಗೋವಿಂದ ಅವರು ನಟಿ ಕೋಮಲ್ ರಾಣಿ ಜೊತೆ ಆಗಮಿಸಿ ಪೂಜೆ ಸಲ್ಲಿಸಿದರು. ಈ ಘಟನೆಯ ಬೆನ್ನಲ್ಲೇ, ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದ ಸುನೀತಾ ಅಹುಜಾ ಅವರು ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಮ್ಮ ಸಾಕು ನಾಯಿಯನ್ನು ಹಿಡಿದುಕೊಂಡು ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳೊಂದಿಗೆ ಮಾತನಾಡಿದ ಸುನೀತಾ, ‘ಮನುಷ್ಯರಿಗೆ ಎಷ್ಟೇ ಪ್ರೀತಿ ಕೊಟ್ಟರೂ ಪ್ರಯೋಜನವಿಲ್ಲ. ಅವರು ಕೊನೆಗೆ ದ್ರೋಹವನ್ನೇ ಎಸಗುತ್ತಾರೆ. ಆದರೆ ಪ್ರಾಣಿಗಳನ್ನು ಪ್ರೀತಿಸಿ, ಅವು ಯಾವಾಗಲೂ ನಮ್ಮೊಂದಿಗಿರುತ್ತವೆ. ಮನುಷ್ಯರಿಗಿಂತ ಪ್ರಾಣಿಗಳೇ ಎಷ್ಟೋ ಮೇಲು. ಪ್ರಾಣಿಗಳನ್ನು ಪ್ರೀತಿಸಿ, ಮನುಷ್ಯರನ್ನಲ್ಲ. ಮನುಷ್ಯರು ಮೋಸಗಾರರು’ ಎಂದು ಪರೋಕ್ಷವಾಗಿ ಗೋವಿಂದಗೆ ಸುನೀತಾ ಅಹುಜಾ ಟಾಂಗ್ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸುನೀತಾಗೆ ಬೆಂಬಲ:

ಸುನೀತಾ ಅಹುಜಾ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅವರ ಪರವಾಗಿ ಕಮೆಂಟ್ ಮಾಡುತ್ತಿದ್ದಾರೆ. ‘ಗಂಡ ಬೇರೊಬ್ಬ ಮಹಿಳೆಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಗಟ್ಟಿಯಾಗಿ ನಿಲ್ಲುವುದು ಸುಲಭದ ಮಾತಲ್ಲ. ಸುನೀತಾ ನಿಜಕ್ಕೂ ಧೈರ್ಯವಂತೆ’ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಹಿಂದೆಯೂ ಸಹ ಗೋವಿಂದ ಹಾಗೂ ಕೋಮಲ್ ರಾಣಿ ನಡುವಿನ ಸಂಬಂಧದ ಬಗ್ಗೆ ಸುನೀತಾ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ವಿಚ್ಛೇದನಕ್ಕೆ ಅರ್ಜಿ ಹಾಕಿ, ನಂತರ ವಾಪಸ್ ಪಡೆದ ಗೋವಿಂದ ಪತ್ನಿ ಸುನೀತಾ ಅಹುಜಾ

ಇತ್ತೀಚೆಗೆ ಸುನೀತಾ ಅಹುಜಾ ಅವರು ತಮ್ಮ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದರು ಎನ್ನಲಾಗಿದ್ದು, ಗೋವಿಂದ ಅವರ ಮ್ಯಾನೇಜರ್ ಎರಡನೇ ಮದುವೆಯ ವದಂತಿಗಳನ್ನು ತಳ್ಳಿಹಾಕಿದ್ದರು. ಆದಾಗ್ಯೂ, ಗಣೇಶ ಹಬ್ಬದ ಶುಭ ಸಂದರ್ಭದಲ್ಲೇ ದಂಪತಿಯ ನಡುವಿನ ಈ ಬಿರುಕು ಮತ್ತೆ ಮುನ್ನೆಲೆಗೆ ಬಂದಿದೆ.

ಕೋಮಲ್ ರಾಣಿ ಮತ್ತು ಗೋವಿಂದ ಅವರು ಜೋಡಿಯಾಗಿ ಸಿನಿಮಾ ಮಾಡುತ್ತಿದ್ದಾರೆ. ಅದನ್ನೇ ನೆಪವಾಗಿಸಿಕೊಂಡು ಅವರು ಅನೇಕ ಕಡೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರಿಬ್ಬರ ನಡುವೆ ಸಂಬಂಧ ಬೆಳೆದಿದೆ ಎಂಬ ವದಂತಿ ಹಬ್ಬಿದೆ. ಕೋಮಲ್ ಜೊತೆ ಗೋವಿಂದ ಸುತ್ತಾಡುತ್ತಿರುವುದನ್ನು ಅವರ ಪತ್ನಿ ಸುನೀತಾ ಅಹುಜಾ ಖಂಡಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us